ಗುಲಬರ್ಗಾ ವಿವಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

| Published : Feb 15 2025, 12:32 AM IST

ಗುಲಬರ್ಗಾ ವಿವಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
Share this Article
  • FB
  • TW
  • Linkdin
  • Email

ಸಾರಾಂಶ

Gulabarga University Kannada Rajyotsava Award Announced

- ಸುಜಾತಾ ಚಲವಾದಿಯವರ ನೌವ್ವಾರಿ ಸೀರೆ ಕಥೆಗೆ ಜಯತೀರ್ಥ ರಾಜಪುರೋಹಿತ ಚಿನ್ನದ ಪದಕ । ಸೃಜನ, ಸೃಜನೇತರ ಲೇಖಕರ ಕತೆಗೆ ಪುರಸ್ಕಾರ

----

ಕನ್ನಡಪ್ರ ವಾರ್ತೆ ಕಲಬುರಗಿ

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಹೊರಬಿದ್ದಿವೆ. ಈ ಪುರಸ್ಕಾರಗಳ ಸಾಲಿನಲ್ಲಿ ಪ್ರತಿಷ್ಠಿತ ದಿ. ಜಯತೀರ್ಥ ರಾಜ ಪುರೋಹಿತ್‌ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಪುರಸ್ಕಾರದ ಚಿನ್ನದ ಪದಕ ಕಥೆಗಾರ್ತಿ ಸುಜಾತ ಚಲವಾದಿಯವರ ನೌವ್ವಾರಿ ಸೀರಿ ಕಥೆಗೆ ದೊಕರಕಿದೆ.

ಇದೇ ಕಥಾ ಸ್ಪರ್ಧೆಯಲ್ಲಿ ಭಾಗ್ಯಜ್ಯೋತಿ ಎಚ್. ಅವರ ದಿಟದ ನಡಿಗೆ (ಬೆಳ್ಳಿ ಪದಕ), ಡಾ.ಶಿವಗಂಗಾ ಬಿಲಗುಂದಿ ಅವರ ಅಮರಯೋಗಿನಿ ಭಾಗಮ್ಮ (ಕಂಚಿನ ಪದಕ), ಸಂಜೀವ್ ಜಗ್ಲಿ ಅವರ ಚರಂಡಿ (ಕಂಚಿನ ಪದಕ) ಪಡೆದಿವೆ.

ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಸಣ್ಣ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5, 000, 3 ,000 ಹಾಗೂ ಹಾಗೂ 2,000 ರು. ಗೌರವಧನ ಹಾಗೂ ಸ್ಮರಣಿಕೆ ಕೊಟ್ಟು ಗೌರವಿಸಲಾಗುತ್ತಿದೆ.

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ವಿಭಾಗ (ಕಲ್ಯಾಣ ಕರ್ನಾಟಕ ಪ್ರದೇಶದ)ದ ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಗೌರವಧನ ನೀಡಿ ಪ್ರೊತ್ಸಾಹಿಸುವುದಲ್ಲದೆ, ರಾಜ್ಯ ಮಟ್ಟದ ವಿಜ್ಞಾನ, ಅಂಬೇಡ್ಕರ್ ಪುಸ್ತಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡುವ ಬಹುಮಾನ ಫಲತಾಂಶ ಪ್ರಕಟಿಸಿದೆ.

2023ರ ಪ್ರಶಸ್ತಿಯ ಆಯ್ಕೆ ಪಟ್ಟಿ:

ಕನ್ನಡ ಸೃಜನ: ಹೊನ್ಕಲರ ಶಾಯಿರಿಲೋಕ: ಸಿದ್ಧರಾಮ ಹೊನ್ಕಲ್, ಡಂಕಲ್ ಪೇಟೆ:ವೀರೇಂದ್ರ ರಾವಿಹಾಳ್, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್: ಎಸ್.ಬಿ.ಕುಚಬಾಳ, ಒದ್ದೆಗಣ್ಣಿನ ದೀಪ : ಚಾಂದ ಪಾಷ, ಗದ್ದಲದೊಳಗ್ಯಾಕ ನಿಂತಿ : ಅರುಣಾ ನರೇಂದ್ರ.

