ಸಾರಾಂಶ
ಬೂತ್ ಅಧ್ಯಕ್ಷರ ಮನೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಲಿತಾ ಅನಪುರ ಭೇಟಿ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ 96ನೇ ಜನ್ಮ ದಿನ ಆಚರಿಸಲಾಯಿತು. ಪಕ್ಷದ ಪದಾಧಿಕಾರಿಗಳು ಮತ್ತು ಸದಸ್ಯರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪ್ರಧಾನ ಕಾರ್ಯದರ್ಶಿ ಜಗದೀಶ ಮೇಂಗಜಿ ಅವರು, ಅಟಲ್ ಬಿಹಾರಿ ವಾಜಪೇಯಿ ಜೀವನ ಸಾಧನೆಗಳ ಕುರಿತು ವಿವರಿಸಿದರು.ಬಿಜೆಪಿ ರಾಜ್ಯ ಘಟಕದ ನೂತನ ಪ್ರಧಾನ ಕಾಯದರ್ಶಿಯಾಗಿ ನಿಯುಕ್ತಿಗೊಂಡ ಮೇಲೆ ಗುರುಮಠಕಲ್ ನಗರಕ್ಕೆ ಆಗಮಿಸಿದ ಲಲಿತಾ ಅನಪೂರ ಅವರು, ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ನಂತರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಾಮುಲು ಕೋಡಗಂಟಿ ಮನೆಗೆ ಭೇಟಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಗೆದ್ದರೆ ದೇಶ ಗೆಲ್ಲುತ್ತೇವೆ ಎನ್ನುವುದು ರಾಜ್ಯಾಧ್ಯಕ್ಷ ಬಿ. ವಿಜಯೇಂದ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಶ್ವಾಸವಾಗಿದೆ. ಅದಕ್ಕೆ ಪೂರಕವಾಗಿ ನಾನು ಕೂಡ ಮತಗಟ್ಟೆ ಹಂತದ ಸಮಿತಿ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕವೇ ಕೆಲಸ ಆರಂಭಿಸಿದ್ದೇನೆ ಎಂದರು.ಬಿಜೆಪಿಯಲ್ಲಿ ಕಾರ್ಯಕರ್ತರೆ ಬೆನ್ನೆಲುಬು. ಘಟಾನುಘಟಿ ನಾಯಕರು ಕೂಡ ಬೂತ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಬೂತ್ ಮಟ್ಟ ಬಹಳ ಪ್ರಾಮುಖ. ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಸಮಿತಿ ಅಧ್ಯಕ್ಷರಿಗೂ ಸಿಗುತ್ತದೆ ಎಂದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಹೋನಗೇರಾ, ಮುಖಂಡರಾದ ಬಾಲಪ್ಪ ಎಲ್ಲಮೊಳ, ಬಸವರಾಜ ನೆಲೋಗಿ, ವಿಜಯಕುಮಾರ ಮೊಗದಂಪುರ, ಶಂಕರ್ ಕಂದಕೂರು, ರಾಮುಲು ಕೊಡಗಂಟಿ, ರಮೇಶ ತಂಡುರಕರ್, ರಾಜು ಸೈದಾಪುರ, ಮೋನಪ್ಪ ಗಚ್ಚಿನಮನಿ, ಚೆನ್ನಪ್ಪ, ಭೀಮು, ಕಾಶಿನಾಥ ಸೇರಿದಂತೆ ಇತರರಿದ್ದರು.