ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜ.12ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ನೇಹ ಸಮ್ಮಿಲನ ಗೆಳೆಯರ ಬಳಗದ ರಾಜ ಬಕ್ಷು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಳ್ಳಿಯ ಸರ್ಕಾರಿ ಪ್ರೌಡಶಾಲೆಯಲ್ಲಿ 1997-98ರ ಸಾಲಿನ ವಿಧ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಬೆಳಗ್ಗೆ 10 ಗಂಟೆಗೆ ನಿವೃತ್ತ ಮುಖ್ಯೋಪಾಧ್ಯಯ ಎನ್.ಮಹೇಶ್ವರಪ್ಪ ನಾಗಲೀಕರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಶಿವರುದ್ರಪ್ಪ ಎಸ್.ಜಿ. ವಹಿಸಲಿದ್ದಾರೆ. ವಿ.ಬಿ. ಕೊಟ್ರೇಶ್ ಕರ್ನಾಟಕ ಪಬ್ಲಿಕ್ ಶಾಲೆ ಬನ್ನಿಕೋಡು ಉಪನ್ಯಾಸ ನೀಡುವರು. ವಿಶೇಷ ಆಹ್ವಾನಿತರಾಗಿ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಪೊಲೀಸ್ ಉಪ ನಿರೀಕ್ಷಕ ಪ್ರಭು ಕೆಳಗಿನಮನಿ ಆಗಮಿಸುವರು. ಪ್ರೌಢಶಾಲೆ ನಿವೃತ್ತ ಶಿಕ್ಷಕರು ಮತ್ತು ಸಿಬ್ಬಂದಿ ಇರುವರು ಎಂದು ಮಾಹಿತಿ ನೀಡಿದರು.
ಬಳಗದ ಎ.ಎಚ್.ರುದ್ರೇಶ್ ಮಾತನಾಡಿ, 28 ವರ್ಷದ ನಂತರ ನಮ್ಮೆಲ್ಲ ಸ್ನೇಹಿತರನ್ನು ಒಂದೆಡೆ ಸೇರಿಸುವ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಇದರ ಸವಿನೆನಪಿಗಾಗಿ ನಾವು ಕಲಿತ ಶಾಲೆಗೆ ಅವಶ್ಯಕತೆಯಿರುವ ಸೌಲಭ್ಯಗಳ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಳಗದ ಕೆ.ಎಂ.ಗಣೇಶ್, ಎಚ್.ಎನ್.ಪ್ರವೀಣ್, ಜಿ.ಎಚ್.ರವಿಕುಮಾರ್, ಕೆ.ಎಂ.ರವಿಕುಮಾರ್, ಬಿ.ಎನ್.ಮಂಜುನಾಥ್, ಬಿ.ಮಂಜುನಾಥ್ ಹಾಗೂ ಇತರರಿದ್ದರು.
- - - -10ಎಚ್‍ಆರ್‍ಆರ್05:ಸುದ್ದಿಗೋಷ್ಠಿಯಲ್ಲಿ ಸ್ನೇಹ ಸಮ್ಮಿಲನ ಗೆಳೆಯರ ಬಳಗ ಮುಖಂಡ ರಾಜ ಬಕ್ಷು ಮಾತನಾಡಿದರು. ಎ.ಎಚ್.ರುದ್ರೇಶ್, ಕೆ.ಎಂ.ಗಣೇಶ್, ಎಚ್.ಎನ್. ಪ್ರವೀಣ್ ಇತರರಿದ್ದರು.