ಪರಶುರಾಮವಧೂತರ ಮಠದಲ್ಲಿ ಗುರುಪೂರ್ಣಿಮ

| Published : Jul 23 2024, 12:30 AM IST

ಪರಶುರಾಮವಧೂತರ ಮಠದಲ್ಲಿ ಗುರುಪೂರ್ಣಿಮ
Share this Article
  • FB
  • TW
  • Linkdin
  • Email

ಸಾರಾಂಶ

celebration, special pooja programme

ಮೊಳಕಾಲ್ಮುರು: ತಾಲೂಕಿನ ರಾಂಪುರ ಗ್ರಾಮದ ಶ್ರೀ ಪರಶುರಾಮತಾತನವರ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆಯಿಂದಲೇ ಮಠವನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಹಾಗೂ ದೇವರನ್ನು ವಿಶೇಷವಾಗಿ ಅಲಂಕರಿಸಿ ನಾನಾ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಸತ್ಸಂಗ . ಶ್ರೀದೇವಿ ಪುರಾಣ ಪ್ರವಚನ, ಭಜನೆ ಮತ್ತು ದಾಸೋಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಚಳ್ಳಕೆರೆ ತಾಲೂಕಿನ ವರವು ಗ್ರಾಮದ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಸಮಿತಿ ವ್ಯವಸ್ಥಾಪಕಿ ಜಿ.ವಿ. ಸಾವಿತ್ರಮ್ಮ ಜಿ.ಎಂ.ಮೃತ್ಯುಂಜಯ. ರಾಜೇಶ್ವರಿ, ಪ್ರಿಯಾಂಕ, ಉಮೇಶ್, ಜಿ.ಎ೦.ಬಸವರಾಜ, ಶಾರದ ಭರತೇಶ್ ಕುಮಾರ್ , ಪ್ರಶಾಂತ್ ಉಮಾ, ಜೀ .ರ ಸೋಮಶೇಖರ ಪಾವ೯ತಮ್ಮ ಪುಷ್ಪಾವತಿ ಪಾಲ್ಗೊಂಡಿದ್ದರು.

-----