ಹುಬ್ಬಳ್ಳಿ ಸಂತರ ಸಭೆಯಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ
KannadaprabhaNewsNetwork | Published : Oct 13 2023, 12:17 AM IST
ಹುಬ್ಬಳ್ಳಿ ಸಂತರ ಸಭೆಯಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ
ಸಾರಾಂಶ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಾರ ಹುಬ್ಬಳ್ಳಿಯಲ್ಲಿ ಅನೇಕ ಸಾಧು ಸಂತರ ಉಪಸ್ಥಿತಿಯಲ್ಲಿ ಗುರುವಂದನೆ ವೈಭವದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ ತಮ್ಮ 60ನೇ ಜನ್ಮವರ್ಧಂತಿಯಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಾರ ಹುಬ್ಬಳ್ಳಿಯಲ್ಲಿ ಅನೇಕ ಸಾಧು ಸಂತರ ಉಪಸ್ಥಿತಿಯಲ್ಲಿ ಗುರುವಂದನೆ ವೈಭವದಿಂದ ನೆರವೇರಿತು. ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಂಯೋಜಿಸಿದ್ದ ಈ ಸಮಾರಂಭದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ತರಳಬಾಳು ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಶ್ರೀ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಶ್ರೀ ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ, ಹುಬ್ಬಳ್ಳಿ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಶ್ರೀ ರಘುವೀರಾನಂದಜೀ, ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರ ಸ್ವಾಮೀಜಿ, ರಬಕವಿ ಸಂಶಿಯ ಶ್ರೀ ಗುರುಸಿದ್ಧೇಶ್ವರ ಮಹಾ ಸ್ವಾಮೀಜಿಯವರು, ಪಾವಗಡ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಜಪಾನಂದ ಜೀ, ಹುಬ್ಬಳ್ಳಿ ಇಸ್ಕಾನ್ ಶ್ರೀ ಸ್ವಾಮಿ ರಾಜೀವಲೋಚನ ದಾಸ್ ಮೊದಲಾದವರು ಸಾನ್ನಿಧ್ಯವಹಿಸಿ ಶ್ರೀಗಳಿಗೆ ಭಕ್ತರ ಪರವಾಗಿ ತುಲಾಭಾರ ಸಹಿತ ಗುರುವಂದನೆ ಸಲ್ಲಿಸಿ ಸಂದೇಶ ನೀಡಿದರು. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಮಹಾಪೌರ ವೀಣಾ ಭಾರದ್ವಾಜ, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಅಜಿತ್ ಪ್ರಸಾದ್, ಉದ್ಯಮಿ ಶ್ರೀಕಾಂತ ಕೆಮ್ತೂರು, ಶ್ರೀಪಾದ ಸಿಂಗನಮಲ್ಲಿ, ವಿದ್ವಾಂಸರಾದ ಡಾ. ಆನಂದತೀರ್ಥ ನಾಗಸಂಪಿಗೆ, ಡಾ.ಸತ್ಯನಾರಾಯಣಾಚಾರ್ಯ, ಸತ್ಯಮೂರ್ತಿ ಆಚಾರ್ಯ, ಸಮೀರಾಚಾರ್ಯ ಕಂಠಪಲ್ಲಿ ಮೊದಲಾದವರು ಉಪಸ್ಥಿತರಿದ್ದರು. ಸಂತ ಸಮಾವೇಶ: ಶ್ರೀಗಳು ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿಯ ಸದಸ್ಯರೂ ಮತ್ತು ಅಯೋಧ್ಯೆ ರಾಮಮಂದಿರದ ಟ್ರಸ್ಟಿಗಳೂ ಆಗಿರುವ ಹಿನ್ನೆಲೆಯಲ್ಲಿ ಗುರುವಂದನೋತ್ಸವದ ಮೊದಲು ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಎಲ್ಲ ಸಾಧುಸಂತರು ಆಂತರಿಕ ಸಭೆ ಸೇರಿ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಪ್ರಚಲಿತ ವಿದ್ಯಮಾನಗಳ ಕುರಿತು ಗಹನ ಚರ್ಚೆ ನಡೆಸಿದರು.