ಸಾರಾಂಶ
ಕನ್ನಡಪ್ರಭ ವಾರ್ತೆ ಕೆರೂರ
ನಾಟಕಗಳು ದಣಿದ ಮನಸಿಗೆ ಚೈತನ್ಯ ನೀಡಿ ಉತ್ತಮ ಬದುಕಿನ ಮಾರ್ಗದರ್ಶನ ನೀಡುವ ರೂಪಕಗಳು ಎಂದು ನ್ಯಾಯವಾದಿ ಸಂಗಮೇಶ ಹೂಲಿ ಹೇಳಿದರು.ಅವರು ಕೆರೂರ ಸಮೀಪದ ಮತ್ತೀಕಟ್ಟಿ ಗ್ರಾಮದ ಶ್ರೀಮಾರುತೇಶ್ವರ ಜಾತ್ರಾ ನಿಮಿತ್ತವಾಗಿ ಹೊಸಕೋಟೆ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ಆಯೋಜಿಸಿದ ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.
ಕೆರೂರಿನ ಪಿ.ಕೆ.ಪಿ.ಎಸ್ ನಿರ್ದೇಶಕ ಚನ್ನಮಲ್ಲಪ್ಪ ಘಟ್ಟದ ಮಾತನಾಡಿ, ಭಾರತದ ನಾಗರಿಕತೆ ಬಿಂಬಿಸುವ ನಾಟಕಗಳು ಇಂದಿನ ಅಧುನಿಕ ಯುಗದಲ್ಲಿ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಸನ್ಮಾರ್ಗ ಪ್ರದರ್ಶಿಸುವ ನಾಟಕಗಳು ಉಳಿದು ಬೆಳೆಯಬೇಕಾಗಿದ್ದು ನಾವೆಲ್ಲರು ಅದಕ್ಕೆ ಕೈ ಜೋಡಿಸೋಣ ಎಂದು ಹೇಳಿದರು.ಕಲಾವಿದ ಗೋಪಾಲ ನಾಯ್ಕ ಮಾತನಾಡಿ, ಕಲೆ ಕಲಾವಿದ ಉಳಿಯಬೇಕಾದರೆ ಕಲಾವಿದರಿಗೆ ಸರ್ಕಾರ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ನಾಟಕ ಪ್ರದರ್ಶಿಸಿದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೆಂಕಪ್ಪ ಪೂಜಾರ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರೆ ಚನ್ನಮಲ್ಲಪ್ಪ ಘಟ್ಟದ ರಿಬ್ಬನ್ ಕಟ್ಟ ಮಾಡಿದರು. ಕಲಾವಿದ ಗೋಪಾಲ ನಾಯ್ಕ ಬಲೂನ ಹಾರಿಸಿ ನಾಟಕಕ್ಕೆ ಚಾಲನೆ ನೀಡಿದರು. ಸ್ವಾಗತ, ನಿರೂಪಣೆ, ವಂದನಾರ್ಪಣೆ ಸುರೇಶ ಹೂಲಗೇರಿ, ರಾಮು ಮತ್ತೀಕಟ್ಟಿ, ಮಲ್ಲು ಕಂಟೆಪ್ಪನವರ ನಡೆಸಿಕೊಟ್ಟರು. ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಗಣೇಶ ಅರಹುಣಸಿ, ಬಸವರಾಜ ಬನ್ನಿದಿನ್ನಿ, ಹನಮಂತಗೌಡ ಪಾಟೀಲ, ಡೋಂಗ್ರಿಸಾಬ ನದಾಪ್, ರಾಚಪ್ಪ ಬನ್ನಿದಿನ್ನಿ ಸೇರಿದಂತೆ ಅನೇಕ ಗಣ್ಯರು ಇದ್ದರು.