ಗುರು ವಿದ್ಯಾರ್ಥಿಗಳ ಬಾಳಿನ ಬೆಳಕು

| Published : Jul 11 2025, 12:32 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಗುರುಕುಲ ಪದ್ಧತಿಗಳು ಹಾಗೂ ಈಗಿನ ಶಿಕ್ಷಣ ಪದ್ಧತಿಗಳ ಬಗ್ಗೆ ತಿಳಿಸಿ

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಸೃಜನಾತ್ಮಕವಾಗಿ ಅಳವಡಿಸಿಕೊಂಡು ಸಾರ್ಥಕ ವಿದ್ಯಾರ್ಥಿಯ ಜೀವನ ನಡೆಸುತ್ತಾ ಸಮಾಜದಲ್ಲಿ ಗುರುವಿನ ಮಹತ್ವ ತಿಳಿಸಿ ಗುರುವಿನಿಂದ ಗುರಿಗಳನ್ನು ಹೇಗೆ ಸಾಧಿಸಬೇಕು ಎಂದು ಟಿ. ಈಶ್ವರ ಹೇಳಿದರು.

ಪಟ್ಟಣದ ಸ್ಕೂಲ್ ಚಂದನದಲ್ಲಿ ಗುರುವಾರ ಗುರು ಪೂರ್ಣಿಮೆ ಆಚರಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುರುಕುಲ ಪದ್ಧತಿಗಳು ಹಾಗೂ ಈಗಿನ ಶಿಕ್ಷಣ ಪದ್ಧತಿಗಳ ಬಗ್ಗೆ ತಿಳಿಸಿ,ಗುರು ಶಿಷ್ಯರ ಸಾಧನೆ ಹೇಳುವುದರ ಮುಖಾಂತರ ಗುರು ವಿದ್ಯಾರ್ಥಿಗಳ ಬಾಳಿನ ಬೆಳಕು ಒಬ್ಬ ಗುರು ಯಾವಾಗಲೂ ವಿದ್ಯಾರ್ಥಿಗಳಿಗೆ ಸಮಗ್ರತೆ ಮತ್ತು ಒಳ್ಳೆ ಬದ್ಧತೆಯ ಮಾರ್ಗ ಮತ್ತು ಆದರ್ಶಮಯ ಮೌಲ್ಯ ಅನುಸರಿಸುವ ಹಾಗೆ ಮಾಡಬೇಕು ಎಂದು ಹೇಳಿದರು.

ನಿರ್ದೇಶಕ ಎಚ್.ಸಿ. ರಟಗೇರಿ ಪ್ರಾಚೀನ ಗುರುಕುಲ ಪದ್ಧತಿಗಳು ಮತ್ತು ಗುರು ಶಿಷ್ಯರ ಸಂಬಂಧ ಬಗ್ಗೆ ಜ್ಞಾನದ ಬಗ್ಗೆ ಶಾಲೆಯ ವಿದ್ಯಾರ್ಥಿಗಳಿಗೆ ಹೇಳಿದರು, ಈ ವೇಳೆ ಶಾಲೆಯ ಪ್ರಾಚಾರ್ಯರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.