ವಾಣಿಜ್ಯೋದ್ಯಮ ಪ್ರಗತಿಗೆ ಮಾರ್ಗಸೂಚಿ ಬಜೆಟ್: ಬಾಲಕೃಷ್ಣ

| Published : Feb 02 2025, 01:03 AM IST

ಸಾರಾಂಶ

ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಬೆಳವಣಿಗೆಗೆ ಕೇಂದ್ರ ಬಜೆಟ್ ಮಾರ್ಗಸೂಚಿಯಾಗಿದೆ. ಕಾರ್ಮಿಕ ಕೇಂದ್ರಿತ ವಲಯಗಳಿಗೆ ಒತ್ತು ನೀಡಿರುವುದರಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ರಫ್ತು ಹೆಚ್ಚಿಸುತ್ತದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಬೆಳವಣಿಗೆಗೆ ಕೇಂದ್ರ ಬಜೆಟ್ ಮಾರ್ಗಸೂಚಿಯಾಗಿದೆ. ಕಾರ್ಮಿಕ ಕೇಂದ್ರಿತ ವಲಯಗಳಿಗೆ ಒತ್ತು ನೀಡಿರುವುದರಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ರಫ್ತು ಹೆಚ್ಚಿಸುತ್ತದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ₹5 ಕೋಟಿಯಿಂದ ₹10 ಕೋಟಿವರೆಗೆ ಸಾಲ ಸೌಲಭ್ಯ ವಿಸ್ತರಣೆ ಹಾಗೂ ನವೋದ್ಯಮಗಳಿಗೆ 10 ರಿಂದ 20 ಕೋಟಿ ರು.ವರೆಗೆ ಬೃಹತ್ ಸಾಲದ ಗ್ಯಾರಂಟಿ ನೀಡಿರುವುದರಿಂದ ಸಣ್ಣ ಉದ್ಯಮಗಳು ಕಾರ್ಯಾಚರಣೆ ವಿಸ್ತರಣೆಗೆ ಸಹಾಯಕವಾಗುತ್ತದೆ. ಸೂಕ್ಷ್ಮ ಉದ್ಯಮಗಳಿಗೆ ₹5 ಲಕ್ಷದವರೆಗಿನ ಕ್ರೆಡಿಟ್ ಕಾರ್ಡ್‌ ಪರಿಚಯ, ನವೋದ್ಯಮಗಳಿಗೆ ₹10 ಸಾವಿರ ಕೋಟಿಯಷ್ಟು ಹೆಚ್ಚುವರಿ ನಿಧಿಯು ನಾವೀನ್ಯತೆ ಹಾಗೂ ಸ್ಟಾರ್ಟಪ್‌ಗಳಿಗೆ ಕೊಡುಗೆ ನೀಡಲಿದೆ. ಮಹಿಳೆಯರು ಮತ್ತು ಹಿಂದುಳಿದ ಸಮುದಾಯದವರ ಉದ್ಯಮಗಳಿಗೆ 2 ಕೋಟಿ ರು. ಸಾಲ ನೀಡುವುದು ಉದ್ಯಮಗಳ ಸಮಗ್ರ ಬೆಳವಣಿಗೆಗೆ ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.

====

ಕೋಟ್‌)

ಮಧ್ಯಮ ವರ್ಗಕ್ಕೆ ಆರ್ಥಿಕ ಬಲವಾರ್ಷಿಕ ₹12ಲಕ್ಷ ಆದಾಯದ ಮಧ್ಯಮ ವರ್ಗ ಆದಾಯ ತೆರಿಗೆಯ ಚಿಂತೆಯಿಂದ ಮುಕ್ತರಾಗಲಿದ್ದು, ಇದು ಹೆಚ್ಚಿನ ವಹಿವಾಟಿಗೂ ದಾರಿ ಮಾಡಿಕೊಡಲಿದೆ. ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ಲಭ್ಯ, ಪರಿಸರ ಸ್ನೇಹಿ ಸಾರಿಗೆ, ಪ್ರವಾಸೋದ್ಯಮ ಬೆಳವಣಿಗೆಗೆ ಬಜೆಟ್‌ ಪೂರಕವಾಗಿದೆ. ಟಾಪ್ 50 ಪ್ರವಾಸಿಸ್ಥಾನಗಳ ಅಭಿವೃದ್ಧಿ, ವಿಮಾನ ನಿಲ್ದಾಣ ನವೀಕರಣ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಉತ್ತೇಜನಕಾರಿಯಾಗಿದೆ.