ಸೃಜನೇತರ: ಅನುವಾದ ಒಲವು-ನಿಲುವು: ಡಾ.ವಿ.ಮೋಹನ್ ಕುಂಟಾರ್, ಸಾಹಿತ್ಯ ಸಂಗಮ: ಡಾ. ಸುರೇಂದ್ರಕುಮಾರ ಕೆರಮಗಿ, ಕೊಪ್ಪಳ ಚರಿತ್ರೆ ಮತ್ತು ಸಂಸ್ಕತಿ ಹುಡುಕಾಟ: ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಸಾಹಿತ್ಯ ಸಂಭ್ರಮ : ಡಾ.ಸಂಗೀತ ಎಂ.ಹಿರೇಮಠ, ಮಾಧ್ಯಮ: ಸಾಮಾಜಿಕ ಪರಿವರ್ತನೆ ಡಾ.ಅಶೋಕ ದೊಡ್ಡಮನಿ, ವಚನ: ವಚನ ಜೀವನ ಮಾರ್ಗ: ಡಾ.ನಂದೀಶ್ವರ ದಂಡೆ, ಜಾನಪದ: ನಮ್ಮೂರ ಜಾನಪದ :ಡಾ.ಚಿ.ಸಿ.ನಿಂಗಣ್ಣ, ಜೀವನ ಕಥನ: ಪಂ. ಸೂಗವೀರ ಶರ್ಮ:ಲಕ್ಷ್ಮೀದೇವಿ ಶಾಸ್ತ್ರಿ, ಚಳವಳಿ: ಸದಾನಂದ ಎಸ್. ಪಾಟೀಲ, ಸಮಾಜ ವಿಜ್ಞಾನ: ಗತಾನು ಶೀಲನ: ಡಾ. ಅಮರೇಶ ಯತಗಲ್, ಅನುವಾದ: ಆಧುನಿಕ ಬೋಧಿಸತ್ವ: ಡಾ. ಸೂರ್ಯಕಾಂತ ಎಸ್.ಸುಜ್ಯಾತ್, ಗಡಿನಾಡು: ಪಡಿನೆಳಲು: ಡಾ.ಮಲ್ಲೇಶಪ್ಪಸಿದ್ರಾಂಪೂರ ಕುಪ್ಪಂ, ಹಿಂದಿ: ಹಿಂದಿ ಭಾಷೆ ಮತ್ತು ಸಾಹಿತ್ಯ: ಡಾ.ಭೀಮಸಿಂಗ್ ರಾಠೋಡ, ಉರ್ದು ಭಾಷೆಯಲ್ಲಿ ಡಾ.ವಾಜಿದ್ ಅಖ್ತರ್ ಸಿದ್ದಕಿ ಕೃತಿ, ಇಂಗ್ಲೀಷ್‍ನಲ್ಲಿ ಡಾ.ಸಂಗಮೇಶ ಹಿರೇಮಠ, ಡಾ.ಶರಣಪ್ಪ ವಡ್ಡನಕೇರಿ ಕೃತಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಹಣಮಂತ ಎಸ್.ಜಂಗೆ ಅವರ ಯೋಗ, ಬ್ಯೂಟಿ ಮತ್ತು ಹೆಲ್ತ್ ಕೃತಿ ಆಯ್ಕೆಯಾಗಿವೆ.

ಪ್ರಕಾಶಕರ ವಿಭಾಗದಲ್ಲಿ ಅಪ್ಪಾರಾವ ಅಕ್ಕೋಣಿಯವರ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಆಯ್ಕೆಯಾಗಿದೆ. ಜನಪದ ಕಲಾವಿದ ದೇವಿಂದ್ರಪ್ಪ ಸಜ್ಜನ್, ವಾಜೀದ್ ಪಟೇಲ್, ವೆಂಕಟೇಶ ದಶರಥ, ಸೂರ್ಯಕಾಂತ ನಂದೂರ ಅವರ ಚಿತ್ರ/ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ. ಶಿಲ್ಪಕಲಾವಿದ ದೀಪಕ ಪೋದ್ದಾರ್‌ಗೆ ಪ್ರಶಸ್ತಿ ಲಭಿಸಿದೆ. ವಿಜ್ಞಾನ ಪುಸ್ತಕ (ರಾಜ್ಯಮಟ್ಟದ)ವಿಭಾಗದಲ್ಲಿ ಡಾ.ಪಿ.ಎಸ್.ಶಂಕರ ಅವರ ಧರೆ ಧಗಧಗ, ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ (ರಾಜ್ಯಮಟ್ಟದ)ವಿಭಾಗದಲ್ಲಿ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಅವರ ಅರಿವೇ ಅಂಬೇಡ್ಕರ್ ಕೃತಿಗಳು ಪ್ರಶಸ್ತಿ ಪಡೆದಿವೆ.

ಮೇಲ್ಕಾಣಿಸಿದ ಕನ್ನಡ ಹಾಗೂ ವಿವಿಧ ಭಾಷಾ ಪುಸ್ತಕ ಲೇಖಕರಿಗೆ, ಜನಪದ ಕಲಾವಿದರಿಗೆ, ಜೀವನ ಕಥನ, ಸಮಾಜ ವಿಜ್ಞಾನ, ಚಿತ್ರ / ಶಿಲ್ಪಕಲಾವಿದರಿಗೆ, ಪ್ರಕಾಶಕರಿಗೆ 5000 ರುಪಾಯಿ ಗೌರವಧನ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಕೊಡಲಾಗುವುದು. ರಾಜ್ಯಮಟ್ಟದ ವಿಜ್ಞಾನ ಪುಸ್ತಕಕ್ಕೆ ಗೌರವಧನದ ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡುವುದು ಹಾಗೂ ಎಂದು ಕುಲಸಚಿವ ಪ್ರೊ.ರಮೇಶ ಲಂಡನಕರ್ ಮತ್ತು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ತಿಳಿಸಿದ್ದಾರೆ. ಫೆಭ್ರುವರಿಯಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಜಿ.ಶ್ರೀರಾಮುಲು ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.

--------

ಕಥಾ ಪುರಸ್ಕಾರ ವಿಜೇತರು

ಫೋಟೋ- ಸುಜಾತಾ

ಫೋಟೋ - ಭಾಗ್ಯಜ್ಯೋತಿ

ಫೋಟೋ- ಶಿವಗಂಗಾ ಬಿಲಗುಂದಿ

ಫೋಟೋ- ಸಂಜೀವ ಜಗ್ಲಿ

------------------

ಫೋಟೋ- ಸಿದ್ರಾಮ ಹೊನ್ಕಲ್‌

ಫೋಟೋ- ಸೂರ್ಯಕಾಂತ ಸುಜ್ಯಾತ

ಫೋಟೋ- ಚಾಂದ್‌ ಪಾಸಾ

ಫೋಟೋ- ಸಂಗೀತಾ ಹಿರೇಮಠ

ಫೋಟೋ- ದೀಪಕ