ಚನ್ನಗಿರಿ: ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಎಚ್‌.ಎನ್‌.ಜಗದೀಶ್‌

| Published : Jul 20 2025, 01:15 AM IST

ಸಾರಾಂಶ

ಚನ್ನಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎನ್.ಜಗದೀಶ್ ಮತ್ತು ಉಪಾಧ್ಯಕ್ಷರಾಗಿ ಎಂ.ಬಿ.ಸಾಕಮ್ಮ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- ಉಪಾಧ್ಯಕ್ಷರಾಗಿ ಸಾಕಮ್ಮ । ಅವಿರೋಧ ಆಯ್ಕೆ ಘೋಷಣೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎನ್.ಜಗದೀಶ್ ಮತ್ತು ಉಪಾಧ್ಯಕ್ಷರಾಗಿ ಎಂ.ಬಿ.ಸಾಕಮ್ಮ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಈ ಸೊಸೈಟಿಯಲ್ಲಿ 12 ಚುನಾಯಿತ ಸದಸ್ಯರಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಎಸ್.ಯೋಗೀಶ್, ಉಪಾಧ್ಯಕ್ಷರಾಗಿದ್ದ ಪಿ.ಎನ್. ಬಸಮ್ಮ ರಾಜೀನಾಮೆಯಿಂದ ತೆರವುಗೊಂಡಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಎಚ್.ಎನ್.ಜಗದೀಶ್, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಸಾಕಮ್ಮ ಅವರಿಂದ ಮಾತ್ರ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆದ್ದರಿಂದ ಚುನಾವಣಾಧಿಕಾರಿ, ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ವಿಜಯ ಅವರು ಜಗದೀಶ್ ಅಧ್ಯಕ್ಷರಾಗಿ ಮತ್ತು ಎಂ.ಬಿ.ಸಾಕಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ.ನಾಗರಾಜ್, ಪಿ.ಬಿ.ನಾಯಕ, ಕಾಫಿಪುಡಿ ಶಿವಾಜಿ ರಾವ್, ಬಿ.ಎಸ್.ಯೋಗೇಶ್, ಕೆ.ಎಂ. ನಿಂಗೋಜಿರಾವ್, ನಾಗರಾಜಾಚಾರ್, ವೆಂಕಟೇಶ್, ಬಸಮ್ಮ, ಪರಮೇಶ್ವರಪ್ಪ, ನಾಗರಾಜ್, ಮೋಹನ್, ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಕೆ.ಹೆಚ್.ಸಂತೋಷ್, ಸುನೀಲ್ ಕುಮಾರ್, ಗುರುರಾಜ್ ಮತ್ತಿತರರು ಹಾಜರಿದ್ದರು.

- - -

-19ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಎಚ್.ಎನ್. ಜಗದೀಶ್ ಮತ್ತು ಎಂ.ಬಿ.ಸಾಕಮ್ಮ ಅವರನ್ನು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಮುಖಂಡರು ಅಭಿನಂದಿಸಿದರು.