ಗುಡುಗಳಲೆ ಜಾತ್ರಾ ಮೈದಾನ: ಆರೋಗ್ಯ ಉಚಿತ ತಪಾಸಣಾ ಶಿಬಿರ

| Published : Feb 10 2024, 01:53 AM IST

ಗುಡುಗಳಲೆ ಜಾತ್ರಾ ಮೈದಾನ: ಆರೋಗ್ಯ ಉಚಿತ ತಪಾಸಣಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಗುಡುಗಳಲೆ ಜಯದೇವ ಜಾನುವರು ಜಾತ್ರಾ ಸಮಿತಿ ಮತ್ತು ಶನಿವಾರಸಂತೆಯ ಚೇತನ್ ಡಯಾಗೋನ್ನೀಸ್ಟಿಕ್ ಲ್ಯಾಬೊರೇಟರಿ ಹಾಗೂ ಚನ್ನರಾಯಪಟ್ಟಣದ ಜನಪ್ರಿಯ ರಕ್ತ ಶೇಖರಣಾ ಕೇಂದ್ರ ಮತ್ತು ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಗುಡುಗಳಲೆ ಜಯದೇವ ಜಾನುವಾರು ಜಾತ್ರೆಯ ಕೊನೆಯ ದಿನದ ಅಂಗವಾಗಿ ಶುಕ್ರವಾರ ಜಾತ್ರಾ ಮೈದಾನದಲ್ಲಿ ಸ್ವಯಂ ಪ್ರೇರಿತ ರಕ್ತದಾನ, ರಕ್ತದೊತ್ತಡ ಪರೀಕ್ಷೆ, ನೇತ್ರ ಪರೀಕ್ಷೆ, ಶುಗರ್ ಪರೀಕ್ಷೆ ಸಹಿತ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಗುಡುಗಳಲೆ ಜಯದೇವ ಜಾನುವರು ಜಾತ್ರಾ ಸಮಿತಿ ಮತ್ತು ಶನಿವಾರಸಂತೆಯ ಚೇತನ್ ಡಯಾಗೋನ್ನೀಸ್ಟಿಕ್ ಲ್ಯಾಬೊರೇಟರಿ ಹಾಗೂ ಚನ್ನರಾಯಪಟ್ಟಣದ ಜನಪ್ರಿಯ ರಕ್ತ ಶೇಖರಣಾ ಕೇಂದ್ರ ಮತ್ತು ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಇದರ ಜೊತೆಯಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಲಾವರು ಮಂದಿ ರಕ್ತದಾನ ಮಾಡಿದರೆ ಹಲವಾರು ಮಂದಿ ಕಣ್ಣಿನ ತಪಾಸಣೆ, ರಕ್ತದೊತ್ತಡ, ಶುಗರ್ ಪರೀಕ್ಷೆ ಮಾಡಿಸಿಕೊಂಡರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಗತ್ಯ ಇದ್ದವರಿಗೆ ಉಚಿತ ಔಷಧಿ ವಿತರಿಸಲಾಯಿತು.

ಶಿಬಿರದಲ್ಲಿ ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಮತ್ತು ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಬಿ.ಸಕ್ಷಿ, ಡಾ.ಉಮರ್ ಫರೂರ್ ನೇತೃತ್ವದಲ್ಲಿ ಸಿಬ್ಬಂದಿ ಶೈಫಾ ಫೈಬೀನಾ, ಸಿಬ್ರನ್ ಬಾನು ಕಣ್ಣಿನ ಪರೀಕ್ಷೆ ನಡೆಸಿದರು. ಶಿಬಿರದಲ್ಲಿ ಲ್ಯಾಬ್ ಟೆಕ್ನಿಶಿಯನ್ ವಿಭಾಗದ ಸಿಬ್ಬಂದಿ ಭರತ್, ಚೈತ್ರ, ಹೇಮಾ, ಭುವನಾ, ಪ್ರಜ್ವಲ್, ಮಾನಸ, ಚೇತನ್ ರೋಗಿಗಳ ತಪಾಸಣೆ ನಡೆಸಿದರು.

ಶಿಬಿರದ ಪ್ರಾಯೋಜಕ ಶನಿವಾರಸಂತೆ ಚೇತನ್ ಡಯಾಗ್ನೋಸ್ಟಿಕ್ ಲ್ಯಾಬೊರೇಟಿಯ ಚೇತನ್, ಜಾತ್ರಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಗುಡ್ಡೆಹೊಸೂರಿನಲ್ಲಿ ಸಂವಿಧಾನ ರಥಕ್ಕೆ ಭವ್ಯ ಸ್ವಾಗತ:

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ ಸಂವಿಧಾನ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸಂವಿಧಾನ ರಥವನ್ನು ಪೂಜಾ ಕೈಂಕರ್ಯಗಳೊಂದಿಗೆ ಬರಮಾಡಿಕೊಂಡರು.

ಬಸವನಹಳ್ಳಿ ಜಂಕ್ಷನ್ ನಿಂದ ಗುಡ್ಡೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದವರೆಗೆ ಕಳಶ ಹೊತ್ತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳ ಜೊತೆಗೆ , ಬೈಕ್ ರಾಲಿ, ಪೂಜಾ ಕುಣಿತ, ವಾದ್ಯ ಗೋಷ್ಠಿಗಳ ಹಿಮ್ಮೆಳದೊಂದಿಗೆ ಹಾದಿಯುದ್ದಕ್ಕೂ ಪುಷ್ಪಾರ್ಚನೆ ಸಹಿತವಾಗಿ ರಥವನ್ನು ಸ್ವಾಗತಿಸಲಾಯಿತು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಾಗತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿವಿಧ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಸಂಗೀತ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶಾಲಾ ಮಕ್ಕಳು ಸಂವಿಧಾನ ಜಾಗೃತಿ ಕುರಿತ ನಾಟಕ- ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.