ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ವ್ಯಕ್ತಿಯ ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಶಾರೀರಿಕ ಗಟ್ಟಿ ಬೆಳವಣಿಗೆಯೇ ವ್ಯಕ್ತಿತ್ವ ವಿಕಸನದ ದಾರಿಯಾಗಿದೆ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಲಿ ನಿರ್ದೇಶಕ ಪ್ರೊ.ಕೆ. ಮಂಟೇಲಿಂಗು ಅಭಿಪ್ರಾಯಪಟ್ಟರು.ಪಟ್ಟಣದ ಗುರುಬೂದಿ ಮಂಗಳ ಮಂಟಪದಲ್ಲಿ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸೋಮವಾರ ಆಯೋಜಿಸಿದ್ದ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಜೀವನ ಕೌಶಲಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ನಡೆ, ನುಡಿಯನ್ನು ಇತರರು ನಮ್ಮನ್ನು ಒಪ್ಪಿಕೊಳ್ಳುವಂತಿರಬೇಕು. ಶಕ್ತಿಶಾಲಿ ಶರೀರದಿಂದ ಮಾತ್ರ ಸದೃಢ ಧ್ವನಿ ಬರಲು ಸಾಧ್ಯ. ಜೀವನದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ. ಕಲಿಯುವ ಆಸಕ್ತಿ, ಇತರರು ಹೇಳುವುದನ್ನು ಅಲಿಸುವ ಮನೋಗುಣ ನಿಮ್ಮದಾಗಲಿ. ಮೊದಲು ನಿಮ್ಮನ್ನುನೀವು ಅರ್ಥ ಮಾಡಿಕೊಳ್ಳಿರಿ. ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಹುದುಗಿರುವ ಜಾಣ್ಮೆ, ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಸ್ವಯಂ ನಾವೇ ಮಾಡಿಕೊಳ್ಳಬೇಕು. ನಿಮ್ಮಲ್ಲಿರುವ ಪದಕೋಶಗಳ ಬಳಕೆಯಾಗಲೀ, ವಾಕ್ಚಾತುರ್ಯ, ಗ್ರಹಿಕಾಶಕ್ತಿ ಎಲ್ಲವನ್ನೂ ನೀವೆ ಕಂಡುಕೊಳ್ಳಬೇಕು ಎಂದರು.ಕೊಡಗು ಜಿಲ್ಲೆ ಸಿದ್ದಲಿಂಗಪುರ ಅರಿಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದ ರ್ಶರೀ ರಾಜೇಶ್ ನಾಥ್ ಗುರೂಜಿ ಸಾನಿಧ್ಯ ವಹಿಸಿ, ಆರ್ಶೀವಚನ ನೀಡಿದರು.ಜ್ಞಾನಧಾರ ಎಜುಕೇಷನಲ್ ಫೌಂಡೇಶನ್ ಅಧ್ಯಕ್ಷೆ ಯಮುನಾ ಮಾತನಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಬ್ರಿಲಿಯನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಬಿ. ಪರಮೇಶ್ವರಯ್ಯ ಮಾತನಾಡಿದರು.ಕಾಲೇಜಿನ ಎಂ.ಡಿ. ಡಾ.ಜೆ.ಸಿ. ನಾಗೇಂದ್ರ ಮಾತನಾಡಿದರು. ರಾಷ್ಟ್ರೀಯ ತರಬೇತುದಾರ ಆರ್.ಕೆ. ಬಾಲಚಂದ್ರ, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಕ ಪ್ರಸನ್ನ ಕುಮಾರ ಕೆರಗೋಡು, ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಪಿ.ಎನ್. ಹೇಮಚಂದ್ರ ವಿಶೇಷ ಉಪನ್ಯಾಸ ನೀಡಿದರು.ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್. ರಮೇಶ್, ಪಿರಿಯಾಪಟ್ಟಣ ಅಕ್ಷರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಿ.ವಿ. ವಿಜಯೇಂದ್ರ ವಿದ್ಯಾರ್ಥಿಗಳು, ಪಾಲಕರು ಮತ್ತು ಸಹಪ್ರಾಧ್ಯಾಪಕರು ಇದ್ದರು.ಪ್ರಾಂಶುಪಾಲ ಎಚ್.ಬಿ. ಕಾರ್ತಿಕ್ ಸ್ವಾಗತಿಸಿದರು.