ಸಾರಾಂಶ
ಹಡಪದ ಅಪ್ಪಣ್ಣನವರು ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ತಾರತಮ್ಯ, ಮೌಢ್ಯಗಳನ್ನು ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ದಾರಕ್ಕೆ ಆದರ್ಶವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿಹಡಪದ ಅಪ್ಪಣ್ಣನವರು ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ತಾರತಮ್ಯ, ಮೌಢ್ಯಗಳನ್ನು ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ದಾರಕ್ಕೆ ಆದರ್ಶವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೂರಾರು ಶರಣ ಗಣಗಳಲ್ಲಿ ಅಪ್ಪಣ್ಣನವರನ್ನು ನಿಜಶರಣ ಹಾಗೂ ಯೋಗ್ಯ ವ್ಯಕ್ತಿ ಎಂದು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು. ಅಲ್ಲದೇ ಅವರ ಪತ್ನಿಯು ವಚನಕಾರ್ತಿಯಾಗಿರುವುದು ಎಲ್ಲ ಹಡಪದ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಮರಿಯಪ್ಪ ನಾಟೇಕರ್ ಮಾತನಾಡಿ, ಅನುಭವ ಮಂಟಪದ ಜವಾಬ್ದಾರಿ ಹೊತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸಲಹೆ ನೀಡಿದ್ದಾರೆ. ಹಡಪದ ಅಪ್ಪಣ್ಣನವರು ಹಲವು ವಚನಗಳ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿದ ಕಾಯಕ ಜೀವಿ ಎಂದರು.ಈ ವೇಳೆ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಭಾಗಣ್ಣ ಇಟಗಿ, ಅಯ್ಯಣ್ಣ, ಮಲ್ಲಿಕಾರ್ಜುನ್, ಬಸಣ್ಣ, ಅಂಬರೀಶ್ ವಡಗೇರಾ ಸೇರಿದಂತೆ ಇತರರಿದ್ದ