ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆಯಿಂದ ಹಡಿಲು ಭೂಮಿ ನಾಟಿ ಕಾರ್ಯಕ್ರಮ

| Published : Aug 22 2025, 02:00 AM IST

ಸಾರಾಂಶ

ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಕೆಂಜಾರು ಗ್ರಾಮದ ತಿದ್ಯಾ ಕಂಬಳ ಗುತ್ತಿನವರ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ನಾಟಿ ಕಾರ್ಯಕ್ರಮ ನಡೆಯಿತು.

ಮೂಲ್ಕಿ: ಎಕ್ಕಾರಿನ ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಕೆಂಜಾರು ಗ್ರಾಮದ ತಿದ್ಯಾ ಕಂಬಳ ಗುತ್ತಿನವರ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ನಾಟಿ ಕಾರ್ಯಕ್ರಮ ನಡೆಯಿತು.ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಮುರ ಸದಾಶಿವ ಶೆಟ್ಟಿ ಎಕ್ಕಾರು ಅಧ್ಯಕ್ಷತೆವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ, ಉಪ ಕೃಷಿ ನಿರ್ದೇಶಕರಾದ ಕುಮುದಾ ಸಿ.ಎನ್., ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ರೈಯವರು ರೈತ ಉತ್ಪಾದನಾ ಸಂಸ್ಥೆಗಳಿಗೆ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ತಿದ್ಯಾ ಕಂಬಳ ಗುತ್ತಿನ ಗಡಿ ಪ್ರಧಾನ ರಮೇಶ್ ಚೌಟ, ಸಂಸ್ಥೆಯ ನಿರ್ದೇಶಕರಾದ ಪ್ರದೀಪ್ ಕುಮಾರ್ ಸುವರ್ಣ, ಸುರೇಶ್ ಶೆಟ್ಟಿ, ಸುದೀಪ್ ಅಮೀನ್, ಪ್ರವೀಣ್ ಮಾಡ, ತಾರಾನಾಥ ಶೆಟ್ಟಿ, ಸೌಮ್ಯ ರೈ, ಜಯರಾಮ್ ಡಿ. ಶೆಟ್ಟಿ, ಜೀತೇಂದ್ರ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೂಪೇಶ್, ತಿದ್ಯಾ ಕಂಬಳ ಗುತ್ತಿನ ನಿತಿನ್ ಶೆಟ್ಟಿ, ಸ್ಥಳೀಯರಾದ ಸದಾನಂದ ರೈ, ದಿನೇಶ್ ಶೆಟ್ಟಿ, ವನಜಾ ಶೆಟ್ಟಿ, ಕೇಶವ ಶೆಟ್ಟಿ, ಸತೀಶ್ ಶೆಟ್ಟಿ ಬೈಲು, ಸುನೇತ್ರ ಶೆಟ್ಟಿ ಮತ್ತು ಅನೇಕ ರೈತ ಸದಸ್ಯರು ಉಪಸ್ಥಿತರಿದ್ದರು.ಕೃಷಿಯ ಪ್ರಾತ್ಯಕ್ಷಿಕೆ ವೀಕ್ಷಿಸಲು ಕೆಂಜಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ಮರವೂರು ಭಾಗವಹಿಸಿದ್ದರು.