ಶ್ರೇಷ್ಠವಾದ ಗುರುವಿದ್ದರೆ ಬದುಕು ಸುಂದರ: ಶಾಂತಮಯ ಶ್ರೀ

| Published : Jul 25 2024, 01:22 AM IST

ಶ್ರೇಷ್ಠವಾದ ಗುರುವಿದ್ದರೆ ಬದುಕು ಸುಂದರ: ಶಾಂತಮಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

Guru is important in life: Shanthmaia said

ವಡಗೇರಾ:ಪ್ರತಿಯೊಬ್ಬ ಮನುಷ್ಯನಿಗೆ ಶ್ರೇಷ್ಠವಾದ ಗುರು ದೊರಕಿದಾಗ ಮಾತ್ರ ಆತನ ಬದುಕು ಸುಂದರ ಎಂದು ಹಾಲುಮತ ಮೂಲಪೀಠ ಸರೂರು ಹಾಗೂ ಅಗತೀರ್ಥ ಗ್ರಾಮದ ಹಾಲುಮತ ಜಗದ್ಗುರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿ ಹೇಳಿದರು. ಕಾಗಿನೆಲೆಯ ಕನಕ ಗುರುಪೀಠದ ಪೀಠಾಧಿಪತಿ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿ ಸಾನಿಧ್ಯದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಲಿನ ಜಗದ್ಗುರು ಬೀರೇಂದ್ರ ಕೇಶವ ತಾರಾಕಾಂನದಪುರಿ ಮಹಾಸ್ವಾಮಿ 18ನೇ ವರ್ಷದ ಪುಣ್ಯಾರಾಧನೆ ಹಾಗೂ ಗುರುಪೂರ್ಣಿಮಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳ ಕಿರೀಟ ಪೂಜೆ ಜರುಗಿತು. ಈಶ್ವರನಂದಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ಹೊಸದುರ್ಗ, ಶಿವಾನಂದಪುರಿ ಮಹಾಸ್ವಾಮಿ, ಕೆ.ಆರ್. ನಗರ ಮೈಸೂರು, ಚಿನ್ಮಯಾನಂದ ಮಹಾಸ್ವಾಮಿ, ಮಾಜಿ ಸಚಿವರು ಹಾಗೂ ಸರ್ಕಾರದ ಪಂಚ ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ ಇದ್ದರು.

-----

23ವೈಡಿಆರ್5