ಎಚ್‌.ಬಿ. ನವೀನ್‌ ಕುಮಾರ್‌ ಅವಿರೋಧ ಆಯ್ಕೆ

| Published : Oct 24 2025, 01:00 AM IST

ಸಾರಾಂಶ

ನವೀನ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಪ್ರಕಟ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಬಿ. ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.ಸಂಘದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಬಿ. ನವೀನ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಪ್ರಕಟಿಸಿದರು.ಚುನಾವಣಾ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಎಂ. ರಾಜೇಗೌಡ, ನಿರ್ದೇಶಕರಾದ ಎಸ್.ಬಿ. ಹುಚ್ಚೇಗೌಡ, ವಿವೇಕಾನಂದ, ಎಚ್‌.ಎನ್. ರಮೇಶ್. ಎಚ್.ಆರ್. ಕೃಷ್ಣಮೂರ್ತಿ, ಸಿ.ಎಂ. ರಾಜೇಗೌಡ, ಎಚ್.ಆರ್. ಮಹೇಶ್, ಕಮಲಮ್ಮ,‌ಪಾರ್ಥಯ್ಯ, ಕೆಂಪನಾಯಕ ಇದ್ದರು.ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಜೆಡಿಎಸ್ ಮುಖಂಡರಾದ ಬಿ. ರಮೇಶ್, ಎಚ್.ಕೆ. ಕೀರ್ತಿ, ವಕೀಲರಾದ ಉದಯ್, ಮನೋಹರ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.