ಹೊನ್ನಾವರದಲ್ಲಿ ಗರ್ಭಿಣಿ ಹಸು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು : ವಶಕ್ಕೆ

| N/A | Published : Jan 26 2025, 01:31 AM IST / Updated: Jan 26 2025, 11:06 AM IST

ಹೊನ್ನಾವರದಲ್ಲಿ ಗರ್ಭಿಣಿ ಹಸು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು : ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಖಚಿತ ಮಾಹಿತಿ ಮೇರೆಗೆ ಪೊಲೀಸರು ಶನಿವಾರ ಸಂಜೆ ತಾಲೂಕಿನ ಕಾಸರಕೋಡ ಬಳಿ ಫೈಜಾನನ್ನು ಬಂಧಿಸಿದ್ದಾರೆ. ಬಳಿಕ ಫೈಜಾನ್ ಹಸುವನ್ನು ವಧಿಸಲು ಬಳಸಿದ ಮಾರಕಾಸ್ತ್ರಗಳನ್ನು ತೋರಿಸುವುದಾಗಿ ನಂಬಿಸಿ ಪೊಲೀಸರನ್ನು ದುಗ್ಗೂರು ಗುಡ್ಡಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.

ಹೊನ್ನಾವರ: ಕಳೆದ ಜ.19 ರಂದು ತಾಲೂಕಿನ ಸಾಲ್ಕೋಡು ಕೊಂಡಾಕುಳಿಯಲ್ಲಿ ಗರ್ಭಿಣಿ ಗೋವನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಫೈಜಾನ್ ಎಂಬಾತನನ್ನು ಬಂಧಿಸಿದ್ದು, ಬಳಿಕ ತನಿಖೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆರೋಪಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡೇಟು ಹೊಡೆದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಪಿಐ ಸಿದ್ಧರಾಮೇಶ್ವರ, ಪಿಎಸ್ಐ ರಾಜಶೇಖರ, ಕಾನ್ಸಟೇಬಲ್‌ಗಳಾದ ಗಣೇಶ, ಗಜಾನನ ನಾಯ್ಕ ಗಾಯಗೊಂಡವರು. ಸಿಪಿಐ ಸಿದ್ಧರಾಮೇಶ್ವರ, ಪಿಎಸ್ಐ ರಾಜಶೇಖರ, ಕಾನ್ಸಟೇಬಲ್‌ಗಳಾದ ಗಣೇಶ, ಗಜಾನನ ನಾಯ್ಕ ಗಾಯಗೊಂಡವರು. ಇವರ ಮೇಲೆ ಆರೋಪಿ ಕಾಸರಕೋಡನ ಫೈಜಾನ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಇವರ ಮೇಲೆ ಆರೋಪಿ ಕಾಸರಕೋಡನ ಫೈಜಾನ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಯಿಂದ ಗಾಯಗೊಂಡ ಆರೋಪಿಯನ್ನು ಕಾರವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಶನಿವಾರ ಸಂಜೆ ತಾಲೂಕಿನ ಕಾಸರಕೋಡ ಬಳಿ ಫೈಜಿಲ್‌ನನ್ನು ಬಂಧಿಸಿದ್ದಾರೆ. ಬಳಿಕ ಫೈಜಾನ್ ಹಸುವನ್ನು ವಧಿಸಲು ಬಳಸಿದ ಮಾರಕಾಸ್ತ್ರಗಳನ್ನು ತೋರಿಸುವುದಾಗಿ ನಂಬಿಸಿ ಪೊಲೀಸರನ್ನು ದುಗ್ಗೂರು ಗುಡ್ಡಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.

ಮಾರಕಾಸ್ತ್ರ ಪತ್ತೆ ಆಗುತ್ತಿದ್ದಂತೆ ಆರೋಪಿ ಅದೇ ಆಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಫೈಜಾನ್‌ನಿಗೆ ಹೊನ್ನಾವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಹೊನ್ನಾವರ ಹಸು ಹತ್ಯೆ: ಒಬ್ಬ ಆರೋಪಿಯ ಬಂಧನ

ಕಾರವಾರ: ತಾಲೂಕಿನ ಸಾಲ್ಕೋಡ ಕೊಂಡಾಕುಳಿಯಲ್ಲಿ ಇತ್ತೀಚೆಗೆ ಗೋವಿನ ಹತ್ಯೆ ಮಾಡಿ, ಮಾಂಸ ಕೊಂಡೊಯ್ದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ವಲ್ಕಿ ನಿವಾಸಿ ತೌಫೀಕ್ ಅಹಮದ್ ಜಿದ್ದಾ (41) ಬಂಧಿತ ಆರೋಪಿ.ಈತ ಚಾಲಕನಾಗಿದ್ದ. ಈತ ಹಸುವಿನ ಹತ್ಯೆಗೆ ಸಹಕರಿಸಿದ್ದಲ್ಲದೆ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ಯುವಲ್ಲಿ ಶಾಮೀಲಾಗಿದ್ದ. ಇನ್ನೂ ಮೂವರು ಆರೋಪಿಗಳ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಜ. 19ರಂದು ಕೊಂಡಾಕುಳಿಯಲ್ಲಿ ಮೇವಿಗೆ ತೆರಳಿದ್ದ ಗರ್ಭ ಧರಿಸಿದ್ದ ಗೋವನ್ನು ಹತ್ಯೆ ಮಾಡಿ, ಹೊಟ್ಟೆಯಲ್ಲಿದ್ದ ಕರುವನ್ನೂ ಕೊಂದು, ತಲೆ, ಕಾಲುಗಳನ್ನು ಅಲ್ಲೇ ಬಿಸಾಡಿ ಮಾಂಸವನ್ನು ಕೊಂಡೊಯ್ಯಲಾಗಿತ್ತು. ಹೊನ್ನಾವರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಆರೋಪಿಗಳ ಪತ್ತೆಗೆ ಆರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.