ಮಂಗಳೂರು: ಪರಂಪರೆಯಿಂದ ಬಂದಿರುವ ನಮ್ಮ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಮಹತ್ತರ ಕಾರ್ಯವನ್ನು ಸಂಸ್ಕಾರ ಭಾರತಿ ಸಮರ್ಪಣಾ ಮನೋಭಾವದಿಂದ ನಿರಂತರವಾಗಿ ಮಾಡುತ್ತಿದೆ ಎಂದು ಮಾಜಿ ಸಂಸದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಸಂಸ್ಕಾರ ಭಾರತೀ ಮಂಗಳೂರು ವತಿಯಿಂದ ಐವರು ಹಿರಿಯ ಸಾಧಕರಿಗೆ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಗುರುವಂದನಾ ಪುರಸ್ಕೃತರು: ಸಮಾಜಸೇವಕ ಮಣ್ಣಗುಡ್ಡೆ ಯೋಗೀಶ್ ಆಚಾರ್, ಕುಸ್ತಿ ತರಬೇತುದಾರ ಕೃಷ್ಣ ಯಾನೆ ರಮೇಶ್ ಕರ್ಕೇರಾ, ಹಿರಿಯ ಸಾಧಕಿ ಗುಣವತಿ ಜೆ., ಹಿರಿಯ ದೈವಾರಾಧಕ ಮಿಜಾರು ಮೋಹನ ಶೆಟ್ಟಿಗಾರ್, ಹಿರಿಯ ದೈವಾರಾಧಕ ಕೃಷ್ಣಪ್ಪ ಸಾಲಿಯಾನ್ ಮೊದಲಾದವರಿಗೆ ಗುರುವಂದನೆ ಸಲ್ಲಿಸಲಾಯಿತು.
ನಮ್ಮ ಕುಡ್ಲದ ನವನೀತ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕಲ್ಕೂರ, ಸನಾತನ ನಾಟ್ಯ ಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ಡಾ.ಸತೀಶ್ ರಾವ್, ಸಂಸ್ಕಾರ ಭಾರತೀ ಮಂಗಳೂರು ಮಹಾನಗರದ ಉಪಾಧ್ಯಕ್ಷ ಧನ್‌ಪಾಲ್ ಶೆಟ್ಟಿಗಾರ್, ಮನಪಾ ನಿಕಟ ಪೂರ್ವ ಸದಸ್ಯರಾದ ಜಗದೀಶ್ಶೆಟ್ಟಿ, ಗಣೇಶ್ ಆಚಾರ್, ವೆಂಕಟೇಶ್ ಆಚಾರ್, ಸಂಗೀತ, ನೃತ್ಯ ಗುರು ವಿದುಷಿ ಶಾರದಾ ಮಣೆ ಶೇಖರ್, ರಾಜಶ್ರೀ ಉಳ್ಳಾಲ್, ಶ್ರೀಲತಾ ನಾಗರಾಜ್, ಸಿಂಚನ, ಶ್ರೀಧರ್ ಹೊಳ್ಳ, ಬೈಕಾಡಿ ಪ್ರತಿಷ್ಠಾನ ರತ್ನಾವತಿ ಬೈಕಾಡಿ, ಭರತ್ ಬೈಕಾಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸುದರ್ಶನ್, ವಿಶ್ವ ಹಿಂದೂ ಪರಿಷತ್‌ನ ಗೋಪಾಲ ಕುತ್ತಾರ್, ಆಶಿಕ್ ಗೋಪಾಲಕೃಷ್ಣ, ಸಂಸ್ಕಾರ ಭಾರತೀಯ ಪದಾಧಿಕಾರಿಗಳಾದ ಧನಪಾಲ್, ರಘುವೀರ್, ನಾಗರಾಜ್, ಮಾಧವ ಭಂಡಾರಿ, ಗಣೇಶ್, ಕಿರಣ್, ಪ್ರವೀಣ್ ಬಸ್ತಿ, ಸುಜೀರ್ ವಿನೋದ್, ಶ್ರೀಪತಿ, ರಾಮ, ಶಿರೂರು, ಚಂದ್ರಪ್ರಭ, ರಾಜಶ್ರೀ, ಜಯಶ್ರೀ, ಸುಮಂಗಲ, ಪ್ರವೀಣ ಅರವಿಂದ, ರಾಜೇಶ್ವರಿ, ಶ್ಯಮಂತ್ ಕೌಶಿಕ್, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ನಿಕಟ ಪೂರ್ವ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮತ್ತಿತರರು ಇದ್ದರು.
ನಾಗರಾಜ್ ಶೆಟ್ಟಿ ವಂದಿಸಿದರು.
