ಮಕ್ಕಳನ್ನು ಉನ್ನತ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಗುರು

| Published : Sep 15 2024, 01:56 AM IST

ಮಕ್ಕಳನ್ನು ಉನ್ನತ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರಿಗೆ ಎಷ್ಷೇ ಸಮಸ್ಯೆಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಮಕ್ಕಳಿಗೆ ಪಾಠ ಪ್ರವಚನಗಳನ್ನೂ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಮುಂದೆ ಆ ಮಗು ಉನ್ನತ ಸ್ಥಾನಕ್ಕೆ ಏರಿದಾಗ ಅಥವಾ ಆ ವ್ಯಕ್ತಿ ಬಂದು ನಾನು ನಿಮ್ಮ ಶಿಷ್ಯ ಎಂದಾಗಿ ಗುರುವಿಗೆ ಆಗುವ ಆನಂದ, ತೃಪ್ತಿ ಯಾವುದೇ ಸನ್ಮಾನದಲ್ಲೂ ಸಿಗುವುದಿಲ್ಲ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಈ ಮಣ್ಣಿನಲ್ಲಿ ಗುರುಗಳಿಗೆ ಮೂರನೇ ಸ್ಥಾನ ನೀಡಿದ್ದಾರೆ. ಶಿಕ್ಷಕರಾದ ನೀವು ಏನು ಅರಿಯದ ಮಕ್ಕಳನ್ನು ಸಮಾಜದ ಉನ್ನತ ವ್ಯಕ್ತಿಗಳಾನ್ನಾಗಿ ಮಾಡಿದಾಗ ಮಾತ್ರ ಗುರುಗಳ ಸ್ಥಾನಕ್ಕೆ ಬೆಲೆ ಬರುತ್ತದೆ ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ಹೇಳಿದರು. ತಾಲೂಕಿನ ಹಂಡಿಗನಾಳ ಗ್ರಾಮದ ಬಾಲಾಜಿ ಕನ್ವೆನ್ಷನ್‌ ಹಾಲ್‌ನಲ್ಲಿ ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಡಾ ಎಸ್. ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ವೈಯಕ್ತಿ ಸಮಸ್ಯೆ ಮರೆತು ಬೋಧನೆ

ಶಿಕ್ಷಕರಿಗೆ ಎಷ್ಷೇ ಸಮಸ್ಯೆಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಮಕ್ಕಳಿಗೆ ಪಾಠ ಪ್ರವಚನಗಳನ್ನೂ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಮುಂದೆ ಆ ಮಗು ಉನ್ನತ ಸ್ಥಾನಕ್ಕೆ ಏರಿದಾಗ ಅಥವಾ ಆ ವ್ಯಕ್ತಿ ಬಂದು ನಾನು ನಿಮ್ಮ ಶಿಷ್ಯ ಎಂದಾಗಿ ಗುರುವಿಗೆ ಆಗುವ ಆನಂದ, ತೃಪ್ತಿ ಯಾವುದೇ ಸನ್ಮಾನದಲ್ಲೂ ಸಿಗುವುದಿಲ್ಲ ಎಂದರು.

ಶಿಡ್ಲಘಟ್ಟ ಕ್ಷೇತ್ರ ಅಭಿವೃದ್ಧಿಗೆ ಎಲ್ಲ ರೀತಿಯ ನೀಡಲಾಗುವುದು. ನನಗೆ ಬರುವ ಎಲ್ಲಾ ಅನುದಾನವನ್ನು ಏಕಕಾಲದಲ್ಲಿ ನಿರ್ಮಿಸುವ ಗುರು ಭವನ, ಅಂಬೇಡ್ಕರ್ ಭವನ ಹಾಗೂ ನೌಕರರ ಭವನಕ್ಕೆ ಮೀಸಲಿಡುವುದಾಗಿ ತಿಳಿಸಿದರು.

ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ

ನಂತರ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್, ತಂದೆ ಮತ್ತು ತಾಯಿ ಹಾಗೂ ಗುರುಗಳಿಗೆ ಯಾರು ಗೌರವವನ್ನು ನೀಡುತ್ತಾರೋ ಅವರು ಈ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಹಾಗೂ ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡುವ ಗುರಿಯನ್ನು ಹೊಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹಿಂದಿನ ಸಾಲಿನಲ್ಲಿ 2 ನೇ ಸ್ಥಾನ ಬಂದಿದ್ದು ಈ ಶೈಕ್ಷಣಿಕ ಸಾಲಿನಲ್ಲಿ 1 ಸ್ಥಾನ ಬರಲು ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕ ಪಿ . ಬೈಲಾಂಜಪ್ಪ , ತಹಶೀಲ್ದಾರ್ ಬಿ.ಎನ್. ಸ್ವಾಮಿ ,ಕಾರ್ಯ ನಿರ್ವಹಣಾಧಿಕಾರಿ ಆರ್. ಹೇಮಾವತಿ , ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಬಾಬು , ಮುಖ್ಯ ಭಾಷಣಕಾರ ಶ್ರೀನಿವಾಸ್ ಮೂರ್ತಿ , ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ , ಉಪಾಧ್ಯಕ್ಷೆ ರೂಪಾ ನವೀನ್ , ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್ , ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ , ಬಿ.ಆರ್. ನಾರಾಯಣ ಸ್ವಾಮಿ, ಎಲ್.ವೆಂಕಟರೆಡ್ಡಿ ಸೇರಿದಂತೆ ನಗರಸಭೆ ಸದಸ್ಯರು ಶಿಕ್ಷಕ ಮುಖಂಡರು ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು .