ಸಾರಾಂಶ
ಹಳೆಯಂಗಡಿ ಸಿಎಸ್‌ಐ ದೇವಾಲಯದಲ್ಲಿ ಬೆಳೆ ಹಬ್ಬದ ಆರಾಧನೆ ಹಾಗೂ ಆಟೋಟ ಸ್ವರ್ಧೆನಡೆಯಿತು. ಹಳೆಯಂಗಡಿಯ ಸಿಎಸ್‌ಐ ಚರ್ಚಿನ ಸಭಾಪಾಲಕ ಅಮೃತ್ ರಾಜ್ ಖೋಡೆ ಅಧ್ಯಕ್ಷತೆ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಮಾಜಕ್ಕೆ ನಾವು ನೀಡಿದ ಕೊಡುಗೆ ನಮಗೆ ಬೇರೆ ರೀತಿಯಲ್ಲಿ ದೊರೆಯುತ್ತದೆ. ಏಕತೆಯಿಂದ ಯಶಸ್ಸು ಸಾಧ್ಯವೆಂದು ಸಿಎಸ್‌ಐ ವಿಶ್ರಾಂತ ಸಭಾಪಾಲಕ ಐಸನ್ ಎಸ್. ಪಾಲನ್ನ ಹೇಳಿದರು.ಹಳೆಯಂಗಡಿ ಸಿಎಸ್‌ಐ ದೇವಾಲಯದಲ್ಲಿ ಜರುಗಿದ ಬೆಳೆ ಹಬ್ಬದ ಆರಾಧನೆ ಹಾಗೂ ಆಟೋಟ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯಂಗಡಿಯ ಸಿಎಸ್‌ಐ ಚರ್ಚಿನ ಸಭಾಪಾಲಕ ಅಮೃತ್ ರಾಜ್ ಖೋಡೆ ಅಧ್ಯಕ್ಷತೆ ವಹಿಸಿದ್ದರು. ವಕೀಲ ಡೇನಿಯಲ್ ದೇವರಾಜ್ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಂಧ್ಯಾ ಖೋಡೆ, ಚರ್ಚಿನ ಹಿರಿಯರಾದ ರಾಹುಲ್ ಕರ್ಕಡ, ವಿಜಯ ಪ್ರಕಾಶ್ ಕರ್ಕಡ, ರೆನಿಟಾ ಕರ್ಕಡ, ಮೇರಿ ಡೇನಿಯಲ್, ಪುಷ್ಪಲತಾ ಪಾಲನ್ನ, ಸುಷ್ಮಾ ಕರ್ಕಡ, ಜೋಸ್ಲಿ ಬಂಗೇರಾ, ಡೆಲಿನ್ ನಿಶೇಲ್ ಕರ್ಕಡ, ಸುಪ್ರೀತಾ ಕರ್ಕಡ ಉಪಸ್ತಿತರಿದ್ದರು.ಚರ್ಚಿನ ಆಟೋಟ ಸ್ವರ್ಧೆಗಳ ಸಮಿತಿಯ ಪದಾಧಿಕಾರಿಗಳಾದ ಕಾರ್ಯದರ್ಶಿ ರೆಮಿ ಸ್ಯಾಮುವೆಲ್, ಖಜಾಂಚಿ ಸುಹಾನ್ ಪಾಲನ್ನ, ಡಿಯೋಲ್ ಕರ್ಕಡ ಮತ್ತಿತರರು ಇದ್ದರು. ಪಾಲನಾ ಸಮಿತಿಯ ಕಾರ್ಯದರ್ಶಿ ಸುಷ್ಮಾ ಕರ್ಕಡ ಕಾರ್ಯಕ್ರಮ ನಿರೂಪಿಸಿದರು. ರೆಮಿ ಸ್ವಾಗತಿಸಿದರು. ಸುಹಾನ್ ವಂದಿಸಿದರು.