ಏಕಾಗ್ರತೆಗೆ ಹೆಸರುವಾಸಿ ಭಗೀರಥ ಮಹರ್ಷಿ

| Published : May 15 2024, 01:35 AM IST

ಸಾರಾಂಶ

ಭಗೀರಥ ಮಹರ್ಷಿಗಳು ತನ್ನ ಏಕಾಗ್ರತೆ, ಸಾಹಸ, ಗುರುಭಕ್ತಿಯಿಂದ, ಸತತ ಪ್ರಯತ್ನದ ಫಲನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದಲೇ ಭಗೀರಥ ಪ್ರಯತ್ನ ಎಂಬ ನಾಣ್ನುಡಿ ಎಲ್ಲೆಡೆ ಜನಜನಿತವಾಗಿದೆ. ಸಮಸ್ತ ಮನುಕುಲದ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜೀವ ಮುಡಿಪಾಗಿಟ್ಟು ಘೋರ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಯವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಮನುಕುಲದ ಒಳತಿಗಾಗಿ ತನ್ನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ಗಂಗೆಯನ್ನೇ ಭೂಮಿಗೆ ಕರೆದು ತಂದ ಕೀರ್ತಿ ಭಗೀರಥ ಮಹರ್ಷಿಗಳಿಗೆ ಸಲ್ಲುತ್ತದೆ ಎಂದು ತಾಪಂ ಮಾಜಿ ಸದಸ್ಯ ಹಾಗೂ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್. ಮೂಗಶೆಟ್ಟಿ ಹೇಳಿದರು.

ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಬಳಿಯಿರುವ ತಾಲೂಕು ಉಪ್ಪಾರ ಜನಾಂಗದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಅವರು ಮಾತನಾಡಿದರು.

ಭಗೀರಥ ಮಹರ್ಷಿಗಳು ತನ್ನ ಏಕಾಗ್ರತೆ, ಸಾಹಸ, ಗುರುಭಕ್ತಿಯಿಂದ, ಸತತ ಪ್ರಯತ್ನದ ಫಲನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದಲೇ ಭಗೀರಥ ಪ್ರಯತ್ನ ಎಂಬ ನಾಣ್ನುಡಿ ಎಲ್ಲೆಡೆ ಜನಜನಿತವಾಗಿದೆ. ಸಮಸ್ತ ಮನುಕುಲದ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜೀವ ಮುಡಿಪಾಗಿಟ್ಟು ಘೋರ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಯವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಾಲಚಂದ್ರು ಮಾತನಾಡಿ, ಸಮಾಜ ಸುಧಾರಕರು ಹಾಗೂ ದಾರ್ಶನಿಕರು ಯಾವುದೇ ಸಮುದಾಯಕ್ಕೆ ಸೀಮಿತವಾಗಿಲ್ಲ, ಮನುಕುಲದ ಉದ್ಧಾರಕ್ಕೆ ಶ್ರಮಿಸಿರುವ ಅವರೆಲ್ಲರೂ ಸಮಾಜದ ಎಲ್ಲ ಜನರಿಗೆ ಪ್ರಾತಸ್ಮರಣೀಯರಾಗಿದ್ದಾರೆ. ಈ ನಿಟ್ಟಿನಲ್ಲಿ ದೃಢ ಸಂಕಲ್ಪ ಹಾಗೂ ಅಚಲವಾದ ವಿಶ್ವಾಸದ ಮೂಲಕ ದೇವನದಿ ಎಂಬ ಹಿರಿಮೆಯನ್ನು ಹೊಂದಿರುವ ಗಂಗೆಯನ್ನು ಭೂಮಿಗೆ ತರುವ ಮೂಲಕ ಭಗೀರಥ ಮಹರ್ಷಿಗಳು ಸದಾಕಾಲಕ್ಕೂ ಚಿರಸ್ಥಾಯಿಯಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ನಗರಸಭಾ ಮಾಜಿ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ನಗರಸಭಾ ಸದಸ್ಯೆ ಮಹದೇವಮ್ಮ, ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದರಾಜು, ಉಪ್ಪಾರ ಜನಾಂಗದ ಗೌರವಾಧ್ಯಕ್ಷ ಬಾಲಚಂದ್ರು, ಕಾರ್ಯದರ್ಶಿ ನಾಗರಾಜು, ಮುಖಂಡರಾದ ಹೆಮ್ಮರಗಾಲಸೋಮಣ್ಣ, ಅಣ್ಣಯ್ಯಶೆಟ್ಟಿ, ಶ್ರೀನಿವಾಸ್, ಮುರುಗೇಶ್, ಶಿವಮೂರ್ತಿ, ಕಾಳಪ್ಪ, ರಂಗಸ್ವಾಮಿ, ಅಂಕಶೆಟ್ಟಿ ಇದ್ದರು.