ಸಾರಾಂಶ
ದೇವದುರ್ಗ ಪಟ್ಟಣದ ಅಬುಮೊಹಲ್ಲಾದಲ್ಲಿ ಹಜ್ ಯಾತ್ರೆಗೆ ತೆರಳುತ್ತಿರುವವರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಶುಭ ಕೋರಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ಲೋಕ ಕಲ್ಯಾಣಕ್ಕಾಗಿ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಹಜ್ ಯಾತ್ರೆ ತೆರಳುತ್ತಿರುವ ಹಬೇದಾ ಬೇಗಂ ಮತ್ತು ರಾಜ್ ಇವರ ಶ್ರಮ ಮತ್ತು ನಿರ್ಧಾರ ಸ್ವಾಗತರ್ಹ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಪಟ್ಟಣದ ಅಬುಮೊಹಲ್ಲಾದಲ್ಲಿ ಸೋಮವಾರ ಹಜ್ ಯಾತ್ರೆಗೆ ತೆರಳುತ್ತಿರುವವರಿಗೆ ಶುಭ ಕೋರಿ ಮಾತನಾಡಿ, ಅನೇಕ ಹಿರಿಯರ, ಶರಣರ, ಅಭಿಪ್ರಾಯಗಳನ್ನು ಕೇಳಿದ್ದೇನೆ. ಇದು ಸುಲಭವಾದ ಯಾತ್ರೆಯಲ್ಲ, ಸಾಕ್ಷಾತ್ ಅಲ್ಲಾನನ್ನು ನಮ್ಮೂರಿಗೆ, ನಮ್ಮ ತಾಲೂಕಿಗೆ ಕರೆದುಕೊಂಡು ಬರುವ ನಿಷ್ಠಾವಂತ ಆಧ್ಯಾತ್ಮಿಕ ಪ್ರಯತ್ನವಾಗಿದೆ ಎಂದರು.
ನನಗೂ ಕೂಡ ಹಜ್ ಯಾತ್ರಿಗಳು ನೀಡಿರುವ ಪ್ರಸಾದದಿಂದ ಕಲ್ಯಾಣವಾಗಿದೆ. ಎಲ್ಲಾ ಯಾತ್ರಿಗಳು ನಾಡಿನ ಕಲ್ಯಾಣಕ್ಕಾಗಿ ಅಲ್ಲಾನನ್ನು ಪ್ರಾರ್ಥಿಸಿ, ಶಾಂತಿಯುತ ವಾತಾವರಣಕ್ಕಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಹನುಮಂತ್ರಾಯ ನಾಯಕ ಚಿಂತಲಕುಂಟಿ ವಕೀಲರು, ದಾವೂದ್ ಔಂಟಿ, ಬಾಬಾ ಸಿಂಧನೂರು, ಬಂದೇನವಾಜ್ ನಾಗಡದಿನ್ನಿ, ಕೌಸರ ಬೇಗಂ, ಮಹಿಬೂಬು ಹಟ್ಟಿ, ಮಹಿಮೂದ್ ಸಾಬ್, ಅಯೂಬ್, ಹಜ್ ಯಾತ್ರಿಗಳಾದ ಹಬೇದಾ ಬೇಗಂ, ರಾಜ್ ಸೇರಿ ಅನೇಕರಿದ್ದರು.