ಸಾರಾಂಶ
ಮಳೆಯಿಲ್ಲದೇ ಕಂಗಾಲಾದ ರೈತರು ಮಲೇಬೆನ್ನೂರು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿ ಕಂಡಿದ್ದಾರೆ. ಆದರೆ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಭತ್ತ ಬೆಳೆ ಹಾಳಾಗಿ, ಲಕ್ಷಾಂತರ ರು. ನಷ್ಟ ತಂದಿದೆ.
ಮಲೇಬೆನ್ನೂರು: ಮಳೆಯಿಲ್ಲದೇ ಕಂಗಾಲಾದ ರೈತರು ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿ ಕಂಡಿದ್ದಾರೆ. ಆದರೆ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಭತ್ತ ಬೆಳೆ ಹಾಳಾಗಿ, ಲಕ್ಷಾಂತರ ರು. ನಷ್ಟ ತಂದಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಉಕ್ಕಡಗಾತ್ರಿ ಸ.ನಂ. ೩೧, ೩೨, ೩೩ನಲ್ಲಿ ಬಹುಪಾಲು, ವಾಸನ, ನಂದಿಗುಡಿ ಗ್ರಾಮಗಳ ಸ.ನಂ.ನಲ್ಲಿ ಸುಮಾರು ೬೦ ಎಕರೆ ಭತ್ತದ ಬೆಳೆಗೆ ಹಾನಿಯಾಗಿದೆ. ಭತ್ತದ ತೆನೆ ಜಲಾವೃತವಾಗಿದೆ. ೨೦ ಎಕರೆ ಭತ್ತ ಬೆಳೆ ನಷ್ಟಕ್ಕೀಡಾಗಿದೆ.ಸಂಜೀವ ರೆಡ್ಡಿ, ಕರಿಯಪ್ಪ ಹೊತ್ತಿಗೆ, ಹನುಮಂತಪ್ಪ ಶಿವಣ್ಣರ, ಕರಿಬಸಪ್ಪ, ಶೇಖರಗೌಡ, ಸುನಿಲ್ ಹರ್ಲಪ್ಪರ ಹಾಗೂ ಮತ್ತಿತರ ರೈತರ ಜಮೀನುಗಳಿಗೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಶೀಘ್ರ ಪರಿಹಾರ ನೀಡಬೇಕು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರಪ್ಪ ಕಂದೋಡ್ ಒತ್ತಾಯಿಸಿದ್ದಾರೆ.
- - - -ಚಿತ್ರ-೩: ಭಾರೀ ಮಳೆಗೆ ಭತ್ತದ ಬೆಳೆ ಹಾಳಾಗಿರುವುದು.-ಚಿತ್ರ-೪: ಮಳೆ ಸುರಿದ ವೇಳೆ ಸಂಗ್ರಹಿಸಿದ ಆಲಿಕಲ್ಲು ರಾಶಿ.