ಸಾರಾಂಶ
ಕಸಬಾ ಹೋಬಳಿ ಬೆಳಗುಂಬ ಸೊಸೈಟಿ ಅಧ್ಯಕ್ಷರಾಗಿ ಗುರುಪ್ರಸಾದ್, ಉಪಾಧ್ಯಕ್ಷರಾಗಿ ಬಿ.ಜಿ.ಚೇತನ ಅವಿರೋಧವಾಗಿ ಆಯ್ಕೆಯಾದರು ಎಂದು ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ದೇವರಾಜ್ ಅವರು ಘೋಷಿಸಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ ಸಂಸ್ಥೆ ಮುಖಂಡರು, ಷೇರುದಾರರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳನ್ನು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನಕಸಬಾ ಹೋಬಳಿ ಬೆಳಗುಂಬ ಸೊಸೈಟಿ ಅಧ್ಯಕ್ಷರಾಗಿ ಗುರುಪ್ರಸಾದ್, ಉಪಾಧ್ಯಕ್ಷರಾಗಿ ಬಿ.ಜಿ.ಚೇತನ ಅವಿರೋಧವಾಗಿ ಆಯ್ಕೆಯಾದರು ಎಂದು ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ದೇವರಾಜ್ ಅವರು ಘೋಷಿಸಿದರು.ಬೆಳಗುಂಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆದವರು 11 ನಿರ್ದೇಶಕರ ಬಲವಿರುವ ಸಂಘದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಸಿದ್ದರಾಜು ಉಪಾಧ್ಯಕ್ಷರದ ಕೆಂಪೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೈಲನಹಳ್ಳಿಕೊಪ್ಪಲು ಗ್ರಾಮದ ಗುರುಪ್ರಸಾದ್, ಉಪಾಧ್ಯಕ್ಷ ಸ್ಥಾನಕ್ಕೆ ಹುಣಸೆಕಟ್ಟೆ ಬಿ.ಜಿ. ಚೇತನ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ ಸಂಸ್ಥೆ ಮುಖಂಡರು, ಷೇರುದಾರರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪುಟ್ಟ ಮಲ್ಲೇಗೌಡ, ಸಿದ್ದರಾಜು.ಎ.ಆರ್, ಕಾಂತರಾಜು, ರವೀಂದ್ರನಾಥ, ಕೆಂಪೇಗೌಡ, ನಾಗರಾಜು, ಮಲ್ಲಿಕಾರ್ಜುನಯ್ಯ, ಶೋಭಾ, ಹಾಗೂ ಮುಖಂಡರಾದ ಜಯಣ್ಣ ತೋಂಟದಾರ್ಯ, ಶಿವಕುಮಾರ್ ಸ್ವಾಮಿ, ಚರಣ್, ಪನ್ನ ಸಮುದ್ರ ಮಹೇಶ್ ಕುಮಾರ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಎಚ್.ಟಿ.ಶಿವಮೂರ್ತಿ, ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅರಸೀಕೆರೆ ನಗರ ಅಧ್ಯಕ್ಷರಾದ ಎನ್. ಜಯಕುಮಾರ್, ದಸಂಸ ಹಿರಿಯ ಮುಖಂಡ ಸಂಕೋಡನಹಳ್ಳಿ ಮಂಜುನಾಥ್ ಹಾಗೂ ಮಲ್ಲದೇವಿ ಹಳ್ಳಿ ಮಂಜುನಾಥ್ ಹಾಜರಿದ್ದರು, ನಂತರ ಶಾಸಕರು ಹಾಗೂ ಶಾಸಕ ಕೆ. ಎಂ ಶಿವಲಿಂಗೇಗೌಡರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭಕೋರಿದರು.