ಸೂಲಿಬೆಲೆ: ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಗುಳ್ಳಹಳ್ಳಿ ಮುನಿಯಪ್ಪನವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು

ಸೂಲಿಬೆಲೆ: ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಗುಳ್ಳಹಳ್ಳಿ ಮುನಿಯಪ್ಪನವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.

ಸೂಲಿಬೆಲೆ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದು ಮುನಿಯಪ್ಪನವರ ಶ್ರದ್ದಾಂಜಲಿ ಸಭೆಯುಲ್ಲಿ ಮಾತನಾಡಿದ ಅವರು, ಬೆಂಡಿಗಾನಹಳ್ಳಿ ಕುಟುಂಬದ ಒಡನಾಡಿಯಾಗಿ ಸಾರ್ವಜನಿಕ ಜೀವನದಲ್ಲಿ ತನ್ನದೇ ಸಾಮಾಜಿಕ ವರ್ಚಸ್ಸು ಬೆಳೆಸಿಕೊಂಡಿದ್ದ ಮುನಿಯಪ್ಪನವರು ಹಾಲು ಉತ್ಪಾದಕರ ಸಂಘ, ಗ್ರಾಪಂ ಹಾಗೂ ಸಹಕಾರ ಸಂಘಗಳಲ್ಲೂ ಸೇವೆ ಸಲ್ಲಿಸಿದ್ದು ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದರು.

ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿ, ಗುಳ್ಳಹಳ್ಳಿ ಗ್ರಾಮದ ಮುನಿಯಪ್ಪ ರೈತ ಕುಟುಂಬಕ್ಕೆ ಸೇರಿದವರು. ಸದಾ ಕ್ರಿಯಾಶೀಲರಾಗಿ ಜನಪರ ಕಾಳಜಿವುಳ್ಳವರಾಗಿದ್ದರು. ಗುಳ್ಳಹಳ್ಳಿ ಹಾಲಿನ ಡೇರಿ ಅಧ್ಯಕ್ಷರಾಗಿ ಗ್ರಾಪಂ ಸದಸ್ಯರಾಗಿ ಗ್ರಾಮದ ಅಭಿವೃದ್ಧಿ ಮಾಡವಲ್ಲಿ ಮುಂಚೂಣಿಯಲ್ಲಿದ್ದರು. ಸತತವಾಗಿ ೨ ಅವಧಿಯಲ್ಲಿ ಸೂಲಿಬೆಲೆ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಆಕಾಲಿಕ ಅಗಲಿಕೆ ಸಾರ್ವಜನಿಕ ರಂಗಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದರು.

ಸಹಕಾರ ಸಂಘದ ಹಿರಿಯ ನಿರ್ದೇಶಕರಾದ ಬಿ.ತಮ್ಮೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ, ಸಹಕಾರ ಸಂಘದ ಸಿಇಒ ವಸಂತಕುಮಾರ್, ಲೆಕ್ಕಿಗ ನಾಗೇಶ್, ಗುಮಾಸ್ತ ಜಗದೀಶ್, ನಿರ್ದೇಶಕರಾದ ಸೈಯದ್ ಮಹಬೂಬ್, ನಾರಾಯಣಪ್ಪ, ವಿನಯ್, ರಾಮಚಂದ್ರ, ಹೇಮಾ, ಶಿವಮ್ಮ, ಸಿಬ್ಬಂದಿ ಹಾಜರಿದ್ದರು.

(ಫೋಟೋ ಕ್ಯಾಪ್ಷನ್‌)

ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಗುಳ್ಳಹಳ್ಳಿ ಮುನಿಯಪ್ಪನವರ ಅಕಾಲಿಕ ನಿಧನಕ್ಕೆ ಶ್ರದಾಂಜಲಿ ಸಲ್ಲಿಸಲಾಯಿತು, ಅಧ್ಯಕ್ಷ ಬಿ.ವಿ.ಸತೀಶಗೌಡ, ಮಾಜಿ ಅಧ್ಯಕ್ಷ ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ, ಸಿಇಒ ವಸಂತಕುಮಾರ್ ಇತರರಿದ್ದರು.