ಸಾರಾಂಶ
ನಾಗಸಾಯಿ ಮಂದಿರದಲ್ಲಿ ಗುರು ಪೂರ್ಣಿಮಾ ಪೂಜಾ ಕಾರ್ಯಕ್ರಮ ನಡೆಯಿತು. ಪಟ್ಟಣದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ನಾಗಸಾಯಿ ಮಂದಿರದಲ್ಲಿ ಶಿರಡಿ ಸಾಯೋ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಗುರು ಪೌರ್ಣಿಮ ಪೂಜಾ ಕಾರ್ಯಕ್ರಮವು ಪ್ರಧಾನ ಅರ್ಚಕರಾದ ವಿ ಮಧುಸೂದನ್ ಸಾನಿಧ್ಯದಲ್ಲಿ ಧಾರ್ಮಿಕವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸ್ವಾಮಿಗೆ ಆಲಭಿಷೇಕ ಮಹಾಮಂಗಳಾರತಿ ಪಲ್ಲಕ್ಕಿ ಉತ್ಸವ ಉಯ್ಯಾಲೋತ್ಸವ ಭಕ್ತರ ಸಮ್ಮುಖದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ನಾಗಸಾಯಿ ಮಂದಿರದಲ್ಲಿ ಗುರು ಪೂರ್ಣಿಮಾ ಪೂಜಾ ಕಾರ್ಯಕ್ರಮ ನಡೆಯಿತು. ಪಟ್ಟಣದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ನಾಗಸಾಯಿ ಮಂದಿರದಲ್ಲಿ ಶಿರಡಿ ಸಾಯೋ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಗುರು ಪೌರ್ಣಿಮ ಪೂಜಾ ಕಾರ್ಯಕ್ರಮವು ಪ್ರಧಾನ ಅರ್ಚಕರಾದ ವಿ ಮಧುಸೂದನ್ ಸಾನಿಧ್ಯದಲ್ಲಿ ಧಾರ್ಮಿಕವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸ್ವಾಮಿಗೆ ಆಲಭಿಷೇಕ ಮಹಾಮಂಗಳಾರತಿ ಪಲ್ಲಕ್ಕಿ ಉತ್ಸವ ಉಯ್ಯಾಲೋತ್ಸವ ಭಕ್ತರ ಸಮ್ಮುಖದಲ್ಲಿ ಜರುಗಿತು.ನಾಗಸಾಯಿ ಮಂದಿರದಲ್ಲಿ ಬೆಳಗ್ಗೆ ಒಂಬತ್ತು ಗಂಟೆಯಿಂದ ವರೆಗೆ ನಾಗ ಸಾಯಿಬಾಬಾ ಉತ್ಸವಮೂರ್ತಿಗೆ ಭಕ್ತರಿಂದ ಹಾಲಿನ ಅಭಿಷೇಕ ಹಾಗೂ ಪಲ್ಲಕ್ಕಿ ಉತ್ಸವ ದೇವಾಲಯದ ಬಡಾವಣೆಯ ಸುತ್ತಲೂ ಪ್ರದಕ್ಷಿಣೆ ನಡೆಯಿತು. ನಾಗಸಾಯಿ ಬಾಬಾ ಉತ್ತಮ ಮೂರ್ತಿ ಪಲ್ಲಕ್ಕಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದಲ್ಲಿ ಗುರುಪೂರ್ಣಿಮಾ ವಿಶೇಷ ಪೂಜೆ ಮಹಾ ಮಂಗಳಾರತಿ ಜರುಗಿತು. ಭಕ್ತಾದಿಗಳಿಗೆ ಪುಳಿಯೋಗರೆ ಮೊಸರನ್ನ ರಾಗಿ ಹಂಬಲಿ ಗುಗ್ಗುರಿ ಮತ್ತು ಪಂಚಾಮೃತ ಅಭಿಷೇಕ ಮಾಡಿದ ಹಾಲು ಭಕ್ತರಿಗೆ ವಿತರಿಸಲಾಯಿತು.