ಗುಂಡ್ಲುಪೇಟೆ ಗ್ರಂಥಾಲಯ ಕೊನೆಗೂ ಶಿಪ್ಟ್ ಆಗುವ ಕಾಲ ಕೂಡಿ ಬಂತು!
KannadaprabhaNewsNetwork | Published : Oct 09 2023, 12:45 AM IST
ಗುಂಡ್ಲುಪೇಟೆ ಗ್ರಂಥಾಲಯ ಕೊನೆಗೂ ಶಿಪ್ಟ್ ಆಗುವ ಕಾಲ ಕೂಡಿ ಬಂತು!
ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ಗ್ರಂಥಾಲಯ ಕಿಷ್ಕಿಂಧೆಯಂತಿದೆ, ಬದಲಾಯಿಸಬೇಕು ಎಂದು ಕನ್ನಡಪ್ರಭ ವರದಿ ಮಾಡಿದ ಫಲವಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗು ಜಿಲ್ಲಾಧಿಕಾರಿ ಶಿಲ್ಪ ನಾಗ್ ರವರು ಗ್ರಂಥಾಲಯ ಸ್ಥಳಾಂತರಕ್ಕೆ ಮುಂದಡಿ ಇಟ್ಟಿದ್ದಾರೆ
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಆಸಕ್ತಿ ಫಲ । ಕನ್ನಡಪ್ರಭ ವರದಿ ಬಳಿಕ ಶಾಸಕರಿಗೆ ಒತ್ತಡ ತಂದ ಕಸಾಪ ಅಧ್ಯಕ್ಷ ಶೈಲಕುಮಾರ್ ರಂಗೂಪುರ ಶಿವಕುಮಾರ್ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಪಟ್ಟಣದ ಗ್ರಂಥಾಲಯ ಕಿಷ್ಕಿಂಧೆಯಂತಿದೆ, ಬದಲಾಯಿಸಬೇಕು ಎಂದು ಕನ್ನಡಪ್ರಭ ವರದಿ ಮಾಡಿದ ಫಲವಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗು ಜಿಲ್ಲಾಧಿಕಾರಿ ಶಿಲ್ಪ ನಾಗ್ ರವರು ಗ್ರಂಥಾಲಯ ಸ್ಥಳಾಂತರಕ್ಕೆ ಮುಂದಡಿ ಇಟ್ಟಿದ್ದಾರೆ. ಜೂ.೧೬ ರ ಕನ್ನಡಪ್ರಭ ಪತ್ರಿಕೆಬೆಳಕಿಲ್ಲದ ಕಿಷ್ಕಿಂಧೆ ಈ ಗ್ರಂಥಾಲಯ ಕಟ್ಟಡ, ಅವ್ಯವಸ್ಥೆ ಆಗರ ಗುಂಡ್ಲುಪೇಟೆ ಗ್ರಂಥಾಲಯ, ಸ್ಥಳಾಂತರಕ್ಕೆ ಅಧಿಕಾರಿಗಳ ಹಿಂದೇಟು,ಕಟ್ಟಡದಲ್ಲಿ ಶೌಚಾಲಯದ ದುಸ್ಥಿತಿಯಿದೆ ಎಂದು ಸವಿವರವಾದ ವರದಿ ಪ್ರಕಟಿಸಿ ತಾಲೂಕು ಆಡಳಿತದ ಗಮನ ಸೆಳೆದಿತ್ತು. ಇದಾದ ನಂತರ ಹಾಲಿ ಇರುವ ಗ್ರಂಥಾಲಯ ಬದಲಿಸಬೇಕು ಎಂಬ ಕನ್ನಡಪ್ರಭದ ಕಾಳಜಿಗೆ ಒತ್ತಾಸೆಯಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ ಕೂಡ ಶಾಸಕರು, ಜಿಲ್ಲಾ ಗ್ರಂಥಾಲಯಾಧಿಕಾರಿಗಳ ಬೆನ್ನತ್ತಿ ಗ್ರಂಥಾಲಯ ಬದಲಿಸಬೇಕು ಎಂದು ಒತ್ತಡ ಹಾಕಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಜಿಲ್ಲಾ ಗ್ರಂಥಾಲಯಾಧಿಕಾರಿ ಶಿವಸ್ವಾಮಿ ಜೊತೆ ಮಾತನಾಡಿ ಗುರುಭವನದ ಬಳಿಯ ಶಿಕ್ಷಕರ ಭವನ/ಬೇರೆಡೆ ಶಿಫ್ಟ್ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ನಂತರ ಕನ್ನಡಪ್ರಭ ಹಾಗೂ ಕಸಾಪ ಜಿಲ್ಲಾಧ್ಯಕ್ಷರು, ಜಿಲ್ಲಾ ಗ್ರಂಥಾಲಯಾಧಿಕಾರಿ ಜೊತೆ ಗೂಡಿ ಹಳೇಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಗ್ರಂಥಾಲಯ ಶಿಪ್ಟ್ ಮಾಡಿದರೆ ಓದುಗರಿಗೆ ಅನುಕೂಲವಾಗುತ್ತದೆ. ಜೊತೆಗೆ ಕಸದ ಮಂದಿರದಂತಿರುವ ಕಚೇರಿ ಆವರಣ ಕ್ಲೀನ್ ಆಗುತ್ತದೆ ಎಂದು ಚರ್ಚಿಸಿದ ಬಳಿಕ ಶಾಸಕರ ಗಮನಕ್ಕೆ ತಂದ ಬಳಿಕ ಕಿಷ್ಕಿಂಧೆ ಗ್ರಂಥಾಲಯ ಸ್ಥಳಾಂತರಕ್ಕೆ ಚಾಲನೆ ಸಿಕ್ಕಿತು. ಇದಾದ ನಂತರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಳೇಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ಗ್ರಂಥಾಲಯ ಆರಂಭಿಸಬೇಕು ಹಾಗು ಹಳೇಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಎರಡು ಕೊಠಡಿ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಶಾಸಕರು,ಜಿಲ್ಲಾಧಿಕಾರಿಗಳ ಸೂಚನೆ ನೀಡಿರುವ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡು ಹೆಚ್ಚುವರಿ ಕೊಠಡಿಗಳನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಬರಲಿ ಗುಂಡ್ಲುಪೇಟೆ ಕಿಷ್ಕಿಂಧೆ ಗ್ರಂಥಾಲಯ ಸ್ಥಳಾಂತರಕ್ಕೆ ಎರಡು ಕೊಠಡಿ ಸಿಕ್ಕಿರುವ ಹಿನ್ನೆಲೆ ಕೂಡಲೇ ಬದಲಾವಣೆಗೆ ಜಿಲ್ಲಾ ಗ್ರಂಥಾಲಯಾಧಿಕಾರಿ ಕ್ರಮ ವಹಿಸಬೇಕಿದೆ. ಕಳೆದ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯವಿಲ್ಲದೆ ಇದ್ದ ಗ್ರಂಥಾಲಯ ಸ್ಥಳಾಂತರಕ್ಕೆ ಕಾಲ ಕೂಡಿ ಬಂದಿದೆ ಆದಷ್ಟು ಬೇಗ ಬದಲಿಸಿ ಹೊಸ ಕಟ್ಟಡಕ್ಕೆ ಬರಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್(ಶೈಲೇಶ್) ಒತ್ತಾಯಿಸಿದ್ದಾರೆ. ದುಸ್ಥಿತಿಯಲ್ಲಿದ್ದ ಗ್ರಂಥಾಲಯ ಬದಲಿಸಬೇಕು ಎಂದು ಕನ್ನಡಪ್ರಭ ಪತ್ರಿಕೆ ಸೊಲ್ಲೆತ್ತುವ ಮೂಲಕ ಗ್ರಂಥಾಲಯ ಬದಲಾವಣೆಗೆ ಸ್ಪಂದಿಸಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪ ನಾಗ್ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್‌ಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಕಳೆದ ಜೂ.16 ರಂದು ಬೆಳಕಿಲ್ಲದ ಕಿಷ್ಕಿಂಧೆ ಈ ಗ್ರಂಥಾಲಯ ಕಟ್ಟಡ ಎಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಕೊನೆಗೂ ಕಿಷ್ಕಿಂಧೆ ಗ್ರಂಥಾಲಯ ಕಟ್ಟಡ ಸ್ಥಳಾಂತರ ಕಾಲ ಬಂತು ಎಂದು ಆ.24 ರಂದು ಕನ್ನಡಪ್ರಭ ಪತ್ರಿಕೆ ವರದಿ ಪ್ರಕಟಿಸಿತ್ತು. ಗುಂಡ್ಲುಪೇಟೆ ಹಳೇಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಎರಡು ಕೊಠಡಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿ ಬಿಇಒಗೆ ಪತ್ರ ಬರೆದಿದ್ದಾರೆ.