ಸಾರಾಂಶ
ಕನ್ನಡಪ್ರಭ ವಾರ್ತೆ ವಾಡಿ
ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ಜಾತ್ರೆ ನ.15 ರಿಂದ ಆರಂಭಗೊಳ್ಳಲಿದೆ ಎಂದು ಮಠದ ಪೀಠಾಧಿಪತಿ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಅಧ್ಯಕ್ಷರಾದ ಶ್ರೀ ಮುನಿಂದ್ರ ಶಿವಾಚಾರ್ಯರು ತಿಳಿಸಿದ್ದಾರೆ.ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಸಭಾಂಗಣದಲ್ಲಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಪೋಸ್ಟರ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ನ.15ರಂದು ರಾತ್ರಿ 10 ಗಂಟೆಗೆ ಅಂಬಲಿ ಬಂಡಿ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಚಿಕ್ಕವೀರಪ್ಪ ಮನೆಯಿಂದ ಮೈಲಾರಾಲಿಂಗ ದೇವಸ್ಥಾನ ವರೆಗೆ ನಡೆಯಲಿದೆ. 16 ರಂದು ಸಂಜೆ 4 ರಿಂದ 6 ವರೆಗೆ ರುದ್ರ ಬಸಣ್ಣ ಹಾಗು ಚೌಡಮ್ಮ ಗಂಗಾಸ್ಥಲ್ಲ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನ. 17ರಂದು ರಾತ್ರಿ 11ಗಂಟೆಗೆ ಪಲ್ಲಕ್ಕಿ ಸೇವಾ ಹಾಗು ಸಕಲ ವಾದ್ಯಗಳೊಂದಿಗೆ ಶೆಟ್ಟಿ ಅವರ ಮನೆಯವರೆಗೆ ನಡೆಯಲಿದೆ 18 ರಂದು ರಾತ್ರಿ 1ಕ್ಕೆ ಮಲ್ಯನ ದೇವಸ್ಥಾನದಲ್ಲಿ ಕಳ್ಳ ಸರಪಳಿ ಕಾರ್ಯಕ್ರಮ, 19 ರಂದು 4 ರಿಂದ ರಾತ್ರಿ 11ಗಂಟೆಗೆ ವರೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ದೈವದ ಸರಪಳಿ, ಅಗ್ನಿ ಪ್ರವೇಶ ಹಾಗೂ ಪುರಂದರ ಸೇವೆ ನಡೆಯಲಿದೆ. ನ.20ರಂದು ಸಾಯಂಕಾಲ 4 ರಿಂದ 6 ಗಂಟೆ ವರೆಗೆ ಚೌಡಮ್ಮನ ಆಡುವಿಕೆ ಹಿರೇಮಠದಲ್ಲಿ ಉಡಿ ತುಂಬಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.ಶಶಿಧರ ದೇಶಮುಖ ಅವರ ಮನೆಯಿಂದ ಕುಂಭ ತರುವ ಕಾರ್ಯಕ್ರಮ ನಡೆಯಲಿದ್ದು, ನಂತರ ವೀರಭದ್ರೇಶ್ವರ ರಥೋತ್ಸವ ನಡೆಯಲಿದೆ ಎಂದು ಮುನಿಂದ್ರ ಶಿವಾಚಾರ್ಯ ಕಟ್ಟಿ ಮನಿ ಹಿರೇಮಠ್ ತಿಳಿಸಿದರು.
ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಇದು ಒಂದು ಐತಿಹಾಸಿಕ ಜಾತ್ರೆ. ಇಲ್ಲಿ ಸಾಕ್ಷಾತ್ಕಾರ ವೀರಭದ್ರೇಶ್ವರ ರಾಕ್ಷಸನು ಸಂಹಾರ ಮಾಡಿದ ಸ್ಥಳ. ಇದು ಇಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದಂತೆ ಜಾತ್ರೆಯಲ್ಲಿ ಜನರು ಸಹಕಾರ ನೀಡುತ್ತಾರೆಂದರು.ಈ ಸಂದರ್ಭದಲ್ಲಿ ವೀರಭದ್ರೇಶ್ವರ ಚಾರಿಟೇಬಲ್ ಕಾರ್ಯದರ್ಶಿ ಚಂದ್ರಕಾಂತ್ ಮೇಲಿನ ಮನಿ ಪ್ರಮುಖರಾದ ರಾಜು ಗೌಡ ಪೊಲೀಸ್ ಪಾಟೀಲ್, ರಾಚಯ್ಯಸ್ವಾಮಿ, ನೀಲಕಂಠಪ್ಪ ಪ್ರಕಾಶ್ ಸಂಗಸೆಟಿ, ಚಂದನಕೇರಿ ವಿರೇಶ್ ಕಪ್ಪರ, ಗುರುನಾಥ ಮಣ್ಣಿಗಿರಿ, ಸಿದ್ದು ಮುಗುಟಿ, ರವಿ ಸಂಗಸೇಟಿ, ಸೂಗಣ್ಣ ಸಾಹುಕಾರ, ಚಂದಕೇರಿ ಭೇಮು ಕೋಲಕುಂದಿ, ಕರಣ್ಣಪ್ಪ ಇಸಬಾ, ಸ್ಯೆಯ್ಯದ ಫೈಯಾಜ್ ಪಟೇಲ್, ಅಬ್ದುಲ್ ಲತಿಫ ಜುನೈದಿ, ಈರಣ್ಣ ಇಸಭಾ ಹಾಗು ಗ್ರಾಮದ ಪ್ರಮುಖರು ಚಾರಿಟೇಬಲ್ ಸದಸ್ಯರು ಉಪಸ್ಥಿತರಿದ್ದರು.