ಸಾರಾಂಶ
ಸಾಮೂಹಿಕವಾಗಿ ತಮ್ಮ ಗುರುಗಳಿಗೆ ಫಲತಾಂಬೂಲ ನೀಡಿ ಗೌರವಿಸುವ ಮೂಲಕ ಆಶೀರ್ವಾದ ಪಡೆದುಕೊಂಡರು. ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯರಿಗೆ ಬಾಗಿನ ಅರ್ಪಣೆ ಮಾಡಿ ಸಹೋದರ- ಸಹೋದರಿಯ ಬಾಂಧವ್ಯದೊಂದಿಗೆ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಮಗೆ ಪಾಠ ಕಲಿಸಿ ಉತ್ತಮ ಸ್ಥಾನಕ್ಕೆ ಹೋಗಲು ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಗುರುವಂದನೆಯನ್ನು ಸಲ್ಲಿಸಿದರು.ಪ್ರೌಢಶಾಲೆ ವಿಭಾಗದ 1994 - 97ರ ಅವಧಿಯಲ್ಲಿ 8 ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ಅಂದು ಪ್ರೌಢಶಾಲೆ ಶಿಕ್ಷಕರಾಗಿದ್ದ ಜೆ.ಜಿ.ರಾಜೇಗೌಡ, ಎಂ.ಎನ್.ನಾಗೇಶ್, ಬಿ.ಎನ್.ಪರಶಿವಮೂರ್ತಿ, ಸ್ವಾಮೀಗೌಡ, ಸುರೇಶ್ ಹಂಚಿನಾಳ್, ವೆಂಕಟರಾಮ್ ಮತ್ತು ಶ್ರೀನಿವಾಸಮೂರ್ತಿ ಅವರನ್ನು ಗ್ರಾಮದ ಮುಖ್ಯ ರಸ್ತೆಯಿಂದ ತಳಿರು ತೋರಣಗಳಿಂದ ಸಿಂಗರಿಸಿದ ಎತ್ತಿನಗಾಡಿಯಲ್ಲಿ ಶಾಲೆ ಆವರಣದ ವೇದಿಕೆವರೆಗೆ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ಕರೆದುಕೊಂಡು ಬಂದು ಗುರುವಂದನೆ ಸಲ್ಲಿಸಿದರು.
ಒಂದೇ ಶಾಲೆಯಲ್ಲಿ ಕಲಿತು ಈಗ ಬೇರೆಡೆ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿರುವ 50ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿರು. ಶಾಲಾ ಅವಧಿಯಲ್ಲಿ ತಾವು ಮಾಡುತ್ತಿದ್ದ ಹಾಸ್ಯ, ತುಂಟತನ, ಶಿಕ್ಷಕರು ಪಾಠ ಕಲಿಸಲು ತಮಗೆ ನೀಡುತ್ತಿದ್ದ ಶಿಕ್ಷೆಗಳನ್ನು ನೆನಪಿಸಿಕೊಂಡರು. ಅಕ್ಷರ ಕಲಿಸಿಕೊಟ್ಟು ಲೋಕದ ಜ್ಞಾನ ಹೇಳಿಕೊಟ್ಟು ಬದುಕಿಗೆ ಉತ್ತಮ ಮಾರ್ಗ ತೋರಿದ ಶಿಕ್ಷಕರ ಪಾದಕ್ಕೆ ನಮಸ್ಕಾರ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿದರು.ಸಾಮೂಹಿಕವಾಗಿ ತಮ್ಮ ಗುರುಗಳಿಗೆ ಫಲತಾಂಬೂಲ ನೀಡಿ ಗೌರವಿಸುವ ಮೂಲಕ ಆಶೀರ್ವಾದ ಪಡೆದುಕೊಂಡರು. ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯರಿಗೆ ಬಾಗಿನ ಅರ್ಪಣೆ ಮಾಡಿ ಸಹೋದರ- ಸಹೋದರಿಯ ಬಾಂಧವ್ಯದೊಂದಿಗೆ ಸಂಭ್ರಮಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯನ್ನು ತಳಿರು- ತೋರಣಗಳಿಂದ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಜಯಕೀರ್ತಿ, ಪ್ರೇಮ್‌ಕುಮಾರ್, ಅಶ್ವಿನಿ, ಧನಂಜಯ, ಎಚ್.ಎಸ್.ಲೋಕೇಶ್, ಮೋಹನ್‌ಕುಮಾರ್, ಸಂತೋಷ, ರಾಣಿ, ರಾಣಿ, ಎಂ.ಜೆ.ವೀರಭದ್ರ, ಸುನೀತ, ಕುಸುಮ, ಸೌಮ್ಯ, ಎನ್.ಜಿ.ಬಾಬು, ಎಂ.ಎಸ್.ಯೋಗೇಶ್, ಶಿವಕುಮಾರ, ಚಂದ್ರಶೇಖರ್, ಹರೀಶ್.ಡಿ.ಎಸ್, ರಾಘವೇಂದ್ರ, ಎಲ್.ಆರ್.ಕುಮಾರಾಚಾರಿ, ಪಾರ್ವತಿ, ಡಿ.ಎಂ.ಸೌಮ್ಯ. ಶೈಲಜಾ, ಕೆ.ಆರ್.ಸುಧಾಮಣಿ, ಎಂ.ಟಿ.ರೇವಣ್ಣ, ಧನಂಜಯ, ಎ.ಎಸ್, ಉಮೇಶ್, ಪ್ರಸಾದ್ ಟಿ. ಮಹೇಶ, ಟಿ.ಎಸ್.ಶ್ರೀನಿವಾಸ್, ಎಚ್.ಜೆ.ಸತೀಶ್, ಲೀಲಾವತಿ, ಕಾಂತಾಮಣಿ, ಎಂ.ಬಿ.ನಿಂಗೇಗೌಡ, ರಘು, ಪ್ರಭಾಕರ, ನಟೇಶಬಾಬು, ಸುರೇಶ್, ಗೀತಾ.ಎಚ್.ಕೆ. ಗಿರಿಜ, ಡಿ.ಸಿ.ರೇವಣ್ಣ, ನಿತ್ಯಾನಂದ, ಪ್ರಸನ್ನ, ಮನೋಹರ್, ಬಾಲಸುಬ್ರಹ್ಮಣ್ಯ ಸೇರಿದಂತೆ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.