ಎಚ್.ಡಿ. ದೇವೇಗೌಡರ ಕುಶಲೋಪರಿ ವಿಚಾರಿಸಿದ ಶಾಸಕ

| Published : Apr 28 2024, 01:22 AM IST

ಸಾರಾಂಶ

ಸಾಲಿಗ್ರಾಮದಿಂದ ಕೆ.ಆರ್.ಪೇಟೆ ಮಾರ್ಗವಾಗಿ ದೇವೇಗೌಡರು ಆಗಮಿಸುತ್ತಿರುವ ಸುದ್ದಿ ತಿಳಿದ ಜೆಡಿಎಸ್ ಮುಖಂಡರು, ಅಭಿಮಾನಿಗಳು ಪ್ರವಾಸಿ ಮಂದಿರ ವೃತ್ತದ ಬಳಿ ಸೇರಿದ್ದರು.

ಕೆ.ಆರ್.ಪೇಟೆ: ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಶಾಸಕ ಎಚ್ .ಟಿ.ಮಂಜು ಕುಶಲೋಪರಿ ವಿಚಾರಿಸಿದರು. ಸಾಲಿಗ್ರಾಮದಿಂದ ಕೆ.ಆರ್.ಪೇಟೆ ಮಾರ್ಗವಾಗಿ ದೇವೇಗೌಡರು ಆಗಮಿಸುತ್ತಿರುವ ಸುದ್ದಿ ತಿಳಿದ ಜೆಡಿಎಸ್ ಮುಖಂಡರು, ಅಭಿಮಾನಿಗಳು ಪ್ರವಾಸಿ ಮಂದಿರ ವೃತ್ತದ ಬಳಿ ಸೇರಿದ್ದರು. ಅಲ್ಲಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಶಾಸಕ ಮಂಜು ಜೊತೆ ಕೆಲ ನಿಮಿಷಗಳ ಕಾಲ ಚರ್ಚಿಸಿದರು. ಅಭಿಮಾನಿಗಳು ದೇವೇಗೌಡರಿಗೆ ಜೈಕಾರ ಹಾಕುತ್ತಾ ಕಾರನ್ನು ಸುತ್ತುವರಿದರು. ಕುಮಾರಣ್ಣ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಮಾನಿಗಳು ಕೂಗಿದರು. ಎಲ್ಲರಿಗೂ ನಗುಮುಖದಿಂದಲೇ ನಮಸ್ಕರಿಸಿ ಗೌಡರು ಅಲ್ಲಿಂದ ತೆರಳಿದರು. ಮನ್ಮುಲ್ ನಿರ್ದೇಶಕ ಡಾಲುರವಿ, ತಾಪಂ ಮಾಜಿ ಸದಸ್ಯ ಮೋಹನ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್‌ ಕುಮಾರ್, ಜೆಡಿಎಸ್ ಮುಖಂಡರಾದ ಹೆರಗನಹಳ್ಳಿ ಬಸವರಾಜು, ಮಂಜೇಗೌಡ, ಕೆಂಪರಾಜು, ಕೃಷ್ಣೇಗೌಡ, ತಾಲೂಕು ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಜಿ.ಎಚ್.ಬಾಬು, ವಾಸು, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿ ಹಲವರಿದ್ದರು.