ಎಚ್‌.ಡಿ.ದೇವೇಗೌಡರ ಹುಟ್ಟುಹಬ್ಬ: ಪರಿಸರ ಸಂರಕ್ಷಕರನ್ನು ಅಭಿನಂದಿಸಿದ ನಿಖಿಲ್

| Published : Jul 01 2025, 12:47 AM IST

ಎಚ್‌.ಡಿ.ದೇವೇಗೌಡರ ಹುಟ್ಟುಹಬ್ಬ: ಪರಿಸರ ಸಂರಕ್ಷಕರನ್ನು ಅಭಿನಂದಿಸಿದ ನಿಖಿಲ್
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌.ಡಿ.ದೇವೇಗೌಡರಿಗೆ ಮಂಡ್ಯ ಜಿಲ್ಲೆಯೆಂದರೆ ವಿಶೇಷ ಪ್ರೀತಿ ಇದೆ. ನಮ್ಮ ತಾತ ಎಚ್‌ಡಿಡಿ ಅವರು ಮಂಡ್ಯ ಮತ್ತು ಹಾಸನ ಜಿಲ್ಲೆಗಳು ನನ್ನ ಎರಡು ಕಣ್ಣುಗಳು ಎಂದಿದ್ದಾರೆ. ದೇವೇಗೌಡರೇ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ವಯೋಸಹಜ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗಿಲ್ಲ. ಏನೇ ಆಗಲಿ ನಿಮ್ಮ ಪ್ರೀತಿ ವಿಶ್ವಾಸವನ್ನು ಅವರು ಮರೆಯೊಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹಾಲಹಳ್ಳಿ ಚೆನ್ನಯ್ಯ ಪಾರ್ಕ್‌ನಲ್ಲಿ ಜೆಡಿಎಸ್‌ ಜಿಲ್ಲಾ ಘಟಕ, ಪಾರ್ಕ್‌ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸಂರಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಎಚ್‌.ಡಿ.ದೇವೇಗೌಡರಿಗೆ ಮಂಡ್ಯ ಜಿಲ್ಲೆಯೆಂದರೆ ವಿಶೇಷ ಪ್ರೀತಿ ಇದೆ. ನಮ್ಮ ತಾತ ಎಚ್‌ಡಿಡಿ ಅವರು ಮಂಡ್ಯ ಮತ್ತು ಹಾಸನ ಜಿಲ್ಲೆಗಳು ನನ್ನ ಎರಡು ಕಣ್ಣುಗಳು ಎಂದಿದ್ದಾರೆ ಎಂದರು.

ದೇವೇಗೌಡರೇ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ವಯೋಸಹಜ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗಿಲ್ಲ. ಏನೇ ಆಗಲಿ ನಿಮ್ಮ ಪ್ರೀತಿ ವಿಶ್ವಾಸವನ್ನು ಅವರು ಮರೆಯೊಲ್ಲ ಎಂದರು.

ಇದೇ ವೇಳೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಮಂಗಲ ಎಂ.ಯೋಗೀಶ್, ಕುಳ್ಳೇಗೌಡ, ದರ್ಶನ್‌, ರಾಜಣ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್‌, ಸದಸ್ಯ ರಾಮಲಿಂಗಯ್ಯ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಚೆನ್ನಯ್ಯ ಪಾರ್ಕ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಬಿ.ಅರವಿಂದ್‌ ಕುಮಾರ್, ಮುಖಂಡರಾದ ಸಂತೋಷ್‌ ಕಾಳೇನಹಳ್ಳಿ, ಹಾಲಹಳ್ಳಿ ಮಹೇಶ್‌ ಸೇರಿದಂತೆ ನಿವಾಸಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷರಾಗಿ ಶ್ವೇತ ಆಯ್ಕೆ

ಮದ್ದೂರು: ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷರಾಗಿ ಎಂ.ಸಿ.ಶ್ವೇತ ಶಶಿಗೌಡ ಆಯ್ಕೆಯಾಗಿದ್ದಾರೆ. ಸಂಸ್ಥೆ ಕಾರ್ಯದರ್ಶಿಯಾಗಿ ಪದ್ಮ ಪಲ್ಲವಿ, ಖಜಾಂಚಿಯಾಗಿ ಜಯ ರಮೇಶ್, ಎಡಿಟರ್ ಧನಲಕ್ಷ್ಮಿ ರಾಜೇಶ್, ಐಎಸ್‌ಒ ವಿಶಾಲ ರಾಜು ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಪದಗ್ರಹಣ ಸಮಾರಂಭ ಜುಲೈ 12 ರಂದು ಬೆಂಗಳೂರಿನ ನಿಮಾನ್ಸ್ ಆಡಿಟೋರಿಯಂ ನಲ್ಲಿ ನಡೆಯಲಿದೆ.