ಸಾರಾಂಶ
ಡಾ.ಫ.ಗು.ಹಳಕಟ್ಟಿಯವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಮನುಕುಲಕ್ಕೆ ಅರ್ಪಿಸಿದ ಮಹಾನ್ ಚೇತನ. ತಾಳೆಗರಿ, ಕೈಬರಹದಲ್ಲಿ ಇದ್ದ ವಚನ ಸಾಹಿತ್ಯ ಸಂಶೋಧಿಸಿ ಗ್ರಂಥ ರೂಪಕ್ಕೆ ತಂದುಕೊಟ್ಟ ಅವರ ಬದುಕು ನಮಗೆಲ್ಲ ಸ್ಫೂರ್ತಿಯಾಗಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಡಾ.ಫ.ಗು.ಹಳಕಟ್ಟಿಯವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಮನುಕುಲಕ್ಕೆ ಅರ್ಪಿಸಿದ ಮಹಾನ್ ಚೇತನ. ತಾಳೆಗರಿ, ಕೈಬರಹದಲ್ಲಿ ಇದ್ದ ವಚನ ಸಾಹಿತ್ಯ ಸಂಶೋಧಿಸಿ ಗ್ರಂಥ ರೂಪಕ್ಕೆ ತಂದುಕೊಟ್ಟ ಅವರ ಬದುಕು ನಮಗೆಲ್ಲ ಸ್ಫೂರ್ತಿಯಾಗಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ ಹೇಳಿದರು.ಪಟ್ಟಣದ ವಿಶ್ರಾಂತ ಶಿಕ್ಷಣಾಧಿಕಾರಿ ಎಚ್.ಎಸ್.ಹುಳಪಲ್ಲೇದ ಅವರ ನಿವಾಸದಲ್ಲಿ ಬಸವ ಕೇಂದ್ರದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಫ.ಗು. ಹಳಕಟ್ಟಿಯವರ ವಚನ ಸಾಹಿತ್ಯ ಅಧ್ಯಯನ ಮಾಡಿ ಅವರ ಜೀವನದ ಕೆಲವು ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಪ್ರಾಧ್ಯಾಪಕ ಸುರೇಶ ರಾಜನಾಳ ಮುಖ್ಯ ಅತಿಥಿಗಳಾಗಿ ಮಾತನಾಡಿ, ಫ.ಗು. ಹಳಕಟ್ಟಿ ಈ ಲೋಕದ ಮರೆಯದ ಮಾಣಿಕ್ಯ. ಅವರು ವಚನ ಸಾಹಿತ್ಯವನ್ನು ಜೀವಂತವಾಗಿಸಿದ್ದಾರೆ. ವಚನ ಸಾಹಿತ್ಯವನ್ನು ನಾವೆಲ್ಲ ನಿತ್ಯ ಜೀವನದಲ್ಲಿ ಅನುಸರಿಸಬೇಕಾಗಿದೆ ಎಂದು ಹೇಳಿದರು.ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅವರ 15 ಸಂಪುಟಗಳ ವಚನ ಸಾಹಿತ್ಯದ ಗ್ರಂಥಗಳನ್ನು ಪ್ರದರ್ಶಿಸಲಾಯಿತು. ಶ್ರೀಕಾಂತ ಗಡೇದ ಬಸವಣ್ಣನವರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್.ಎಸ್. ಹುಳಪಲ್ಲೇದ, ರಾಚಣ್ಣ ಕೆರೂರ, ಮುರುಗೇಶ ಶೇಖಾ, ಸಂಗಮೇಶ ಹುಳಪಲ್ಲೇದ, ಪುತ್ರಪ್ಪ ಬೀಳಗಿ, ಮಲ್ಲಿಕಾರ್ಜುನ ರಾಜನಾಳ, ಮಹಾಂತೇಶ ಸಿಂದಗಿ, ಚಂದ್ರಶೇಖರ ತೆಗ್ಗಿ, ನಿರ್ಮಲಾ ಬರಗುಂಡಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಬಸವರಾಜ ಇಲಾಳಶೆಟ್ಟರ, ಗೀತಾ ತಿಪ್ಪಾ, ಗಾಯಿತ್ರಿ ಕಲ್ಯಾಣಿ, ಬಸವರಾಜ ಕಂಬಾಳಿಮಠ, ಸುರೇಖಾ ಗೆದ್ದಲಮರಿ ಇದ್ದರು.