ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು: ನಿರಾಣಿ

| Published : Dec 22 2023, 01:30 AM IST

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು: ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜಿಲ್ಲಾಡಳಿತ ಭವನದ ಮುಂದೆ ಸತತ 27 ದಿನಗಳಿಂದ ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ವಿಪ ಸದಸ್ಯ ಹಣಮಂತ ನಿರಾಣಿ ಅವರು, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ಈ ಕೂಡಲೇ ಸರ್ಕಾರ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ಈ ಕೂಡಲೇ ಸರ್ಕಾರ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಮುಂದೆ ಸತತ 27 ದಿನಗಳಿಂದ ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.

ನಾನು ಶಾಸಕನಾದಾಗಿನಿಂದಲೂ ಸದನ ಒಳಗೆ ಮತ್ತು ಹೊರಗೆ ಅತಿಥಿ ಉಪನ್ಯಾಸಕರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಸೇವಾ ಭದ್ರತೆ ಕುರಿತು ಸದನದ ಗಮನ ಸೆಳೆದಿರುವೆ. ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಅವರು, ಈ ಕೂಡಲೆ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗೂ ಕಾಯಂಮಾತಿ ಆದೇಶ ಪತ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಅತಿಥಿ ಉಪನ್ಯಾಸಕ ಸಂಘದ ಸದಸ್ಯರಾದ ಡಾ.ಚಂದ್ರಶೇಖರ ಕಾಳನ್ನವರ, ಪ್ರೊ.ಸಂಗಮೇಶ ಬ್ಯಾಳಿ, ಬಸವರಾಜ ಮಣಿಗಾರ, ಪಾಂಡುರಂಗ ಜಾಧವ, ಭಾರತಿ ರಾಥೋಡ. ನಾಗಯ್ಯ ಜ್ಯೋತಪ್ಪನ್ನವರ, ಡಾ.ಮನೊಹರ ಪುಜಾರ, ಪ್ರೊ.ಸಂತೋಷ ಕಳ್ಳಿಮನಿ, ಶಶಿಧರ ಪುಜಾರ, ಸುನೀಲ ಮಠಪತಿ, ಸಂತೋಷ ಕಾಳನ್ನವರ ಸೇರಿದಂತೆ ಮುಧೋಳ, ಹೊನ್ನೂರ, ರಬಕವಿ-ಬನಹಟ್ಟಿ, ತೇರದಾಳ, ಬಾಗಲಕೋಟೆ, ನವನಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಇದ್ದರು.