ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಗುರುಸ್ವಾಮಿ ಭರ್ಜರಿ ಗೆಲುವು ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆ.ಹನೂರು ಪಟ್ಟಣದ ಜಿ.ವಿ ಗೌಡ ಪ್ರೌಢಶಾಲೆಯಲ್ಲಿ ಶನಿವಾರ ನೆಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗುರುಸ್ವಾಮಿ ಹಾಗೂ ಗಿರೀಶ್ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಪ್ರಕ್ರಿಯೆ ನೆಡೆದು ಅಂತಿಮವಾಗಿ ಒಟ್ಟು 19 ಮತಗಳ ಪೈಕಿ ಗುರುಸ್ವಾಮಿ 17 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವುಗಳಿಸಿ ಎರಡನೇ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ ಗಿರೀಶ್ ಕೇವಲ ಎರಡು ಮತಗಳನ್ನು ಪಡೆದು ಸೋಲು ಅನುಭವಸಿದ್ದಾರೆ.
ಈ ಸಂಬಂಧ ಚುನಾವಣಾ ಅಧಿಕಾರಿ ಅಮಲದಾಸ್ ಮಾತನಾಡಿ, ಕನಾರ್ಟಕ ರಾಜ್ಯ ಸರಕಾರಿ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಿ.ಎಸ್. ರಾಮು, ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಮುನಿಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಗುರುಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.ನೂತನ ಅಧ್ಯಕ್ಷ ಹ.ಮಾ ಗುರುಸ್ವಾಮಿ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಬೇಕೆಂಬ ಕನಸಿದ್ದು ಶಾಸಕರು ಹಾಗೂ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿ ಭವನ ನಿರ್ಮಾಣ ಮಾಡಲು ಆದ್ಯತೆ ನೀಡುತ್ತೇನೆ. ಪಿಂಚಣಿ ವ್ಯವಸ್ಥೆ ಮರು ಜಾರಿಗಾಗಿ ಹೋರಾಟದ ಜೊತೆಗೆ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳು ನಿರ್ದೇಶಕರ ಸಹಕಾರ ಮಾರ್ಗದರ್ಶನದೊಂದಿಗೆ ಹನೂರು ಸಂಘವನ್ನು ಮಾದರಿ ಸಂಘವನ್ನಾಗಿಸಲು ಶ್ರಮಿಸುತ್ತೇನೆ ಎಂದರು. ಕರ್ನಾಟಕ ರಾಜ್ಯ ನೌಕರರ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಹಮಾ ಗುರುಸ್ವಾಮಿ ಅವರನ್ನು ಪದಾಧಿಕಾರಿಗಳು ಸಹೋದ್ಯೋಗಿ ಮಿತ್ರರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಕಾರ್ಯದರ್ಶಿ ನಾಗಸಂದ್ರ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಶಿವಮಲ್ಲು, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮಾದೇಶ್ ಸರ್ಕಾರಿ ನೌಕರ ಸಂಘದ ನಿರ್ದೇಶಕರಾದಂತಹ ರಾಮು ಚಂದ್ರನ್ ಶಿಕ್ಷಕರಾದ ಶಾಂತರಾಜು, ವೆಂಕಟರಾಜು, ಮಾದೇಶ್, ರಾಮಲಿಂಗೇಗೌಡ ಶ್ರೀನಿವಾಸ್ ನಾಯ್ಡು, ಸೇರಿದಂತೆ ಇನ್ನಿತರರು ಹಾಜರಿದ್ದರು.