ಸಾರಾಂಶ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಸ್ವಾಮಿಗೆ ರುದ್ರಾಭಿಷೇಕ, ಎಣ್ಣೆ ಮಜ್ಜನ ಹಾಗೂ ಹಾಲರವಿ ಸೇವೆ ನಡೆಸಿ ವಿಶೇಷವಾಗಿ ಪೂಜಾ ಕಾರ್ಯಗಳ ಜೊತೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಿದ್ದೇವೆ .
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಗೊಲ್ಲರಹಳ್ಳಿಯಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆಮಾದೇಶ್ವರಸ್ವಾಮಿಗೆ ಹಾಲರವಿ ಸೇವೆ ಹಾಗೂ ಎಣ್ಣೆ ಮಜ್ಜನ ಸೇವೆಯನ್ನು ಗ್ರಾಮಸ್ಥರು, ಯಜಮಾನರು, ನಾಡಗೌಡರು ಎಲ್ಲರೂ ಸೇರಿ ನೆರವೇರಿಸಿ ವಿಶೇಷವಾಗಿ ಆಚರಿಸಿದರು.ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವರ ಮೂರ್ತಿಯನ್ನು ಶುಚಿಗೊಳಿಸಿ ರುದ್ರಾಭಿಷೇಕ, ಹಾಲರವಿ ಸೇವೆ ,ಎಣ್ಣೆಮಜ್ಜನ ಸೇವೆ ನಡೆಸಿದ ನಂತರ ವಿವಿಧ ಹೋಮ, ಹವನ ನಡೆಸಲಾಯಿತು.
ನಂತರ ಸ್ವಾಮಿಗೆ ಶಿಂಷಾ ನದಿಯಿಂದ ನೀರು ತಂದು ಅಭಿಷೇಕದ ನಂತರ ಹೂವು ಹೊಂಬಾಳೆ ಮಾಡಿಕೊಂಡು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಜಗದೀಶ್ ತಂಡದಿಂದ ವೀರಭದ್ರ ಕುಣಿತದೊಡನೆ ಮೆರವಣಿಗೆ ಮುಖಾಂತರ ಮಡಿವಾಳ ಹಾಸಿದ ಮಡಿಯ ಮೇಲೆ ದೇವರು ಹೊತ್ತ ಅರ್ಚಕರು ಹೊರಟಾಗ ಮುತ್ತೈದೆಯರು ಹಾಗೂ ಹೆಣ್ಣು ಮಕ್ಕಳು ಕಳಸ ಹೊತ್ತು ನಡೆದರು. ನಂತರ ಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.ಅರ್ಚಕ ಜಿ.ಎಂ.ಮಹಾದೇವ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಸ್ವಾಮಿಗೆ ರುದ್ರಾಭಿಷೇಕ, ಎಣ್ಣೆ ಮಜ್ಜನ ಹಾಗೂ ಹಾಲರವಿ ಸೇವೆ ನಡೆಸಿ ವಿಶೇಷವಾಗಿ ಪೂಜಾ ಕಾರ್ಯಗಳ ಜೊತೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಿದ್ದೇವೆ ಎಂದರು.
ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮದವರಿಗೆ ಹಾಗೂ ನಾಡಿನ ಜನತೆಗೆ ಯಾವುದೇ ರೋಗ ರುಜನಗಳು ಬರದಂತೆ, ಸಕಾಲಕ್ಕೆ ಮಳೆ ಯಾಗಿ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.;Resize=(128,128))
;Resize=(128,128))