ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ: ಸದಾನಂದ ನಾಯಕ್

| Published : May 14 2024, 01:10 AM IST

ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ: ಸದಾನಂದ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ಗುರುಗಳ ಒಂದೆಡೆ ಸೇರಿಸಿ ಗೌರವಿಸಿ ಗುರುಗಳಿಗೆ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ. ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಸತ್ಯ ಸಂಗತಿ.

ಕನ್ನಡಪ್ರಭ ವಾರ್ತೆ ಆನಂದಪುರ

ತಂದೆ-ತಾಯಿಗಳೇ ಮಕ್ಕಳ ಮೊದಲ ಗುರುಗಳಾಗಿದ್ದಾರೆ, ಶಿಕ್ಷಕರನ್ನು ಮಕ್ಕಳ ಎರಡನೇ ಹೆತ್ತವರು ಎನ್ನಬಹುದು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನ ನೀಡಲಾಗಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಸದಾನಂದ ನಾಯಕ್ ಹೇಳಿದರು.

ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಅನ್ನಪೂರ್ಣೇಶ್ವರಿ ಭೋಜನಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಗುರು ವಂದನ ಮತ್ತು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿ, ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ಗುರುಗಳ ಒಂದೆಡೆ ಸೇರಿಸಿ ಗೌರವಿಸಿ ಗುರುಗಳಿಗೆ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಸತ್ಯ ಸಂಗತಿ. ಆದರೆ, ಇನ್ನೊಂದಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳ ನೆನೆದು ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗುರುವಂದನಾ ಕಾರ್ಯಕ್ರಮ ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.

ಗುರುಗಳಿಂದ ಬದುಕಲು ಮಾರ್ಗದರ್ಶನ:

ಹಳೆಯ ವಿದ್ಯಾರ್ಥಿ ರತ್ನಾಕರ ಹೊನಗೋಡ್ ಮಾತನಾಡಿ, ನಮಗೆ ಜನ್ಮ ನೀಡಿದ ತಂದೆ - ತಾಯಿಗಳ ಸ್ಥಾನವನ್ನು ಬಿಟ್ಟರೆ ನಂತರದ ಗುರುಗಳ ಸ್ಥಾನ ಮಹತ್ವಪೂರ್ಣವಾಗಿದೆ. ಯಾವುದೇ ರೀತಿಯ ಷರತ್ತು ಬದ್ಧತೆ ಇಲ್ಲದೆ. ಪ್ರೀತಿ ತೋರುವ ತಂದೆ ತಾಯಿಗಳ ನಂತರ ಎರಡನೆಯ ಸ್ಥಾನ ಗುರುವಿಗೆ. ವಿದ್ಯಾರ್ಥಿಗಳ ಮನಸ್ಸು ಅರ್ಥೈಸಿಕೊಂಡು ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಗೌರವ ವ್ಯಕ್ತಿಯ ಬದುಕಲು ಮಾರ್ಗದರ್ಶನ ನೀಡಿದ್ದು ಗುರುಗಳು ಎಂದರು. ಇಂತಹ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ವಿದ್ಯಾ ಕಲಿಸಿದ ಗುರುಗಳನ್ನು ಗೌರವಿಸುವಂತಹ ಸಂಸ್ಕಾರವನ್ನು ನಾವು ನಮ್ಮ ಮಕ್ಕಳಿಗೆ ನೀಡಬೇಕು ಎಂದು ಕರೆ ನೀಡಿದರು.

ಗುರುವಂದನ ಹಾಗೂ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಕ್ಷಕಿ ಸುನಂದಾ ಕೆ.ಪಂಡಿತ್ ಮಾತನಾಡಿ. ಶಿಕ್ಷಕರಾಗಿ ನಾವು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಕರಾಗಿರುತ್ತೇವೆ. ಇದನ್ನು ಅರಿತ ಮಕ್ಕಳು ಉನ್ನತ ಸ್ಥಾನದಲ್ಲಿ ವಿವಿಧ ಕ್ಷೇತ್ರದಲ್ಲಿ ತಮ್ಮ ಸಾಧನೆ ತೋರುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಎಂ.ಸಿ.ಮೂರ್ತಿ, ಗಣೇಶ್ ಆರ್ ಭಟ್, ಎಚ್‌.ಎ.ರಾಧಾಕೃಷ್ಣ , ಆಂತೋನಿಯಪ್ಪ, ಎಸ್.ಬಿ.ಕೊಟ್ರಪ್ಪ, ತೋಟಪ್ಪ, ಬಾಲಸುಬ್ರಹ್ಮಣ್ಯ, ನಾಗರಾಜ್, ಮಹೇಶ್ ಡಿ ಎಲೆಗಾರ್, ಎಸ್ ಎನ್ ಹೆಗಡೆ, ದ್ಯಾವಪ್ಪ, ಚಂದ್ರಕಲಾ.ವಿ. ಶೇಟ್, ಎಂ.ಕೆ.ಮರಿಯಮ್ಮ, ಸರೋಜಾ, ಗಾಯತ್ರಿ ಒಡೆಯರ್, ಭೋಗೇಶ್ವರಪ್ಪ, ಭಾಗ್ಯಶ್ರೀ, ಸೋಮಶೇಖರಪ್ಪ, ಚಿದಂಬರ, ಶಾಂತಕುಮಾರಿ. ಜಯಪ್ಪ ಇದ್ದರು.ಈ ಸಂದರ್ಭ ಪ್ರೌಢಶಾಲೆ, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ, ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

---