ಸಾರಾಂಶ
ಮಂಗಳೂರು: ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ೨೨ನೇ ಘಟಿಕೋತ್ಸವ ಸಮಾರಂಭದಲ್ಲಿ ಅಜ್ಮಾನ್‌ನ ರಾಜಕುಮಾರ ಹಾಗೂ ಅಜ್ಮಾನ್ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುವೈಮಿ ಭಾಗವಹಿಸಿದ್ದರು. ಕನ್ವೊಕೇಶನ್ ೨೦೨೫ರ ಅಂಗವಾಗಿ ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಮ್‌ಯು) ತನ್ನ ವಿವಿಧ ಕಾಲೇಜುಗಳ ಒಟ್ಟು ೬೩೦ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮವನ್ನು ತುಂಬೆ ಗ್ರೌಂಡ್ಸ್, ತುಂಬೆ ಮೆಡಿಸಿಟಿಯಲ್ಲಿ ವಿಜೃಂಭಣೆಯಿಂದ ನಡೆಸಿತು.
ಮೆಡಿಕಲ್, ಡೆಂಟಲ್, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಇತರೆ ಹೆಲ್ತ್ ಸೈನ್ಸಸ್ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ತಮ್ಮ ಕುಟುಂಬದ ಸದಸ್ಯರ, ಅಧ್ಯಾಪಕ ವರ್ಗ ಮತ್ತು ಆರೋಗ್ಯ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಪಡೆದು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ‘ಒಂದು ನೋಟದಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ’ ಪ್ರಸ್ತುತಿಯ ನಂತರ ಪದವಿ ಪ್ರದಾನ ಮತ್ತು ಪದವಿ ಪ್ರಮಾಣ ವಚನ ನಡೆಯಿತು.
ತುಂಬೆ ಮೆಡಿಸಿಟಿ ಸಾಧನೆ: ಸಮಾರಂಭ ಅಧ್ಯಕ್ಷತೆ ವಹಿಸಿದ ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ಪದವೀಧರರನ್ನು ಅಭಿನಂದಿಸಿ, ತುಂಬೆ ಮೆಡಿಸಿಟಿಯ ಉನ್ನತ ಮಟ್ಟದ ಅಧ್ಯಯನದ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು ಮತ್ತು ಸಿಮ್ಯುಲೇಷನ್ ಇನ್‌ಸ್ಟಿಟ್ಯೂಟ್‌ಗಳ ವಿಸ್ತೃತ ಜಾಲದಡಿ ಅಭಿವೃದ್ಧಿಯಾಗುತ್ತಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಶೈಕ್ಷಣಿಕ ಮತ್ತು ಕ್ಲಿನಿಕಲ್ ಪರಿಸರದ ಕುರಿತು ಪ್ರಮುಖವಾಗಿ ತಿಳಿಸಿದರು.ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿಯಾದ ಪ್ರೊ. ಮಂಡಾ ವೆಂಕಟ್ರಮಣ ಮಾತನಾಡಿ, ಪದವೀಧರರ ಶ್ರಮ ಮತ್ತು ತಾಳ್ಮೆಯನ್ನು ಶ್ಲಾಘಿಸಿ, ಹೊಸ ಪೀಳಿಗೆಯನ್ನು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದಕ್ಕಾಗಿ ಪೋಷಕರಿಗೆ, ಅಧ್ಯಾಪಕರಿಗೆ ಮತ್ತು ಕ್ಲಿನಿಕಲ್ ತರಬೇತಿದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.ಗಲ್ಫ್ ಮೆಡಿಕಲ್ ಯುನಿವರ್ಸಿಟಿಯು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಹೆಚ್.ಇ. ಮಿರ್ಜಾ ಅಲ್ ಸಾಯಘ್ ಹಾಗೂ ಫಿರೋಝ್ ಅಲ್ಲಾನಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಪ್ರಮುಖರಾದ ಡಾ. ಸಮೀಹ್ ತರಬಿಚಿ, ಡಾ. ಅಬ್ದುಲ್ಲಾ ಅಲ್ ಖಯಾತ್, ಡಾ. ಅಬ್ದುಲ್ ರಹೀಮ್ ಮುಸ್ತಫಾವಿ ಹಾಗೂ ಡಾ. ಹೂಮೈದ್ ಅಲ್ ಶಂಸಿ ಅವರಿಗೆ ಗೌರವ ಪ್ರೊಫೆಸರ್ ಹುದ್ದೆಗಳನ್ನು ಪ್ರದಾನಿಸಲಾಯಿತು. ಕ್ಲಿನಿಕಲ್ ಎಕ್ಸ್‌ಲೆನ್ಸ್, ಅಕಾಡೆಮಿಕ್ ಮೆಡಿಸಿನ್ ಹಾಗೂ ಹೆಲ್ತ್‌ಕೇರ್ ಇನ್ನೋವೇಷನ್ ಕ್ಷೇತ್ರಗಳಲ್ಲಿ ಅವರು ತೋರಿದ ಪ್ರಮುಖ ಸಾಧನೆಗಳನ್ನು ತಿಳಿಸಿದರು.
;Resize=(128,128))
;Resize=(128,128))
;Resize=(128,128))