ಸಾರಾಂಶ
ಚಿಕ್ಕಮಗಳೂರು: ರಾಜ್ಯ ಪರಿಸರ ವೌಲ್ಯಮಾಪನ ಪ್ರಾಧಿಕಾರ (ಸ್ಟೇಟ್ ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸಸ್ಮೆಂಟ್ ಅಥಾರಿಟಿ) ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಗುರುಪ್ರಸಾದ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಲ್ಲಿ ಮೂರೂವರೆ ದಶಕಗಳ ಕಾಲ ಇಂಜಿನಿಯರ್ ಹುದ್ದೆಯಿಂದ ಮುಖ್ಯ ಇಂಜಿನಿಯರ್ ವರೆಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ, ಮೆಟ್ರೋ ಮತ್ತು ಏರ್ ಪೋರ್ಟ್ ಅಭಿವೃದ್ಧಿಗಾಗಿ ಬಿ.ಗುರುಪ್ರಸಾದ್ ಸಲ್ಲಿಸಿದ ಸೇವೆ ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಳುಹಿಸಿದ್ದ ಪ್ರಸ್ತಾವನೆಗೆ, ಕೇಂದ್ರ ಸಮ್ಮತಿ ನೀಡಿ ಆದೇಶ ಹೊರಡಿಸಿದ್ದು, ಕೇಂದ್ರದ ಗೆಜೆಟಿಯರ್‌ನಲ್ಲಿ ಪ್ರಕಟವಾಗಿದೆ. ಪ್ರಾಧಿಕಾರದ ಸದಸ್ಯರಾಗಿ, ಎಚ್.ಎಂ.ಲಕ್ಷ್ಮಿಕಾಂತ ನೇಮಕವಾಗಿದ್ದಾರೆ. ಗುರುಪ್ರಸಾದ್ ಅವರು ಮೂಲ ರೈತ ಕುಟುಂಬದವರಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಳ್ಳೆಕೆರೆಯ (ಬಡೇಗೌಡರ ಮನೆ) ಶ್ರೀಮತಿ ಲಕ್ಷ್ಮಮ್ಮ ಬಸಪ್ಪ ಅವರ ಸುಪುತ್ರರಾಗಿದ್ದಾರೆ.ಪೋಟೋ ಪೈಲ್ ನೇಮ್ 12 ಕೆಸಿಕೆಎಂ 6