ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಚನ ಸಾಹಿತ್ಯವನ್ನು ಬೆಳಕಿಗೆ ತಂದ ಡಾ.ಫ.ಗು.ಹಳಕಟ್ಟಿ, ಸಾರಸ್ವತ ಲೋಕವನ್ನು ಬೆಳಗಿದ ಡಾ.ಜಯದೇವಿತಾಯಿ ಲಿಗಾಡೆ ಕನ್ನಡದ ಅನರ್ಘ್ಯ ರತ್ನಗಳು ಎಂದು ಶಿಕ್ಷಣ ಇಲಾಖೆಯ ವಿಶ್ರಾಂತ ಅಧಿಕಾರಿ ಆರ್.ವೈ.ಕೊಣ್ಣೂರ ಹೇಳಿದರು.ನಗರದ ಕಸಾಪ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಹಳಕಟ್ಟಿ ಹಾಗೂ ಜಯದೇವಿತಾಯಿ ಲಿಗಾಡೆ ಕುರಿತು ನಡೆದ ಚಿಂತನಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. ವಚನ ಸಾಹಿತ್ಯದ ತಾಡೋಲೆಗಳನ್ನು ಹುಡುಕಿ ತಂದು ವಚನಗಳನ್ನು ಮುದ್ರಿಸಿ ಸಂರಕ್ಷಣೆ ಮಾಡಿದ ಶ್ರೇಯಸ್ಸು ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ವಚನ ಸಾಹಿತ್ಯದ ಬೆಳಕಾಗಿ ಹೊರಹೊಮ್ಮಿದ ಶ್ರೇಯಸ್ಸು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.
ಜಯದೇವಿತಾಯಿ ಲಿಗಾಡೆಯವರ ಕನ್ನಡ ಸೇವೆ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ೧೯೭೪ರಲ್ಲಿ ಮಂಡ್ಯದಲ್ಲಿ ಜರುಗಿದ ೪೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟಮೊದಲ ಮಹಿಳಾ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಗುರುತಿಸಿಕೊಂಡಿರುವ ಇವರು ಸೋಲ್ಲಾಪುರ ಇದು ಕರ್ನಾಟಕಕ್ಕೆ ಸೇರಿದ್ದು ಎಂಬುದನ್ನು ಬಲವಾಗಿ ಪ್ರತಿಪಾದಿಸಿದರು. ತಾಯಿ ನುಡಿ ಭಾಷೆಯಾಗಿ, ಮಾತೃಭಾಷೆಯಾಗಿ ಕನ್ನಡದ ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.ಡಾ.ಫ.ಗು.ಹಳಕಟ್ಟಿಯವರ ಜೀವನ ಹಾಗೂ ಸಾಹಿತ್ಯದ ಕುರಿತು ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಉಪನ್ಯಾಸ ನೀಡಿದರು. ಚಿಕ್ಕಂದಿನಲ್ಲಿಯೇ ತಾಯಿ ಕಳೆದುಕೊಂಡ ಇವರು ತಂದೆಯ ಮಾರ್ಗದರ್ಶನದಲ್ಲಿ ಬೆಳೆದರು. ಉನ್ನತ ಶಿಕ್ಷಣಕ್ಕೆ ಮುಂಬೈಗೆ ಹೋದರೂ ಮರಾಠಿ ಪ್ರಭಾವಕ್ಕೆ ಒಳಗಾಗದೆ ಭಾಷೆಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮುಂದೆ ಶಿರಸಂಗಿ ಲಿಂಗರಾಜರ ಪರಿಚಯದಿಂದ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡು ವಚನ ಸಾಹಿತ್ಯದ ಸಂಗ್ರಹಕ್ಕೆ ಶ್ರಮಿಸಿದರು. ತಮ್ಮ ಸ್ವಂತ ಮನೆಯನ್ನು ಮಾರಿ ಹಿತಚಿಂತಕ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ಹಲವಾರು ಕೃತಿಗಳನ್ನು ಪ್ರಕಟಿಸಿದರು ಎಂದು ವಿವರಿಸಿದರು.
ವಿಶ್ರಾಂತ ಮುಖ್ಯೋಪಾಧ್ಯಾಯ ಇಕ್ಬಾಲ್ ಅರಳಿಮಟ್ಟಿ, ಬಸಲಿಂಗಮ್ಮ ಕುಂಬಾರ, ಸುಜಾತಾ ಪಟ್ಟಣಶೆಟ್ಟಿ, ಡಾ.ಪದ್ಮಾವತಿ ಗುಡಿ, ಸಿದ್ದಣ್ಣ ವಡಗೇರಿ ಆಗಮಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ವ್ಹಿ.ಡಿ.ಐಹೊಳ್ಳಿ, ಶಾರದಾ ಐಹೊಳ್ಳಿ, ಅಜು೯ನ ಶಿರೂರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶಾಂತಾ ವಿಭೂತಿ, ಶ್ರೀಕಾಂತ ನಾಡಗೌಡ, ಜಿ.ಎಸ್.ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಕೆ.ಎಸ್.ಹಣಮಾಣಿ, ಎನ್.ಆರ್.ಕುಲಕಣಿ೯, ಬಿ.ಎಂ.ಮಸಬಿನಾಳ, ಶಿವಾಜಿ ಮೋರೆ, ಭಾಗೀರಥಿ ಸಿಂಧೆ, ತೇಜಸ್ವಿನಿ ವಾಂಗಿ, ಎಸ್.ಎಸ್.ಮಾನೆ, ರಾಹುಲ ಚವ್ಹಾಣ, ಅನೀಲ ಹಡಿ, ಫಕ್ರುದ್ದೀನ್ ಅಲಿಅಹ್ಮದ್ ಹಿರೇಕೊಪ್ಪ, ಸದಾಶಿವ.ಐ.ಪಿ, ರಮೇಶ ಜಾಧವ, ಶಂಕ್ರೆಪ್ಪ ಬಸವಪ್ರಭು, ಡಾ.ಅರವಿಂದ ಕುಂಬಾರ, ಸಿದ್ಧನಗೌಡ ಪಾಟೀಲ, ಅಮೋಘಸಿದ್ದ ಪೂಜಾರಿ, ಎಂ.ಎಂ.ಅಂದಾನಿಮಠ, ಆರ್.ಎಂ.ವಾಲಿ, ಬಸವರಾಜ ಹಿರೇಮಠ ಇತರರು ಇದ್ದರು. ಸುನಂದಾ ಕೋರಿ ಪ್ರಾರ್ಥಿಸಿದರು. ಶೋಭಾ ಬಡಿಗೇರ ಸ್ವಾಗತಿಸಿ ಗೌರವಿಸಿದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಹಾಗೂ ಮೆಹತಾಬ ಕಾಗವಾಡ ತತ್ವಗೀತೆ ಹಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.