ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ನಿಂದ ಗುರುವಂದನೆ

| Published : Oct 07 2024, 01:36 AM IST

ಸಾರಾಂಶ

ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಮಾಜ ಸೇವಕ ಡಾ. ರಮೇಶ ಮಹದೇವಪ್ಪನರ ಹೇಳಿದರು.

ಹುಬ್ಬಳ್ಳಿ: ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಮಾಜ ಸೇವಕ ಡಾ. ರಮೇಶ ಮಹದೇವಪ್ಪನರ ಹೇಳಿದರು.

ಅವರು ಇಲ್ಲಿನ ಬೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದೊಂದಿಗೆ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ರವಿಚಂದ್ರ ದೊಡ್ಡಿಹಾಳ ಶಿಕ್ಷಕರೊಂದಿಗೆ ಕೈಜೋಡಿಸಿ ಮಾದರಿ ಶಾಲೆಯನ್ನಾಗಿಸಲು ಶ್ರಮಿಸುತ್ತಿದ್ದು, ಇದೇ ರೀತಿ ಸಮಾಜ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದರು.

ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಳೆಯ ವಿದ್ಯಾರ್ಥಿ ರವಿಚಂದ್ರ ದೊಡ್ಡಿಹಾಳ ಮಾತನಾಡಿ, ಈ ಶಾಲೆಯಲ್ಲಿ ನುರಿತ ಶಿಕ್ಷಕರ ಸಮೂಹವೇ ಇದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಈಚೆಗೆ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಪಡೆದಿರುವುದು ನಮ್ಮ ಶಾಲೆಗೆ ಹೆಮ್ಮೆ ತರುವ ಕೆಲಸವಾಗಿದೆ ಎಂದರು.

ಇದೇ ವೇಳೆ ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ಸಮಾಜ ಸೇವಾ ಕಾರ್ಯ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಕಲ್ಯಾಣಿ ಪಿಳೈ, ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಈಶ್ವರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಸಂತೋಷ ವರ್ಣೆಕರ, ಶಿಕ್ಷಕ ಎಲ್‌.ಐ. ಲಕ್ಕಮ್ಮನವರ ಮಾತನಾಡಿದರು.

ರಾಜು ಕಾಳೆ, ಸಿದ್ಧರಾಜ ಕುಂದಗೋಳ, ಗಂಗಾಧರ ದೊಡ್ಡಿಹಾಳ, ಎಲ್.ಐ. ಲಕ್ಕಮ್ಮನವರ, ಕಲ್ಲಪ್ಪ ಹೊಸಮನಿ, ರವಿ ಮಳಗಿ, ಹೂವಪ್ಪ ದಾಯಗೋಡಿ, ಪವನಕುಮಾರ ಸೇರಿದಂತೆ ಫೌಂಡೇಶನ್‌ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಭಿನಂದನಾರ್ಹ

38 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈಗ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಪಡೆಯುತ್ತಿದ್ದಾರೆ. ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೆ ಕಲಿಕೆಗೆ ಆದ್ಯತೆ ನೀಡಿರುವುದು ಅಭಿನಂದನಾರ್ಹ. ಶಿಕ್ಷಕರೊಂದಿಗೆ ಶಾಲಾ ಎಸ್‌ಡಿಎಂಸಿ ಸದಸ್ಯರು, ಪಾಲಕರು ಕೈಜೋಡಿಸಿದ್ದಾರೆ ಎಂದು ಪವರ್‌ ಆಫ್‌ ಯುಥ್ಸ್‌ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ರವಿಚಂದ್ರ ದೊಡ್ಡಿಹಾಳ ಸಂತಸ ವ್ಯಕ್ತಪಡಿಸಿದರು.