ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸುವವನೇ ಗುರು. ಗುರುವಿಲ್ಲದೇ ಜಗವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ ಆಗಿರುವುದೇ ಗುರುವಿನ ಮಹಿಮೆಯಿಂದ. ಹಾಗಾಗಿ ಗುರುವಿಗೆ ಮಹಾ ಸ್ಥಾನವಿದೆ ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸುವವನೇ ಗುರು. ಗುರುವಿಲ್ಲದೇ ಜಗವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ ಆಗಿರುವುದೇ ಗುರುವಿನ ಮಹಿಮೆಯಿಂದ. ಹಾಗಾಗಿ ಗುರುವಿಗೆ ಮಹಾ ಸ್ಥಾನವಿದೆ ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಸುರೇಶ್ ಹೇಳಿದರು.

ಪಟ್ಟಣದ ವಿದ್ಯಾರಣ್ಯ ಪ್ರೌಢಶಾಲೆಯ 2007 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಹಾಗೂ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾವು ಎಷ್ಟೇ ದೊಡ್ಡವರಾದರೂ ಸಹ ಹಿಂದೆ ಗುರುಗಳಿಗೆ, ಶಿಕ್ಷಕರಿಗೆ ಗೌರವ ನೀಡುವ ಪ್ರತೀತಿ ಇತ್ತು. ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೂ ಸಹ ಗುರುಗಳಿಗೆ ಮಹತ್ವ ಸ್ಥಾನ ಇತ್ತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಪಾಠ ಕಲಿಸಿದ ಗುರುಗಳಿಗೆ ಗುರುದಕ್ಷಿಣೆ ನೀಡಿ ಅತ್ಯಂತ ಪೂಜನೀಯ ಸ್ಥಾನದಲ್ಲಿ ಗೌರವವನ್ನು ನೀಡುತ್ತಿದ್ದರು. ಆದರೆ ಇತ್ತೀಚೆಗೆ ಗುರುಗಳ ಸಿಗುವಂತಹ ಗೌರವ ಕಡಿಮೆಯಾಗುತ್ತಿದೆ. ಇಂದಿನ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ವಿದ್ಯಾ ಸಂಸ್ಥೆ ಕಾರ್ಯದರ್ಶಿಗಳಾದ ಕೀರ್ತಿಶ್ರೀ ಯೋಗೀಶ್ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯ. ವಿದ್ಯಾಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಮಾಡುವ ಪ್ರಯತ್ನ ಶ್ಲಾಘನೀಯ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಜೆ.ಮಂಜಪ್ಪ, ಎಂ.ನಂಜುಂಡಪ್ಪ, ಟಿ.ಜೆ.ನಂಜುಂಡಯ್ಯ, ಟಿ.ಆರ್.ಜಯಣ್ಣ, ಎ.ಶಿವಮೂರ್ತಿ, ಜಿ.ಗೋಪಾಲ್, ಎಸ್.ಎಸ್.ಬೇಲೂರಪ್ಪ, ಬಿ.ಆರ್.ಬಸವರಾಜು, ಆರ್.ಬೋರಪ್ಪ ಪರಿಚಾರಕರಾದ ಗೋಪಾಲ್ ಕೃಷ್ಣಮೂರ್ತಿ ಸೇರಿದಂತೆ ಸಿಬ್ಬಂದಿಗಳನ್ನು ಸಹ ಸನ್ಮಾನಿಸಿ ನಮನ ಸಲ್ಲಿಸಿದರು. ವಿದ್ಯಾರಣ್ಯ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಸಾಂಸ್ರೃತಿಕ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಮುಖ್ಯಸ್ಥ ಜಯಣ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತಾ, ಸಿ.ಆರ್.ಪಿ ಸುರೇಶ್, ವಿದ್ಯಾರಣ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಾಲಪ್ಪನಾಯ್ಕ, ಚೇಳೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ್, ಬೆನಕನಕೆರೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ್ ಬಂಡಾರಿ, ಬೊಮ್ಮೇನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಲ್. ಸಿದ್ದಲಿಂಗಯ್ಯ ಸೇರಿದಂತೆ 2007 ರ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.