ಕಾಂಗ್ರೆಸ್ ಅಭ್ಯರ್ಥಿಯಾಗಿ ಗುಂಡಿನಪಾಳ್ಯ ಈಶ್ವರಯ್ಯನವರ ಹೆಸರು ಅಂತಿಮ

| Published : Oct 28 2024, 12:51 AM IST / Updated: Oct 28 2024, 12:52 AM IST

ಕಾಂಗ್ರೆಸ್ ಅಭ್ಯರ್ಥಿಯಾಗಿ ಗುಂಡಿನಪಾಳ್ಯ ಈಶ್ವರಯ್ಯನವರ ಹೆಸರು ಅಂತಿಮ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ, ಈ ಬಾರಿ ತುಮುಲ್ ನಿರ್ದೇಶಕನ ಸ್ಥಾನಕ್ಕೆ ಪಕ್ಷದ ಬೆಂಬಲ ಸಿಗುವುದಾಗಿ ನಿರೀಕ್ಷಿಸಿದ್ದೆ, ಆದರೆ ಡಾ.ಜಿ.ಪರಮೇಶ್ವರ್ ರವರು ನಮಗೆ ಹೈಕಮಾಂಡ್ ಇದ್ದಂತೆ. ಅವರ ಆದೇಶದಂತೆ ನಾವೆಲ್ಲರೂ ಬದ್ಧರಾಗಿ ಈಶ್ವರಯ್ಯನವರ ಗೆಲುವಿಗೆ ಶ್ರಮವಹಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಕೊರಟಗೆರೆ ತಾಲೂಕು ನಿರ್ದೇಶಕರ ಸ್ಥಾನಕ್ಕೆ ನ.೧೦ ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನಾಗಿ ಗುಂಡಿನಪಾಳ್ಯದ ಈಶ್ವರಯ್ಯರವರನ್ನು ಘೋಷಿಸಲಾಯಿತು.

ಪಟ್ಟಣದ ರಾಜೀವ ಭವನದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ತಾಲೂಕಿನಿಂದ ತುಮುಲ್ ನಿರ್ದೇಶಕರ ಸ್ಥಾನಕ್ಕೆ ಹುಲಿಕುಂಟೆ ಪ್ರಸಾದ್ ಮತ್ತು ಗುಂಡಿನಪಾಳ್ಯ ಈಶ್ವರಯ್ಯ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು, ಸಮಸ್ಯೆ ಜಟಿಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಆಯ್ಕೆ ಪ್ರಕ್ರಿಯೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿರ್ಧಾರಕ್ಕೆ ಬಿಡಲಾಯಿತು, ಗೃಹ ಸಚಿವರು ಗುಂಡಿನಪಾಳ್ಯ ಈಶ್ವರಯ್ಯರವರನ್ನು ಅಭ್ಯರ್ಥಿ ಎಂದು ಸೂಚಿಸಿ ಮುಚ್ಚಿದ ಲಕೋಟೆ ಮೂಲಕ ಕಳುಹಿಸಿದ್ದರು. ಅಂತಿಮವಾಗಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಅವರು ಈಶ್ವರಯ್ಯನವರ ಹೆಸರನ್ನು ಘೋಷಿಸಿದರು.

ಆಭ್ಯರ್ಥಿ ಗುಂಡಿನಪಾಳ್ಯ ಈಶ್ವರಯ್ಯ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ನಾನು ಎರಡು ಬಾರಿ ಕೊರಟಗೆರೆ ತಾಲೂಕಿನಿಂದ ತುಮುಲ್ ನಿರ್ದೇಶಕನಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿ, ಹಾಲು ಉತ್ಪಾದಕರ ಸಂಘದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮತ್ತು ಹೂಲಿಕುಂಟೆ ಪ್ರಸಾದ್ ಉತ್ತಮ ಸ್ನೇಹಿತರಾಗಿದ್ದು ನನ್ನ ಗೆಲುವಿಗೆ ಅವರೂ ಸಹ ಶ್ರಮಿಸುತ್ತಾರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬಲ, ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಬೆಂಬಲ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಹಕಾರ ಹಾಗೂ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಂಘಗಳ ಮತದಾರರ ಆಶೀರ್ವಾದದಿಂದ ನಾನು ನ.೧೦ ರಂದು ನಡೆಯುವ ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತೇನೆ ಎಂದರು.

ಆಕಾಂಕ್ಷಿಯಾಗಿದ್ದ ಹೂಲಿಕುಂಟೆ ರುದ್ರಪ್ರಸಾದ್ ಮಾತನಾಡಿ, ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ, ಈ ಬಾರಿ ತುಮುಲ್ ನಿರ್ದೇಶಕನ ಸ್ಥಾನಕ್ಕೆ ಪಕ್ಷದ ಬೆಂಬಲ ಸಿಗುವುದಾಗಿ ನಿರೀಕ್ಷಿಸಿದ್ದೆ, ಆದರೆ ಡಾ.ಜಿ.ಪರಮೇಶ್ವರ್ ರವರು ನಮಗೆ ಹೈಕಮಾಂಡ್ ಇದ್ದಂತೆ. ಅವರ ಆದೇಶದಂತೆ ನಾವೆಲ್ಲರೂ ಬದ್ಧರಾಗಿ ಈಶ್ವರಯ್ಯನವರ ಗೆಲುವಿಗೆ ಶ್ರಮವಹಿಸಬೇಕಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್ ನಾರಾಯಣ ಮಾತನಾಡಿ, ಪಕ್ಷದ ವರಿಷ್ಠರ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಬೇಕು, ಗುಂಡಿನಪಾಳ್ಯ ಈಶ್ವರಯ್ಯ ಮತ್ತು ಹೂಲಿಕುಂಟೆ ರುದ್ರಪ್ರಸಾದ್ ಇಬ್ಬರೂ ನಿರ್ದೇಶಕರ ಸ್ಥಾನದಲ್ಲಿ ಗೆಲ್ಲುವ ಶಕ್ತಿಯುಳ್ಳವರಾಗಿದ್ದಾರೆ, ಆದರೆ ನಮ್ಮೆಲ್ಲರ ನಾಯಕ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ಒಪ್ಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಎಲ್ಲರೂ ಒಟ್ಟಾಗಿ ಈಶ್ವರಯ್ಯರವರನ್ನು ಗೆಲ್ಲಿಸಿಕೊಂಡು ತಾಲೂಕು ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ತುಮುಲ್‌ಗೆ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಕಾರ್ಯದರ್ಶಿ ಕವಿತಾ, ಮುಖಂಡರಾದ ಮಹಾಲಿಂಗಯ್ಯ, ವೆಂಕಟೇಶ್, ಮೈಲಾರಪ್ಪ, ಆನಂದ್, ಈಶಪ್ರಸಾದ್, ಕೆ.ಬಿ.ಲೋಕೇಶ್, ಮಕ್ತಿಯಾರ್, ಟಿ.ಸಿ.ರಾಮಯ್ಯ, ವೆಂಕಟಪ್ಪ, ರಂಗರಾಜು, ಜಯರಾಮ್, ಮಲ್ಲಿಕಾರ್ಜುನ್, ವಿನಯ್‌ಕುಮಾರ್, ಸುನಿಲ್, ಮಹಮದ್‌ ಇಸ್ಮಾಯಿಲ್, ಚೌದ್ರಿ, ಅರವಿಂದ್, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.