ಸಾರಾಂಶ
ತಾಳಿಕೋಟೆ: ತಾಲೂಕಿನ ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರ ತಾಯಿ ಮಾತೋಶ್ರೀ ದೇವಕ್ಕಮ್ಮ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ(೯೬) ಶುಕ್ರವಾರ ಸ್ವರ್ಗಸ್ಥರಾದರು. ಗುಂಡಕನಾಳ ಹಿರೇಮಠದ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ ಅವರ ಧರ್ಮಪತ್ನಿಯಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದು,
ತಾಳಿಕೋಟೆ: ತಾಲೂಕಿನ ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರ ತಾಯಿ ಮಾತೋಶ್ರೀ ದೇವಕ್ಕಮ್ಮ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ(೯೬) ಶುಕ್ರವಾರ ಸ್ವರ್ಗಸ್ಥರಾದರು. ಗುಂಡಕನಾಳ ಹಿರೇಮಠದ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ ಅವರ ಧರ್ಮಪತ್ನಿಯಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದು, ಇವರಿಗೆ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಸೇರಿ ೪ ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳು, ಮರಿ ಮಕ್ಕಳು ಅಪಾರ ಬಂಧು ಬಳಗನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಶನಿವಾರ ಮಧ್ಯಾಹ್ನ ೧ ಗಂಟೆಗೆ ಗುಂಡಕನಾಳ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ದೇವಕ್ಕೆಮ್ಮ ಅಗಲಿಕೆಗೆ ಉಜ್ಜಯಿನಿಯ ಡಾ.ಸಿದ್ದಲಿಂಗ ಶಿವಾಚಾರ್ಯರು, ರಂಭಾಪುರಿ ಡಾ.ವಿರಸೋಮೇಶ್ವರ ಶಿವಾಚಾರ್ಯರು, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯರು, ಕಾಶಿಯ ಡಾ.ಚಂದ್ರಶೇಖರ ಶಿವಾಚಾರ್ಯರು, ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು, ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರರು, ಪ್ರಭುಕುಮಾರ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಬ.ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಮನಗೂಳಿಯ ಸಂಗನಬಸವ ಶಿವಾಚಾರ್ಯ, ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದರೇಣುಕಾ ಶಿವಾಚಾರ್ಯರು, ಬಾಡಗಂಡಿಯ ಶ್ರೀ ಶರಣಮ್ಮತಾಯಿ, ವೇ.ಮುರುಘೇಶ ವಿರಕ್ತಮಠ, ಶಾಸಕರಾದ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಸಿ.ಎಸ್.ನಾಡಗೌಡ, ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್.ಪಾಟೀಲ(ನಡಹಳ್ಳಿ), ಶಿವಪುತ್ರಪ್ಪ ದೇಸಾಯಿ ಹಲವರು ಸಂತಾಪ ಸೂಚಿಸಿದ್ದಾರೆ.