ಸಾರಾಂಶ
ನರಗುಂದ: ಪ್ರಾಚೀನ ಕಾಲದಲ್ಲಿ ಸಂಸ್ಕಾರ ನೀಡಲು ಗುರುಕುಲಗಳಿದ್ದವು. ಜಗತ್ತು ಬೆಳೆದಂತೆಲ್ಲ ಗುರುಕುಲಗಳು ಕಣ್ಮರೆಯಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಸುಕ್ಷೇತ್ರ ವಿರಕ್ತಮಠದ ಶಿವಕುಮಾರ ಶ್ರೀಗಳು ಹೇಳಿದರು.
ತಾಲೂಕಿನ ಹದಲಿ ಗ್ರಾಮದಲ್ಲಿನ ಎಸ್.ಎಲ್. ಖಾನಪ್ಪಗೌಡ್ರ ಪ್ರಾಥಮಿಕ ಶಾಲೆಯ ೧೬ನೇ ವಾರ್ಷಿಕೋತ್ಸವದ ಸಮಾರಂಭದ ಪೂರ್ವದಲ್ಲಿ ಮಕ್ಕಳಿಂದ ತಂದೆ-ತಾಯಿಯರ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತೊಂದರೆಯಿಂದ ಪಾರಾಗಲು ಸಂಸ್ಕಾರದ ಶಿಕ್ಷಣವನ್ನು ಹುಡುಕುವ ಅನಿವಾರ್ಯತೆ ಕಾಲ ಬಂದೇ ಬರುತ್ತದೆ. ಎಲ್ಲ ಸಂಬಂಧಗಳನ್ನು ಒಳಗೊಂಡ ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಸಂಸ್ಕಾರವು ಸಿಗಲು ಸಾಧ್ಯ. ಆದ್ದರಿಂದ ಶಾಲೆಗಳಲ್ಲಿ ಕಲಿಸುವ ಸಂಸ್ಕಾರಯುತ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯಿಂದ ಹೆಚ್ಚು ಕಾಣಬೇಕಾಗಿದೆ. ಸಂಸ್ಕಾರ ಎಂಬುದು ಕೇವಲ ಒಂದು ದಿನದ ಮಟ್ಟಿಗೆ ಸೀಮಿತವಾಗದೇ, ನಿತ್ಯ ನಿರಂತರವಾಗಿರಬೇಕು ಎಂದರು.
ಶಿಕ್ಷಕ ಮಂಜು ಯಲಿಗಾರ ಮಾತನಾಡಿ, ಗ್ರಾಮೀಣ ಭಾಗವೊಂದರಲ್ಲಿ ಖಾಸಗಿ ಶಾಲೆಯೊಂದು ೧೬ ವರ್ಷದಿಂದ ಸಂಸ್ಕಾರ ಭರಿತ ಶಿಕ್ಷಣ ನೀಡುತ್ತಾ ಬಂದಿದೆ ಎಂದರೆ ಇದೊಂದು ವಿಶಿಷ್ಠವಾದ ಸಾಧನೆಯಾಗಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಸಂಗನಗೌಡ ಖಾನಪ್ಪಗೌಡ್ರ ಮಾತನಾಡಿ, ಸಂಸ್ಥೆಗಳು ಕೊಡಮಾಡುವ ಶಿಕ್ಷಣಕ್ಕೆಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ. ಶಿಕ್ಷಕರು ಮತ್ತು ಪಾಲಕರು ಮಗುವಿನ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿಗಳ ಸಾನಿಧ್ಯದಲ್ಲಿ ೮೦ ಜನ ತಾಯಂದಿರ ಪಾದ-ಪೂಜೆಯನ್ನು ಮಕ್ಕಳು ನೆರವೇರಿಸಿದರು. ಎಲ್ಲ ಮಕ್ಕಳಿಗೆ, ತಾಯಂದಿರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಸುರೇಶ ಹಿರೇಮಠ, ಬಸವರಾಜ ಬದ್ನಿಕಾಯಿ, ಭೀಮಪ್ಪ ಹಾದಿಮನಿ, ಯಲ್ಲಪ್ಪಗೌಡ ಆರಟ್ಟಿ, ಸವಿತಾ ಚಿಕ್ಕರಡ್ಡಿ, ಗೀತಾ ಚಲವಾದಿ, ಯಲ್ಲವ್ವ ತಳವಾರ, ಮಲ್ಲಪ್ಪ ಸಂಕದಾಳ, ಹಜರೇಸಾಬ ಮುಲ್ಲಾನವರ, ಮಲ್ಲನಗೌಡ ಕುದರಿ, ಅಶೋಕ ನವಲಗುಂದ, ದಾವಲಬೀ ನರಗುಂದ, ಮಾರುತಿ ಯಾಧವ, ಹನುಮಂತಪ್ಪ ಪವಾರ, ಉಮಾ ಹೆಬಸೂರ, ರೇಣುಕಾ ಮಾಳಶೆಟ್ಟರ, ಶಿವಲೀಲಾ ದೊಡ್ಡಮನಿ, ಅಕ್ಕಮ್ಮ ಯಾವಗಲ್ಲ, ಪಾರ್ವತಿ ನಾಗರಡ್ಡಿ ಸೇರಿದಂತೆ ಮುಂತಾದವರು ಇದ್ದರು.