-ವಿನೀತ್‌ ವರ್ಮಾ, ಅಧ್ಯಕ್ಷರು, ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ)ಕೆಲವು ವೈದ್ಯಕೀಯ ಉಪಕರಣ ಮತ್ತು ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕಗಳ ವಿನಾಯಿತಿಯು ಆರೋಗ್ಯ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದರಿಂದ ಆರೋಗ್ಯ ಸೇವೆಗಳು ಹೆಚ್ಚು ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಸಿಗಲಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಕ್ರಮ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ನೆರವಾಗಲಿದೆ.

-ಬಿಸಿಐಸಿ ಮಾಜಿ ಅಧ್ಯಕ್ಷ ಕೆ.ಆರ್. ಸೇಕರ್, ಮಾಜಿ ಅಧ್ಯಕ್ಷ, ಬಿಸಿಐಸಿ

ಸಣ್ಣ ಕೈಗಾರಿಕೆಗೆ ಪೂರಕವಾಗಿಲ್ಲ

ಸೂಕ್ಷ್ಮ, ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಮೂಲಸೌಕರ್ಯ ಒದಗಿಸುವ, ಕೈಗಾರಿಕೆಗಳನ್ನು ವಿಸ್ತರಿಸಿ ಉದ್ಯೋಗ ಸೃಷ್ಟಿಗೆ ಪೂರಕವಾದ ಅಂಶ ಬಜೆಟ್‌ನಲ್ಲಿ ಇಲ್ಲ. ದೇಶದಲ್ಲೇ ಎರಡನೇ ಅತಿಹೆಚ್ಚು ತೆರಿಗೆ ಕಟ್ಟುವ ಪೀಣ್ಯ ಕೈಗಾರಿಕಾ ತಾಣದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಪೀಣ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿ ನಿರೀಕ್ಷೆ ಹುಸಿಯಾಗಿದೆ. ರಾಷ್ಟ್ರೀಯ ಅಪ್ರೆಂಟೀಸ್‌ಶಿಪ್ ಯೋಜನೆ ಸಣ್ಣ ಕೈಗಾರಿಕೆಗಳಿಗೆ ಯೋಜನೆ ಅನ್ವಯಿಸದಿದ್ದರೆ ಕೈಗಾರಿಕಾ ಬೆಳವಣಿಗೆ ಹೇಗೆ ಸಾಧ್ಯ.

ಆರ್. ಶಿವಕುಮಾರ್, ಅಧ್ಯಕ್ಷರು, ಪೀಣ್ಯ ಕೈಗಾರಿಕಾ ಸಂಘರಿಯಲ್‌ ಎಸ್ಟೇಟ್‌ ಬೇಡಿಕೆ ಉಲ್ಲೇಖವಿಲ್ಲ

ರಿಯಲ್ ಎಸ್ಟೇಟ್ ವಲಯದ ಯಾವುದೇ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖ ಕಾಣುತ್ತಿಲ್ಲ. ಸಂಭಾವ್ಯ ಮನೆ ಖರೀದಿದಾರರ ಕೈಯಲ್ಲಿ ಹೆಚ್ಚುವರಿ ಹಣದ ಲಭ್ಯತೆ ಇರುವಂತೆ ನೋಡಿಕೊಂಡಿರುವುದು ರಿಯಲ್‌ ಎಸ್ಟೇಟ್‌ ವಲಯಕ್ಕೆ ಪರೋಕ್ಷವಾಗಿ ನೆರವಾಗಲಿದೆ.ಅಮರ್ ಮೈಸೂರು, ಅಧ್ಯಕ್ಷರು ಕ್ರೆಡೈ ಬೆಂಗಳೂರು