ಹಲಗೂರು: ಕುಬಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

| Published : Jan 27 2025, 12:47 AM IST

ಸಾರಾಂಶ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿರಂತರ ಹೋರಾಟದ ಪ್ರತಿಫಲ ಮತ್ತು ಕಠಿಣ ಪರಿಶ್ರಮದಿಂದ ದೇಶಕ್ಕೆ ಉತ್ತಮ ಸಂವಿಧಾನ ದೊರಕಿದೆ. ಅಂಬೇಡ್ಕರ್ ಅವರ ಸಂವಿಧಾನದಿಂದ ನಾಗರೀಕರು ಇಂದು ಉತ್ತಮ ಜೀವನ ನಡೆಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿರಂತರ ಹೋರಾಟದ ಪ್ರತಿಫಲ ಮತ್ತು ಕಠಿಣ ಪರಿಶ್ರಮದಿಂದ ದೇಶಕ್ಕೆ ಉತ್ತಮ ಸಂವಿಧಾನ ದೊರಕಿದೆ ಎಂದು ಕುಬಾ ಮಸೀದಿ ಗುರು ಉಮರ್ ಫಾರೂಕ್ ಹೇಳಿದರು.

ಕುಬಾ ಮಸೀದಿಯಲ್ಲಿ 76 ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದಿಂದ ನಾಗರೀಕರು ಇಂದು ಉತ್ತಮ ಜೀವನ ನಡೆಸುವಂತಾಗಿದೆ ಎಂದರು.

ನಿವೃತ್ತ ಶಿಕ್ಷಕ ಮರಿದಾಸಪ್ಪ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಎಲ್ಲಾ ಜನರಿಗೂ ಸಮಾನ ಹಕ್ಕುಗಳನ್ನು ದೊರಕಿದೆ. ಇದರಿಂದ ಎಲ್ಲಾ ಧರ್ಮದ ಜನರು ಬ್ರಾತೃತ್ವ ಸಹೋದರತೆಯಿಂದ ಜೀವನ ಸಾಗಿಸಬೇಕು ಎಂದರು.

ಈ ವೇಳೆ ಮಸೀದಿ ಗುರುಗಳಾದ ಮುನ್ನಾ ಬಾಯ್, ಮಹಮದ್ ಜುಬೇದ್, ಉನ್ನಿಸ್- ಉರ್-ರೆಹಮಾನ್, ಕುಬಾ ಮಸೀದಿ ಅಧ್ಯಕ್ಷರಾದ ಹಫೀಜ್ ಉಲ್ಲಾ ಉರ್ಫ್ ವಂದ್ರಿ ಬಾಬು, ಉಪಾಧ್ಯಕ್ಷ ಶೇಕ್ ಮೊಕ್ತಾರ್, ಕಾರ್ಯದರ್ಶಿ ಇಮ್ತಿಯಾಜ್, ಖಜಾಂಚಿ ಮೊಹಮದ್ ಹನೀಫ್, ಸದಸ್ಯರಾದ ಸಾದಿಕ್ ಪಾಷಾ, ಗ್ರಾಪಂ ಸದಸ್ಯರಾದ ಜಮೀಲ್ ಪಾಷಾ, ನಿವೃತ್ತ ಶಿಕ್ಷಕ ಮರಿದಾಸಪ್ಪ, ಮುಖಂಡರಾದ ಸೋಹೇಲ್, ಅಶ್ರಫ್ ಉಲ್ಲಾ, ಅಕ್ರಂ, ಉಬೇದ್, ಅಕ್ಬರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆದಿಚುಂಚನಗಿರಿಯಲ್ಲಿ ಶ್ರೀಗಳಿಂದ ಧ್ವಜಾರೋಹಣ

ನಾಗಮಂಗಲ:

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 76 ನೇ ಗಣರಾಜ್ಯೋತ್ಸವದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಥಸಂಚಲನ ನಡೆಸಿ ಶ್ರೀಗಳು ಮತ್ತು ಗಣ್ಯರಿಗೆ ಧ್ವಜವಂದನೆ ಸಲ್ಲಿಸಿದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಮೆರಿಕಾದ ಎಂಜಿನೀಯರ್ ಡಾ.ಬಾಬು ಕೀಲಾರ, ಮಂಡ್ಯ ಡಿವೈಎಸ್‌ಪಿ ಅಮಿತ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನಾರಾಯಣಸ್ವಾಮಿ, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್, ಹಾಸನ ಲ್ಯಾನ್ಸ್‌ನಾಯಕ್ ಆರ್ಮಿ ಎಲ್‌ಡಿಫನ್ಸ್ ಜಿ.ಉಮೇಶ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.