ಗುಟ್ಕಾ ಪ್ಯಾಕೇಟ್ ಕಳವು: ನಾಲ್ವರು ಪೊಲೀಸರ ವಶ

| Published : Jul 17 2024, 12:51 AM IST

ಸಾರಾಂಶ

ಗೋದಾಮಿನ ಬಾಗಿಲು ಮುರಿದು ಸಾವಿರಾರು ರು. ಮೌಲ್ಯದ ಗುಟ್ಕಾ ಪ್ಯಾಕೆಟ್‌ಗಳನ್ನು ಕಳವು ಮಾಡಿದ್ದ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರನ್ನು ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ: ಗೋದಾಮಿನ ಬಾಗಿಲು ಮುರಿದು ಸಾವಿರಾರು ರು. ಮೌಲ್ಯದ ಗುಟ್ಕಾ ಪ್ಯಾಕೆಟ್‌ಗಳನ್ನು ಕಳವು ಮಾಡಿದ್ದ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರನ್ನು ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಎಂ.ಜಿ. ರಸ್ತೆಯ ಎಸ್‌ಸಿಎಸ್ ಟ್ರೇಡರ್ಸ್ ಅಂಗಡಿ ಮೇಲಿನ ಗೋದಾಮಿನಲ್ಲಿ ಮಾರಾಟಕ್ಕಿಟ್ಟಿದ್ದ ಡಾಗ್ ಸೂಪರ್ ಪಾನ್ ಮಾಸಾಲ (₹49800), ಡಾಗ್ ವಿಮಲ್ ಪಾನ್ ಮಸಾಲಾ (₹50200), 1 ಚೀಲ ತಂಬಾಕು (₹20,700) ಕಳುವಾದ ಕುರಿತು ಗೋದಾಮು ಮಾಲೀಕ ಎಸ್.ಹಿಮಾಂತ್ ರಾಜ್ ಬಡಾವಣೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಎಂ., ಸಂತೋಷ, ಮಂಜುನಾಥ ಜಿ. ಮತ್ತು ಬಸವ ನಗರ ಠಾಣೆ ಪೊಲೀಸ್ ನಿರೀಕ್ಷಕ ಗುರು ಬಸವರಾಜ ನೇತೃತ್ವದಲ್ಲಿ ಪಿಎಸ್‌ಐ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು. ರಾತ್ರಿ ಗಸ್ತು ಮಾಡುತ್ತಿದ್ದಾಗ ಬೈಕ್‌ಗಳಲ್ಲಿ ತಿರುಗಾಡುತ್ತಿದ್ದ ಮಹಮ್ಮದ್ ಅಲಿ ಹಾಗೂ ಇತರೆ ಮೂವರು ಅಪ್ರಾಪ್ತರನ್ನು ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಗುಟ್ಕಾ ಪ್ಯಾಕೆಟ್‌ಗಳನ್ನು ಕದ್ದ ಪ್ರಕರಣ ಬೆಳಕಿಗೆ ಬಂದಿದೆ.

- - - (-ಫೋಟೋ: ಸಾಂದರ್ಭಿಕ ಚಿತ್ರ)