ಮಾನವೀಯತೆಯ ಜಾಗೃತಿ ಮೂಡಿಸಿದ ಹಡಪದ ಅಪ್ಪಣ್ಣ

| Published : Jul 11 2025, 11:48 PM IST

ಸಾರಾಂಶ

ಸೆಂಟ್ ಜೊಸೇಫ್ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕಿ ಜಯಶೀಲಾ, ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರವಾರ: ಬಸವಣ್ಣನ ಸಮಕಾಲೀನರೂ, ಅವರ ಆಪ್ತ ಕಾರ್ಯದರ್ಶಿಯೂ ಆಗಿದ್ದ ಹಡಪದ ಅಪ್ಪಣ್ಣ ಜಾತಿ ವ್ಯವಸ್ಥೆ , ಮೌಢ್ಯತೆ ಸಾಮಾಜಿಕ ನ್ಯೂನತೆಯನ್ನು ಹೋಗಲಾಡಿಸಲು ವಚನಗಳ ಮೂಲಕ ಮಾನವೀಯತೆಯನ್ನುಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ಕಾರಣಭೂತರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಎಂದು ಹೇಳಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಹಡಪದ ಅಪ್ಪಣ್ಣ ಜಯಂತಿಯನ್ನು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಸೆಂಟ್ ಜೊಸೇಫ್ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕಿ ಜಯಶೀಲಾ, ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿವನಿತಾ ಶೆಟ್ ನಿರೂಪಿಸಿ, ವಂದಿಸಿದರು. ರಾಯಚೂರಿನ ಮಹಾಲಕ್ಷ್ಮೀ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.