ಪಲ್ಲಾಗಟ್ಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧ ಆಯ್ಕೆ

| Published : Jun 17 2024, 01:33 AM IST

ಪಲ್ಲಾಗಟ್ಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

- ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ಭರವಸೆ - - - ಜಗಳೂರು: ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

ಪಲ್ಲಾಗಟ್ಟೆ ಗ್ರಾ.ಪಂ.ನಲ್ಲಿ 22 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ರೇಣುಕಮ್ಮ ಗುರುಮೂರ್ತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಸಮಯಕ್ಕೆ ಸರಿಯಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಪಂ ಪ್ರಭಾರ ಇಒ ಮಿಥುನ್ ಕಿಮಾವತ್ ಘೋಷಿಸಿದರು.

ನೂತನ ಅಧ್ಯಕ್ಷೆ ಎಚ್.ರೇಣುಕಮ್ಮ ಗುರುಮೂರ್ತಿ ಮಾತನಾಡಿ, ಎಲ್ಲ ಸದಸ್ಯರು, ಅಧಿಕಾರಿಗಳ ಸಹಕಾರದೊಂದಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವೆ. ಆಯ್ಕೆ ಮಾಡಿದ ಸದಸ್ಯರು, ಸಹಕರಿಸಿದ ಗ್ರಾಪಂ ವ್ಯಾಪ್ತಿಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಚುನಾವಣೆಯಲ್ಲಿ ಸದಸ್ಯರಾದ ಬಸವರಾಜ್, ರತ್ನಮ್ಮ ಗೈರುಹಾಜರಾಗಿದ್ದರು. ಪಿಡಿಒ ಶಶಿಧರ ಪಾಟೀಲ್, ಪಲ್ಲಾಗಟ್ಟೆ ಗ್ರಾಪಂ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಸದಸ್ಯರಾದ ವೀರೇಶ್, ಬಿದ್ದಾಡಪ್ಪ, ಗೋಡೆ ಸಿದ್ದೇಶ್, ಶಿವಗಂಗಮ್ಮ, ಮಂಜಕ್ಕ, ಮುರುಗೇಶ್, ಶೇಖರಪ್ಪ, ಜಿ.ಕೆ. ಶೇಖರಪ್ಪ, ಎಸ್.ಎನ್. ಬಸವರಾಜ್, ಯಲ್ಲಮ್ಮ, ರತ್ನಮ್ಮ, ದಿವ್ಯ, ರಮಿಜಾ, ಕಲ್ಲೇಶ್, ನಾಗರಾಜು, ಚಂದ್ರಮ್ಮ, ಹೊನ್ನೂರಮ್ಮ, ಗಾಯಿತ್ರಮ್ಮ, ಮುಖಂಡರಾದ ಗೋಡೆ ಪ್ರಕಾಶ್, ಗುರುಮೂರ್ತಿ ಇತರರು ಉಪಸ್ಥಿತರಿದ್ದರು.

- - -

-15ಜೆ.ಜಿ.ಎಲ್.1:

ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಆಯ್ಕೆಯಾಗಿದ್ದು, ಅಭಿನಂದಿಸಲಾಯಿತು.