ಸಾರಾಂಶ
ಯಲಬುರ್ಗಾ
ಬಸವಣ್ಣನವರಿಗೆ ಆಪ್ತರಾಗಿದ್ದ ಹಡಪದ ಅಪ್ಪಣ್ಣನವರು ಕಾಯಕ ನಿಷ್ಠರಾಗಿದ್ದರು ಎಂದು ಗ್ರೇಡ್-೨ ತಹಸೀಲ್ದಾರ್ ವಿರುಪಣ್ಣ ಹೊರಪೇಟಿ ಹೇಳಿದರು.ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಪಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೧೨ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಅಪ್ಪಣ್ಣ ಒಬ್ಬರಾಗಿದ್ದು. ಪ್ರತಿಯೊಬ್ಬರೂ ಕಾಯಕ ನಂಬಿ ಬದುಕಬೇಕು. ವೃತ್ತಿ ಗೌರವಿಸಬೇಕು. ನಿಜಶರಣ ಅಪ್ಪಣ್ಣ ಅವರ ಬಗ್ಗೆ ತಿಳಿದುಕೊಳ್ಳಬೇಕು. ಅವರ ತತ್ವಾದರ್ಶವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಎಂದರು.ಸಮಾಜದ ನಿಕಟಪೂರ್ವ ಅಧ್ಯಕ್ಷ ಶಿವಪ್ಪ ಶಾಸ್ತ್ರಿ ಮಾತನಾಡಿ, ಅನ್ಯ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ನಿಮ್ಮಲ್ಲಿರುವ ವೈಷಮ್ಯ ದೂರವಾಗಬೇಕು. ಸಮುದಾಯ ಸಂಘಟನೆಯಾಗಬೇಕು ಎಂದು ಹೇಳಿದರು.
ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಶಿಕ್ಷಕ ಬಸವರಾಜ ಕೊಂಡಗುರಿ ಉಪನ್ಯಾಸ ನೀಡಿದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಪಪಂ ಸದಸ್ಯರಾದ ಡಾ. ನಂದಿತಾ ಶಿವನಗೌಡ ದಾನರಡ್ಡಿ, ರೇವಣಪ್ಪ ಹಿರೇಕುರುಬರ, ಹನುಮಂತ ಭಜಂತ್ರಿ, ಮುಖ್ಯಾಧಿಕಾರಿ ನಾಗೇಶ, ಸಮಾಜದ ಅಧ್ಯಕ್ಷ ಈರಪ್ಪ ಹಡಪದ, ಗಣ್ಯರಾದ ಶೇಖರಗೌಡ ಉಳ್ಳಾಗಡ್ಡಿ, ಸಂಗಣ್ಣ ತೆಂಗಿನಕಾಯಿ, ಹಂಪಣ್ಣ ಹಡಪದ, ಸಂಗಪ್ಪ ಕೊಪ್ಪಳ, ಅಧಿಕಾರಿಗಳಾದ ನಿಂಗನಗೌಡ ಪಾಟೀಲ್, ವೀರೇಶ ಅಂಗಡಿ, ರಾಜು ಹಡಪದ, ಶಿಕ್ಷಕರಾದ ಮೆಹಬೂಬ್ ಬಾದಶ, ಬಸವರಾಜ ಕೊಂಡಗುರಿ, ತಹಸಿಲ್ ಸಿಬ್ಬಂದಿ ಹನುಮಗೌಡ ಪಾಟೀಲ್ ಇದ್ದರು.
ಹಿರೇವಂಕಲಕುಂಟಾ:ತಾಲೂಕಿನ ಹಿರೇವಂಕಲಕುಂಟಾ ಗ್ರಾಪಂ ಕಚೇರಿಯಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಶಾಸ್ತ್ರಿಹಿರೇಮಠ, ಬಸವರಾಜ ತಳವಾರ, ಶರಣಪ್ಪ ಸಜ್ಜನ್, ಹನುಮಂತಪ್ಪ ಹಡಪದ, ಮಂಜುನಾಥ ಹಡಪದ, ಬಸವರಾಜ ಹಡಪದ, ಅಶೋಕ ಹಡಪದ, ಶಿವಪುತ್ರಪ್ಪ ಹಡಪದ, ಮಹಾಂತೇಶ ಹಡಪದ, ರವೀಂದ್ರ ಹಡಪದ, ಗ್ರಾಪಂ ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ಕರವಸೂಲಿಗಾರ ಬಸಯ್ಯ, ಸಂಗಮೇಶ, ಚೈತ್ರಾ ಇದ್ದರು.
ಬಂಡಿ ಗ್ರಾಪಂ ಕಚೇರಿಯಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ, ಉಪಾಧ್ಯಕ್ಷೆ ಕಳಕಮ್ಮ ಹೊರಪೇಟಿ, ಸದಸ್ಯರಾದ ಬಸಪ್ಪ ತೊಂಡಿಹಾಳ, ಕಳಕಪ್ಪ ದುಗಲದ, ಪಿಡಿಒ ನಾಗೇಶ ನಾಯ್ಕ, ಗಣ್ಯರಾದ ಕಾಮಪ್ಪ ಹೊರಪೇಟಿ, ಶರಣಪ್ಪ ಅಂಗಡಿ, ಹನುಮಂತಪ್ಪ ಹಡಪದ, ಕಲ್ಲಪ್ಪ ತೊಂಡಿಹಾಳ, ಚಂದ್ರಶೇಖರ ಹಡಪದ, ಕಳಕಪ್ಪ ಹಡಪದ, ಸುಭಾಷ ಹಡಪದ, ಕಲ್ಲಪ್ಪ ಹಡಪದ, ಬಸವರಾಜ ಹಡಪದ, ಬಸಪ್ಪ ಹಡಪದ, ಶರಣಪ್ಪ ಹಡಪದ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.