ಹಡಪದ ಅಪ್ಪಣ್ಣ ಅವರು ವಿಶ್ವಾಸಕ್ಕೆ ಚ್ಯುತಿಬಾರದಂತೆ ಕೆಲಸ: ಸಹಾಯಕ ಪ್ರಾಧ್ಯಾಪಕಿ ಎಲ್.ಲತಾ

| Published : Jul 31 2024, 01:01 AM IST

ಹಡಪದ ಅಪ್ಪಣ್ಣ ಅವರು ವಿಶ್ವಾಸಕ್ಕೆ ಚ್ಯುತಿಬಾರದಂತೆ ಕೆಲಸ: ಸಹಾಯಕ ಪ್ರಾಧ್ಯಾಪಕಿ ಎಲ್.ಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಕಾಲಮಾನದಲ್ಲಿ ಶುಭ ಕಾರ್ಯಕ್ಕೆ ಹೊರಟಾಗ ಅಪಶಕುನ ಎಂದು ಬಗೆಯುವ ಜನರಿರುವ ಈ ಸಮಾಜದಲ್ಲಿ 900 ವರ್ಷಗಳ ಹಿಂದೆಯೇ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೂಲಕ ಬಸವಣ್ಣವರ ವಿಶ್ವಾಸಕ್ಕೆ ದಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅವರ ಪ್ರೀತಿಗೆ ಪಾತ್ರರಾಗಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರು ವಿಶ್ವಾಸಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಲ್. ಲತಾ ಮಂಗಳವಾರ ಹೇಳಿದರು.ಪಟ್ಟಣದ ತಾಲೂಕ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಸವಿತಾ ಸಮಾಜ ಹಾಗೂ ಭಜಂತ್ರಿ ಸೇವಾ ಸಂಘದ ಸಹ ಯೋಗದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಾಗತಿಕ ಕಾಲಮಾನದಲ್ಲಿ ಶುಭ ಕಾರ್ಯಕ್ಕೆ ಹೊರಟಾಗ ಅಪಶಕುನ ಎಂದು ಬಗೆಯುವ ಜನರಿರುವ ಈ ಸಮಾಜದಲ್ಲಿ 900 ವರ್ಷಗಳ ಹಿಂದೆಯೇ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೂಲಕ ಬಸವಣ್ಣವರ ವಿಶ್ವಾಸಕ್ಕೆ ದಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅವರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸವಿತಾ ಸಮಾಜದ ಮಹನೀಯರನ್ನು ಅಭಿನಂದಿಸಲಾಯಿತು. ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರತಿಮಾ ಪ್ರವೀಣ್, ಸವಿತಾ ಸಮಾಜದ ಅಧ್ಯಕ್ಷ ರಾಮಲಿಂಗಯ್ಯ, ಗೌರವಾಧ್ಯಕ್ಷ ರಮೇಶ, ಉಪಾಧ್ಯಕ್ಷ ಶಶಿಕುಮಾರ, ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ಟಿ.ಎಸ್. ಸುರೇಶ, ಖಜಾಂಚಿ ಮಂಜುನಾಥ, ಪದಾಧಿಕಾರಿಗಳಾದ ವೈರಮುಡಿ, ಶೇಖರ್, ವೆಂಕಟಪತಿ, ಶ್ರೀನಿವಾಸ್, ಅಪ್ಪಣ್ಣ, ಶಂಕರ್, ದಲಿತ ಮುಖಂಡರಾದ ನಿಂಗಯ್ಯ, ಮರಳಿಗ ಶಿವರಾಜು, ಶಶಿಕುಮಾರ್, ರಮಾನಂದ, ದಾಕ್ಷಾಯಿಣಿ ಮತ್ತಿತರರು ಇದ್ದರು.

ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ರಾಮಕೃಷ್ಣ ಆಯ್ಕೆಮದ್ದೂರು:ಲಯನ್ಸ್ ಸಂಸ್ಥೆ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ರಾಮಕೃಷ್ಣೇಗೌಡ ಲಿಂಗನದೊಡ್ಡಿ, ಕಾರ್ಯದರ್ಶಿಯಾಗಿ ಸಿದ್ದಯ್ಯ ಹಾಗೂ ಖಜಾಂಚಿಯಾಗಿ ಪಿ.ಕೆ.ಸುಧಾಕರ ಆಯ್ಕೆಯಾಗಿದ್ದಾರೆ.

ಪಟ್ಟಣದ ಮಳವಳ್ಳಿ ರಸ್ತೆ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ಜುಲೈ 31 ನಡೆಯುವ ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷರಾಗಿ ರಾಮಕೃಷ್ಣೇಗೌಡ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವಳಗೇರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿ.ಆಶಾರಾಣಿ ಹಾಗೂ ಕೆಸ್ತೂರು ಮಾತಾ ಕ್ಲಿನಿಕ್ ನ ಡಾ.ಎ.ವಿ.ಉಮೇಶ್ ಅವರನ್ನು ಅಭಿನಂದಿಸಲಾಗುವುದು.