ಕನ್ನಡಪ್ರಭ ವಾರ್ತೆ ಮಡಿಕೇರಿ

ಬಸವ ಜಯಂತಿ, ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ 250 ವರ್ಷ ಕೊಡಗನ್ನಾಳಿದ ಹಾಲೇರಿ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ(ಕಲ್ಯಾಣಸ್ವಾಮಿ) ಅವರ ಸಂಸ್ಮರಣೋತ್ಸವ ಕಾರ್ಯಕ್ರಮ ಜೂ.13 ರ ಶನಿವಾರ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ನಡೆಯಲಿದೆ ಎಂದು ಮನೆಹಳ್ಳಿಮಠದ ತಪೋಕ್ಷೇತ್ರ ಮಹಾಂತ ಶಿವಲಿಂಗ ಮಹಾಸ್ವಾಮಿ ಹೇಳಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.ಅಂದು ಬೆಳಗ್ಗೆ 8 ಗಂಟೆಗೆ ಮಧ್ಯಪೇಟೆ ಶ್ರೀ ಗಣಪತಿ ದೇವಾಲಯದಿಂದ ಗುಡುಗಳಲೆ ಜಾತ್ರಾ ಮೈದಾನದವರೆಗೆ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ, ಮನೆಹಳ್ಳಿಮಠದ ಕರ್ತೃಗಳಾದ ಅನಘ ನಿರಂಜನ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿಯವರ, ಪ್ರಸ್ತುತ ಕೊಡಗಿನ ವೀರಶೈವ ಲಿಂಗಾಯತ ಮಠಗಳ ಲಿಂಗೈಕ್ಯ ಪೂಜ್ಯರುಗಳ ಹಾಲೇರಿ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪನವರ ಭಾವಚಿತ್ರದೊಂದಿಗೆ, ಕಳಸ-ಕನ್ನಡಿ, ಷಟಸ್ಥಲ ಧ್ವಜ, ವಾದ್ಯ-ವೈಭವಗಳೊಂದಿಗೆ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಕೊಡಗಿನ ವೀರಶೈವ ಸಭಾ ಮಂಟಪದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತುಮಕೂರು ಸಿದ್ಧಗಂಗಾ ಮಠದ ಕಿರಿಯ ಪೂಜ್ಯ ಶಿವ ಸಿದ್ಧೇಶ್ವರ ಸ್ವಾಮಿಗಳ ದಿವ್ಯಾ ಸಾನಿಧ್ಯದಲ್ಲಿ ವಿರಾಜಪೇಟೆ ಅರಮೇರಿ ಕಳಂಚೇರಿಮಠದ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಮಹಾಸ್ವಾಮಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಮಹಾಸ್ವಾಮಿ, ಕಿರಿಕೊಡ್ಲಿಮಠದ ಸದಾಶಿವ ಮಹಾಸ್ವಾಮಿ, ಶಿಡಿಗಳಲೆಮಠದ ಇಮ್ಮಡಿ ಶಿವಲಿಂಗ ಮಹಾಸ್ವಾಮಿ, ತೊರೆನೂರು ವಿರಕ್ತಮಠದ ಮಲ್ಲೇಶ ಮಹಾಸ್ವಾಮಿ, ಮುಳ್ಳೂರು ಸ್ವತಂತ್ರ ಬಸವಲಿಂಗ ಮಹಾಸ್ವಾಮಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ, ಮನೆಹಳ್ಳಿಮಠದ ತಪೋಕ್ಷೇತ್ರ ಮಹಾಂತ ಶಿವಲಿಂಗ ಮಹಾಸ್ವಾಮಿ, ಕಲ್ಲಳ್ಳಿಮಠದ ರುದ್ರಮುನಿ ಮಹಾಸ್ವಾಮಿ ಹಾಗೂ ಸೋಮವಾರಪೇಟೆ ವಿರಕ್ತಮಠದ ನಿಶ್ಚಲ ನಿರಂಜನ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಸಭೆ ಆರಂಭವಾಗಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ವಹಿಸಲಿದ್ದಾರೆ. ಅ.ಭಾ.ವೀ.ಶೈ.ಲಿಂ ರಾಜ್ಯಧ್ಯಕ್ಷ ಶಂಕರ ಬಿದರಿ ಮತ್ತು ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಾ.ಮಂತರ ಗೌಡ ಭಾವಚಿತ್ರ ಅನಾವರಣ ಮಾಡಲಿದ್ದಾರೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಅ.ಭಾ.ವೀ.ಲಿ ಮಹಾಸಭಾ ರಾಷ್ಟ್ರೀಯ ಯುವ ಘಟಕ ಅಧ್ಯಕ್ಷ ವೆಂಕಟ್ ರೆಡ್ಡಿ ಪಾಟೀಲ್, ಹಿರಿಯ ನ್ಯಾಯವಾದಿ ಎಚ್.ಎಸ್.ಚಂದ್ರಮೌಳಿ, ಮಾಹಿತಿ ಹಕ್ಕು ನಿವೃತ್ತ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ, ಅ.ಭಾ.ವೀ.ಲಿ ಮೋಕ್ಷಿರಾಜ್, ಚಲನಚಿತ್ರ ನಟ ಡಾಲಿ ಧನಂಜಯ, ಮಾಜಿ ಶಾಸಕ ಅಪ್ಪಚ್ಚುರಂಜನ್, ಅ.ಭಾ.ವೀ.ಮಹಾಸಭಾ ಯುವ ಘಟಕದ ಅಧ್ಯಕ್ಷ ಡಿ.ಯು.ಕಿರಣ್, ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುದ್ದಿನ ಕಟ್ಟೆ ಮಠದ ಹಿರಿಯ ಶ್ರೀಗಳಾದ ಸಿದ್ಧವೀರ ಶಿವಚಾರ್ಯ ಮಹಾಸ್ವಾಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕ ಅಧ್ಯಕ್ಷ ಮೋಕ್ಷಿತ್ ರಾಜ್, ಉಪಾಧ್ಯಕ್ಷ ಮಾಯಮುಡಿ ಸುರೇಶ್, ಖಜಾಂಚಿ ಸಿ.ಭರತ್, ಕಾರ್ಯದರ್ಶಿ ಸಿ.ಎಂ.ಸೋಹನ್ ಸುದ್ದಿಗೋಷ್ಠಿಯಲ್ಲಿ ಇದ್ದರು.